Sunday, September 27, 2026
Sunday, September 27, 2026

Dr. Kiran ಬೈಸಿಕಲ್ ನಲ್ಲಿ ಮನೆ ಭೇಟಿಗೆ ಬರುತ್ತಿದ್ದ ಜನಪ್ರಿಯ “ಕಿರಣ್ ಡಾಕ್ಟರ್” ಇನ್ನಿಲ್ಲ

Date:

Dr. Kiran ರಿಪ್ಪನ್ ಪೇಟೆ ಪಟ್ಟಣದಲ್ಲಿ ನಾಲ್ಕು ದಶಕಗಳ ಕಾಲ( ಕಿರಣ್ ಕ್ಲಿನಿಕ್ ) ಮೂಲಕ ವೈದ್ಯಕೀಯ ಸೇವೆ ಸಲ್ಲಿಸಿದ ಡಾಕ್ಟರ್ ಟಿ. ಆರ್. ಮಂಜುನಾಥ್ ರಾವ್ ಯಾನೆ
ಕಿರಣ್ ಡಾಕ್ಟರ್ (84) ಅವರು ಬುಧವಾರ ತೀರ್ಥಹಳ್ಳಿಯ ಪುತ್ರನ ಮನೆಯಲ್ಲಿ ಅಲ್ಪ ಕಾಲದ ಅನಾರೋಗ್ಯ
ದಿಂದ ನಿಧನರಾದರು.ಮೂಲತಃ ಚಿಕ್ಕ ಮಗಳೂರು ಜಿಲ್ಲೆ. ಬಾಳೆಹೊನ್ನೂರಿನವರಾದ ಇವರು ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು 1972 ರಲ್ಲಿ ರಿಪ್ಪನ್ ಪೇಟೆಯಲ್ಲಿ ಖಾಸಗಿ ಕ್ಲಿನಿಕ್ ತೆರೆದು ವೈದ್ಯಕೀಯ ವೃತ್ತಿ ಆರಂಭಿಸಿದರು. ಬೆಳ್ಳೂರು, ಮಸ್ಕಾನಿ, ಬಸವಾ ಪುರ, ಅರಸಾಳು, ಕಲ್ಲೂರು, ಜಂಬಳ್ಳಿ, ಜೇನಿ, ಹರತಾಳು ಸೇರಿದಂತೆ ಸುತ್ತ, ಮುತ್ತಲಿನ ಗ್ರಾಮೀಣ ಭಾಗದಲ್ಲಿನ ಜನರಿಗೆ ಬೈಸಿಕಲ್ ನಲ್ಲಿ ತೆರಳಿ ಕೇವಲ ಎರಡು ರೂ ನಲ್ಲಿ ಚುಚ್ಚು ಮದ್ದು ನೀಡುವ ಮೂಲಕ ಇವರು ಕಿರಣ್ ಡಾಕ್ಟರ್ ಎಂದು
ಪ್ರಖ್ಯಾತಿ ಹೊಂದಿದ್ದರು.
Dr. Kiran ನಂತರ ಇವರ ಮಗ ಗಣೇಶ್ ನಾಯಕ್ ರವರು ತೀರ್ಥಹಳ್ಳಿ ಯಲ್ಲಿ ಕಿರಣ್ ಹೆಲ್ತ್ ಕೇರ್ ಎಂಬ ನರ್ಸಿಂಗ್ ಹೋಂ ಪ್ರಾರಂಭ ಮಾಡಿದ ತರುವಾಯು, ಇವರ ವೈದ್ಯಕೀಯ ಸೇವೆ ಇಂದ ನಿವೃತ್ತಿ ಪಡೆದು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದು ವಿಶ್ರಾಂತಿ ಜೀವನ ನಡೆಸುತ್ತಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...