Saturday, June 21, 2025
Saturday, June 21, 2025

Lok Sabha Election ಶಾಂತಿಯುತ ಮತದಾನಕ್ಕೆ ಎಲ್ಲಾ ಕ್ರಮ- ಪೂನಂ.ಚೆಕ್ ಪೋಸ್ಟ್ ಗಳಲ್ಲಿ ಜಾಗರೂಕ ಪರಿಶೀಲನೆ- ಮೀನಾಕ್ಷಿ ಸಿಂಗ್

Date:

Lok Sabha Election ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸುಗಮ ಮತ್ತು ಶಾಂತಿಯುತ ಮತದಾನ ನಡೆಯಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಚುನಾವಣಾಧಿಕಾರಿಗಳು ಕೈಗೊಳ್ಳಬೇಕೆಂದು 14-ಶಿವಮೊಗ್ಗ ಲೋಕಸಭಾ ಕ್ಷೇತ್ರದ ವೀಕ್ಷಕರಾದ ಪೂನಂ ಅವರು ತಿಳಿಸಿದರು.

ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏ.22 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಮತಕ್ಷೇತ್ರಗಳ ಎಆರ್‍ಓ ಮತ್ತು ಇತರೆ ಚುನಾವಣಾ ನಿಯೋಜಿತ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

14-ಲೋಕಸಭಾ ಕ್ಷೇತ್ರ ಕ್ಕೆ ಸಂಬಂಧಿಸಿದಂತೆ 111-ಶಿವಮೊಗ್ಗ ಗ್ರಾಮಾಂತರ, 112-ಭದ್ರಾವತಿ, 113-ಶಿವಮೊಗ್ಗ, 114-ತೀರ್ಥಹಳ್ಳಿ, 115-ಶಿಕಾರಿಪುರ, 116ಸೊರಬ, 117-ಸಾಗರ ಮತ್ತು 118 ಬೈಂದೂರು ಮತಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು, ಅಬಕಾರಿ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಹಾಗೂ ಚುನಾವಣೆಗೆ ಸಂಬಂಧಿಸಿದ ವಿವಿಧ ಸಮಿತಿ, ತಂಡಗಳ ನೋಡಲ್ ಅಧಿಕಾರಿಗಳಿಂದ ಅವರ ಕಾರ್ಯಕ್ಷೇತ್ರದ ಕುರಿತು ಸಭೆಯಲ್ಲಿ ಮಾಹಿತಿ ಪಡೆದುಕೊಂಡ ಅವರು ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಮತ್ತು ಇತರೆ ತಂಡಗಳ ನೋಡಲ್ ಅಧಿಕಾರಿಗಳು ಸುಗಮವಾಗಿ ಮತದಾನ ಆಗುವ ನಿಟ್ಟಿನಲ್ಲಿ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚನೆ ನೀಡಿದರು.

Lok Sabha Election ಪ್ರತಿ ಸಹಾಯಕ ಚುನಾವಣಾಧಿಕಾರಿಗಳು ತಮ್ಮ ಮತಕ್ಷೇತ್ರಗಳಿಗೆ ಖುದ್ದಾಗಿ ಭೇಟಿ ನೀಡಿ ಮತ ಕ್ಷೇತ್ರಗಳ ಸೂಕ್ಷ್ಮತೆಯನ್ನು ಅರಿತುಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿ ಚೆಕ್‍ಪೋಸ್ಟ್‍ಗಳಲ್ಲಿ ಎಚ್ಚರಿಕೆಯಿಂದ ಪರಿಶೀಲನೆ/ತಪಾಸಣೆ ಕೈಗೊಳ್ಳಬೇಕು.

ಪ್ರತಿ ಮನೆ ಮನೆಗಳಿಗೆ ತೆರಳಿ ಮತದಾರರ ಮಾಹಿತಿ ಸ್ಲಿಪ್‍ಗಳನ್ನು ವಿತರಿಸಬೇಕು. ವಿಶೇಷವಾಗಿ ದೂರದ ಹಳ್ಳಿ/ಪ್ರದೇಶಗಳಲ್ಲಿ ಸಮರ್ಪಕವಾಗಿ ವಿತರಣೆ ಮಾಡಬೇಕು. ಮತದಾರರ ಮಾಹಿತಿ ಸ್ಲಿಪ್ ವಿತರಣೆ ವೇಳೆ ಮತದಾರರ ಬೂತ್ ಮತ್ತು ಇತರೆ ಏನಾದರೂ ಸಮಸ್ಯೆಗಳು ಕಂಡು ಬಂದಲ್ಲಿ ಶೀಘ್ರವಾಗಿ ಇತ್ಯರ್ಥಪಡಿಸಬೇಕು.

ಮತದಾನಕ್ಕೆ ಸಂಬಂಧಿಸಿದಂತೆ ಇವಿಎಂ, ಅಣಕು ಮತದಾನ, ಇವಿಎಂ ಡಾಟಾ, ಬ್ಯಾಟರಿ, ಯೂಸರ್ ಬಟನ್ ಬಳಕೆ ಸೇರಿದಂತೆ ಎಲ್ಲ ಮಾಹಿತಿ ಎಸ್‍ಓಪಿ ಯಲ್ಲಿದ್ದು ಸಂಬಂಧಿಸಿದ ಅಧಿಕಾರಿಗಳು ಎಸ್‍ಓಪಿ ಯನ್ನು ಸಮರ್ಪಕವಾಗಿ ಓದಿಕೊಳ್ಳಬೇಕೆಂದು ಸೂಚನೆ ನೀಡಿದ ಅವರು ಎಲ್ಲ ಮತಕ್ಷೇತ್ರಗಳಲ್ಲಿ ಅಧಿಕಾರಿಗಳ ರಿಜಿಸ್ಟರ್ ಸೇರಿದಂತೆ ಇತರೆ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದರು.

ನಾನು ಭದ್ರಾವತಿ ಮತಕ್ಷೇತ್ರದಲ್ಲಿ ಸ್ಟ್ರಾಂಗ್ ರೂಂ, ವಲ್ನರಬಲ್, ಶ್ಯಾಡೋ ಮತಗಟ್ಟೆಗಳನ್ನು ಈಗಾಗಲೇ ಪರಿಶೀಲಿಸಿದ್ದು, ಇನ್ನುಳಿದ ಮತಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದ ಅವರು ಪ್ರತಿ ಮತಕ್ಷೇತ್ರಗಳ ಮತಗಟ್ಟೆಗಳು, ಮತದಾರರ ಪಟ್ಟಿ, ಕ್ರಿಟಿಕಲ್, ವಲ್ನರಬಲ್, ಪಿಡಬ್ಲ್ಯುಡಿ, ಸಖಿ, ಯುವ ಮತದಾರರ ಮತಗಟ್ಟೆಗಳ ಮಾಹಿತಿ, ಚೆಕ್‍ಪೋಸ್ಟ್, ವಶಕ್ಕೆ ಪಡೆಯಲಾದ ಅಕ್ರಮ ಹಣ, ಮದ್ಯದ ವಿವರ, ದಾಖಲಿಸಲಾದ ಪ್ರಕರಣಗಳು, ಅಧಿಕಾರಿ/ಸಿಬ್ಬಂದಿಗಳಿಗೆ ನೀಡಲಾದ ತರಬೇತಿಗಳ ಕುರಿತು ಮಾಹಿತಿ ಪಡೆದುಕೊಂಡು ಸೂಕ್ತ ಸಲಹೆ, ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.

ವೆಚ್ಚ ವೀಕ್ಷಕರಾದ ಮೀನಾಕ್ಷಿ ಸಿಂಗ್ ಮಾತನಾಡಿ, ಎಲ್ಲ ಚೆಕ್‍ಪೋಸ್ಟ್‍ಗಳಲ್ಲಿ ಜಾಗರೂಕತೆಯಿಂದ ಪರಿಶೀಲನೆ ನಡೆಸಬೇಕು. ಯಾವುದಾದರೂ ಚೆಕ್‍ಪೋಸ್ಟ್‍ಗೆ ಹೆಚ್ಚುವರಿ ಅಧಿಕಾರಿ, ಸಿಬ್ಬಂದಿಗಳ ಅವಶ್ಯಕತೆ ಇದ್ದಲ್ಲಿ ತಿಳಿಸಬೇಕು ಎಂದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಎಲ್ಲ ಸಹಾಯಕ ಚುನಾವಣಾಧಿಕಾರಿಗಳು, ಎಫ್‍ಎಸ್‍ಟಿ, ಎಸ್‍ಎಸ್‍ಟಿ, ಇತರೆ ತಂಡಗಳು ಮತ್ತು ಸಮಿತಿಗಳ ನೋಡಲ್ ಅಧಿಕಾರಿಗಳು ಸಮರ್ಪಕವಾಗಿ ಚುನಾವಣಾ ಕರ್ತವ್ಯವನ್ನು ನಿರ್ವಹಿಸಬೇಕು. ಸುಗಮ ಮತ್ತು ಶಾಂತಿಯುತ ಚುನಾವಣೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಎಸ್‍ಪಿ ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಎಸಿಗಳಾದ ಸತ್ಯನಾರಾಯಣ, ಯತೀಶ್, ಸಹಾಯಕ ಚುನಾವಣಾಧಿಕಾರಿಗಳು, ಚುನಾವಣಾ ನಿಯೋಜಿತ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಮಕ್ಕಳಿಗೆ ಜಾನಪದದ ಅರಿವು ಮೂಡಿಸುವುದು ಅವಶ್ಯ: ಕವಿತಾ ಸುಧೀಂದ್ರ

ಮಕ್ಕಳಲ್ಲಿ ಬಾಲ್ಯದಿಂದಲೇ ಜಾನಪದ ಸಂಸ್ಕೃತಿಯ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದು...

Shivamogga District Minority Welfare Department ವಿದ್ಯಾರ್ಥಿನಿಲಯಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ, ಅವಧಿ ವಿಸ್ತರಣೆ

Shivamogga District Minority Welfare Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ...

ರಾಜ್ಯ ಮಟ್ಟದ ಅಂಬೆಗಾಲು – 6 ಕಿರು ಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಶಿವಮೊಗ್ಗ ನಗರದ ಸಿನಿಮೊಗೆ - ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ...