Sunday, June 22, 2025
Sunday, June 22, 2025

Kumar Bangarappa ನಿಮ್ಮ ನಟನೆ,ಡಾನ್ಸ್ ಎಲ್ಲವೂ ಸಿನಿಮಾರಂಗದಲ್ಲಿರಲಿ ರಾಜಕಾರಣದೊಂದಿಗೆ ಬೆರೆಸ ಬೇಡಿ- ಕುಮಾರ್ ಬಂಗಾರಪ್ಪ

Date:

Kumar Bangarappa ರಾಜಕಾರಣದಲ್ಲಿ ಡ್ಯಾನ್ಸ್ ಬೇಡ ಎಂದು ಕಾಂಗ್ರೆಸ್ ನ ಅಭ್ಯರ್ಥಿ ಗೀತರವರ ಪತಿ ಹಾಗೂ ನಟ ಶಿವರಾಜ್ ಕುಮಾರ್ ಗೆ ಸಲಹೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ‌ಮಾತನಾಡಿದ ಅವರು,
ಗೀತರಿಗೆ ಆಶೀರ್ವಾದ ಮಾಡಿದರೆ ಐದು ವರ್ಷ ನಿಮ್ಮೊಂದಿಗೆ ಇದ್ದು ಡ್ಯಾನ್ಸು, ಹಾಡು ಎಲ್ಲಾ ಮಾಡುವೆ ಎಂದು ಪ್ರಚಾರದಲ್ಲಿ ನಟ ಶಿವರಾಜ್ ಕುಮಾರ್ ಹೇಳ್ತಾ ಬಂದಿದ್ದಾರೆ. ನಿಮ್ಮ ನಟನೆ, ಡ್ಯಾನ್ಸ್ ಎಲ್ಲವೂ ಸಿನಿಮಾ ರಂಗದಲ್ಲಿ ಇರಲಿ ರಾಜಕಾರಣದೊಂದಿಗೆ ಬೆರಸಬೇಡಿ ಎಂದು ಸಲಹೆ ನೀಡಿದರು.
10 ವರ್ಷದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಗೀತರವರನ್ನ ಕಣಕ್ಕಿಳಿಸಲಾಗಿತ್ತು. ಆದರೆ ತಮ್ಮ‌ ಮತಗಳನ್ನ ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಕ. 2013 ರಲ್ಲಿ ಇವರುಗಳು ಸ್ವಾರ್ಥ ರಾಜಕಾರಣ ನಡೆಸಿರುವುದು ಅಚ್ಚಹಸಿರಾಗಿದೆ. ನಮ್ಮ ತಾಯಿ ಶಂಕುತಲಾ ದೇವಿಯನ್ನ 2013 ರಲ್ಲಿ ಕೀಮೋ ಥೆರಪಿ ಮಾಡಿಸಿಕೊಂಡು ಅಂಬ್ಯುಲೆನ್ಸ್ ಮೂಲಕ‌ ಭದ್ರಾವತಿಗೆ ಕರೆತಂದು ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಇದು ಸ್ವಾರ್ಥ ಅಲ್ಲವೇ ಎಂದು ದೂರಿದರು.
ಬಗುರ್ ಹುಕುಂ ವಿಚಾರದಲ್ಲಿ ತೀನಾ‌ಶ್ರೀನಿವಾಸ್ ನನ್ನ ವಿರುದ್ಧ ಆರೋಪಿಸಿದ್ದಾರೆ.‌ ನ್ಯಾಯಾಲಯದ ಪ್ರಕರಣವನ್ನ ನಾನು ತೀರ್ಮಾನಿಸಲಾಗುತ್ತದಾ? ತೀನಾ ಅವರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದರು.

Kumar Bangarappa ಚಿತ್ರರಂಗ ನನ್ನ‌ಹಿಂದೆ ಎಂದು ಶಿವರಾಜ್ ಕುಮಾರ್ ಹೇಳಿಕೊಂಡಿದ್ದಾರೆ.‌ ಇದು ಸತ್ಯಕ್ಕೆ ದೂರವಾದ ಮಾತು ಕಳೆದ ಬಾರಿ ದರ್ಶನ್ ಸುಮಲತಾರ ಪರ ಪ್ರಚಾರ ಮಾಡಿದ್ದರು‌ಈ ಬಾರಿ ಕಾಂಗ್ರೆಸ್ ನಲ್ಲಿಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಎಲ್ಲರೂ ಶಿವರಾಜ್ ಕುಮಾರ್ ಬೆನ್ನ‌ಹಿಂದೆ ಇಲ್ಲ ಎಂದರು.

ಶಿವರಾಜ್ ಕುಮಾರ್ ತನ್ನ ಪತ್ನಿಯನ್ನಗೆಲ್ಲಿಸಲು ಬಂದಿರುವುದಾಗಿ ಹೇಳ್ತಾರೆ. ರಾಜಕಾರಣ ಹೆಚ್ಚು ಗೊತ್ತಿಲ್ಲ ಎನ್ನುತ್ತಾರೆ.‌ ಸರಿ ಅಭ್ಯರ್ಥಿಗೆ ಕೇಳಿದರೆ ನನಗೂ ಗೊತ್ತಿಲ್ಲ ಎನ್ನುತ್ತಾರೆ ಮರು ಪ್ರಶ್ನಿಸಿದರೆ ನಾನು ಹೇಳುವಷ್ಟು ಬರೆದುಕೊಳ್ಳಿ ಎಂದು ತಾಕೀತು ಮಾಡ್ತಾರೆ. ದಬ್ವಾಳಿಕೆಯ ರಾಜಕಾರಣವನ್ನ ಸಹಿಸಲು ಆಗೊಲ್ಲ ಎಂದು ಆಗ್ರಹಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ಸಮುದಾಯಗಳ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸುವ ಉದ್ದೇಶವಿದೆ – ಮಧು ಬಂಗಾರಪ್ಪ

Madhu Bangarappa ರಾಜ್ಯದಲ್ಲಿನ ವಿವಿಧ ಜಾತಿ ಜನಾಂಗಗಳ, ಅದರಲ್ಲೂ ಮುಖ್ಯವಾಗಿ ಹಿಂದುಳಿದ...

DK Shivakumar ಎತ್ತಿನಹೊಳೆ ಯೋಜನೆ ಕಾಮಗಾರಿ‌ ಪರಿಶೀಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

DK Shivakumar ಎತ್ತಿನ ಹೊಳೆ ಯೋಜನೆಯ ಮೂಲಕ ಕುಡಿಯುವ ನೀರನ್ನು ಬರಪೀಡಿತ...

Royal English Medium School ರಾಯಲ್ ಡೈಮಂಡ್ ಶಾಲೆಯಲ್ಲಿ‌ ನಿತ್ಯ ಯೋಗ ಮಾಡುವ ಸಂಕಲ್ಪ ಸ್ವೀಕಾರ

Royal English Medium School ಶಿವಮೊಗ್ಗ ನಗರದ ಹೆಸರಾಂತ ವಿದ್ಯಾಸಂಸ್ಥೆಯಲ್ಲಿ ಒಂದಾದ...