Thursday, February 5, 2026
Thursday, February 5, 2026

Shivamogga JNNCE ಶಿವಮೊಗ್ಗ ಜೆಎನ್ ಎನ್ ಸಿಇ & ಧಾರವಾಡ ಐಐಟಿ ನಡುವೆ ಶೈಕ್ಷಣಿಕ ಒಡಂಬಡಿಕೆ

Date:

Shivamogga JNNCE ಶಿವಮೊಗ್ಗ ನಗರದ ಜೆಎನ್ ಎನ್ ಸಿಇ ಹಾಗೂ ಧಾರವಾಡ ಐಐಟಿ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಅಭಿವೃದ್ಧಿ ಗಾಗಿ ಒಡಂಬಡಿಕೆ ಮಾಡಿಕೊಂಡಿವೆ.
ಜೆಎನ್ ಎನ್ ಸಿ ಇ ಕಾಲೇಜ್ ನ ಪ್ರಾಂಶುಪಾಲ ಡಾ.ವೈ ವಿಜಯಕುಮಾರ್, ಧಾರವಾಡ ದ ಐಐಟಿಯ ಸಂದರ್ಶಕ ಪ್ರಾಧ್ಯಾಪಕ ಎಲ್ ಕೆ ಶ್ರೀಪತಿ, ಸಿವಿಲ್ ವಿಭಾಗದ ಮುಖ್ಯಸ್ಥ ಕಾರ್ತಿಕ್ ಹಾಗೂ ಸಹಪ್ರಾಧ್ಯಾಪಕ ಡಾ.ನೀರಜ್ ಅವರ ನಿಯೋಗವು ಧಾರವಾಡ ಐಐಟಿ ಗೆ ಭೇಟಿನೀಡಿ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ಎರಡು ಪ್ರತಿಷ್ಠಿತ ಸಂಸ್ಥೆಗಳೊಡನೆ ಒಡಂಬಡಿಕೆ ಪ್ರಸ್ತಾಪಿಸಿದರು.
Shivamogga JNNCE ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಧಾರವಾಡ ಐಐಟಿ ಯ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್ ದೇಸಾಯಿ ಮಾತನಾಡಿ, ಮುಂದಿನ ದಿನಗಳಲ್ಲಿ ಈ ಎರಡೂ ಸಂಸ್ಥೆ ಗಳು, ತಾಂತ್ರಿಕ ಕ್ಷೇತ್ರದಲ್ಲಿ ಸಂಶೋದನೆ , ಅಧ್ಯಾಪಕರೊಂದಿಗೆ ಜ್ಞಾನದ ವಿನಿಮಯ, ಇಂಟರ್ನಶಿಪ್ ಪ್ರಾಜೆಕ್ಟ್ ವಿದ್ಯಾರ್ಥಿಗಳೊಂದಿಗಿನ ಸಂವಾದ ಚರ್ಚೆ, ಮುಂತಾದ ವಿಷಯಗಳ ಬಗ್ಗೆ ಪರಸ್ಪರ ಸಹಕಾರ ನೀಡುವ ಬಗ್ಗೆ ತಮ್ಮ ಸಹಮತ ವ್ಯಕ್ತಪಡಿಸಿ ಈ ಒಡಂಬಡಿಕೆ ಯಿಂದ ಎರಡು ಸಂಸ್ಥೆ ಗಳ ಶೈಕ್ಷಣಿಕ ಪ್ರಗತಿ ಗೆ ಸಹಕಾರಿ ಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜೆ. ಎನ್ ಎನ್ ಸಿ ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ. ಕಾರ್ತಿಕ್ ಮತ್ತು ಸಹಪ್ರಾಧ್ಯಾಪಕ ಡಾ. ನೀರಜ್ ಸಂಯೋಜರಾಗಿದ್ದರೆ ಡಾ. ಶಶಾಂಕ್ ಮತ್ತೂರ್ ಐಐಟಿ ಧಾರವಾಡ ಸಂಸ್ಥೆ ಯ ಸಂಯೋಜಕರಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...