Wednesday, September 16, 2026
Wednesday, September 16, 2026

K. S. Eshwarappa ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಈಶ್ವರಪ್ಪ ನೀಡಿದ ದೂರು ಆಧರಿಸಿ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು

Date:

K. S. Eshwarappa ಮಾಜಿ ಡಿಸಿಎಂ ಈಶ್ವರಪ್ಪ ಮೇ 7 ರಂದು ನೀಡಿದ್ದ ದೂರನ್ನು ಪೊಲೀಸ್ ಇಲಾಖೆ ಎಫ್ಐಆರ್ ದಾಖಲಿಸಿದೆ. ಲೋಕಸಭಾ ಚುನಾವಣೆಯ ಮತದಾನದ ದಿನದಂದು ಬೆಳಿಗ್ಗೆನೆ ಬಿಜೆಪಿ ಅಭ್ಯರ್ಥಿ ರಾಘವೇಂದ್ರರ ಪರ ಈಶ್ವರಪ್ಪನವರು ಮತಯಾಚಿಸಿದ ವಿಡಿಯೋವೊಂದು ವೈರಲ್ ಆಗಿತ್ತು.
ವಿಡಿಯೋ ವೈರಲ್ ಆದ ಬೆನ್ನಲ್ಲೇ, ಈಶ್ವರಪ್ಪನವರು ಕೆಂಡಮಂಡಲರಾಗಿದ್ದರು,‌ ಇಂತಹ ವಿಡಿಯೋವನ್ನು ರಾಘವೇಂದ್ರರಿಂದಲೇ ನಡೆದಿದ್ದು ಎಂದು ಆರೋಪಿಸಿದ್ದರು. ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಯಾಗಿದೆ. ಈ ಉಲ್ಲಂಘನೆಯ ಬೆನ್ನಲ್ಲೇ ಅಂದು ಮಧ್ಯಾಹ್ನವೇ ಈಶ್ವರಪ್ಪನವರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಅಂದು ಸಂಜೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ.ಅವರನ್ನು ಭೇಟಿಯಾಗಿ ದೂರು ದಾಖಲಿಸಿದ್ದರು‌. ರಾಘವೇಂದ್ರ ಪರ ಮತಯಾಚಿಸಿದ ವಿಡಿಯೋವನ್ನು ಹರಿಬಿಟ್ಟವರ ಮೂಲ ಪರಿಶೀಲಿಸಿ ತಪ್ಪಿತಸ್ಥರಿಗೆ ಕಾನೂನು ಕ್ರಮ ಜರುಗಿಸುವಂತೆ ಮನವಿ ಮತ್ತು ವಿಡಿಯೋ, ಪೆನ್ ಡ್ರೈವ್ ಮೂಲಕ ದಾಖಲೆ ನೀಡಿದ್ದರು.
K. S. Eshwarappa ಈ ವಿಡಿಯೋ ವೈರಲ್ ಕುರಿತು ಈಶ್ವರಪ್ಪನವರು ಒಂದು ವಾರದ ಒಳಗೆ ಕ್ರಮ ಜರುಗಿಸಬೇಕು. ಅದರಲ್ಲೂ ಸಂಸದ ರಾಘವೇಂದ್ರರ ವಿರುದ್ಧವೇ ಕ್ರಮ ಜರುಗಿಸಬೇಕು ಎಂದು ಸುದ್ದಿಗೋಷ್ಠಿ ಮೂಲಕ ಆಗ್ರಹಿಸಿದ್ದರು‌. ಇದೇ ವೇಳೆ ಈಶ್ವರಪ್ಪನವರು ರಾಘವೇಂದ್ರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಆಗ್ರಹಿಸಿದ್ದರು.
ಆದರೆ ರಾಘವೇಂದ್ರರ ವಿರುದ್ಧ ಎಫ್ಐಆರ್ ದಾಖಲಾಗಿಲ್ಲ . ಬದಲಿಗೆ ಅಪರಿಚಿತ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...