Thursday, June 18, 2026
Thursday, June 18, 2026

Anavatti Police ಚಾಲಕನ ಚಾಕಚಕ್ಯತೆ, ಬಸ್ ಕೆರೆಗೆ ಬೀಳದೇ ಪ್ರಯಾಣಿಕರು ಪಾರು

Date:

Anavatti Police ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಕೆರೆ ಕಂದಕಕ್ಕೆ ಇಳಿದ ಘಟನೆ ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಸಮೀಪ ಕೊರಕೋಡು ಕ್ರಾಸ್ ಬಳಿ ಸಂಭವಿಸಿದೆ.

ಭಾನುವಾರ ತಾಲೂಕಿನ ಆನವಟ್ಟಿಯಿಂದ ಸೊರಬ ಮಾರ್ಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್‌ನ ಚಾಲಕನ ನಿಯಂತ್ರಣ ತಪ್ಪಿದೆ. ಈ ಸಂದರ್ಭದಲ್ಲಿ ಪ್ರಯಾಣಿಕರು ಆತಂಕಗೊಂಡು ಕೂಗಾಡಿದ್ದಾರೆ. ಇನ್ನೇನು ಬಸ್ ಕೆರೆಯ ಕಂದಕಕ್ಕೆ ಉರುಳಿತು ಎನ್ನುವಷ್ಟರಲ್ಲಿ ಕೆರೆ ಏರಿ ಪಕ್ಕದ ತಡೆ ಕಲ್ಲು ಕಂಬಕ್ಕೆ ಚಕ್ರ ಸಿಲುಕಿ ಬಸ್‌ನ ವೇಗವನ್ನು ನಿಯಂತ್ರಿಸುವ ಮೂಲಕ ಪಲ್ಟಿ ಆಗದೇ ಸುರಕ್ಷಿತವಾಗಿ ಕೆರೆ ಕಂದಕಕ್ಕೆ ಇಳಿದಿದೆ.

Anavatti Police ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ೫೦ ಜನರು ಸುರಕ್ಷಿತವಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿರುವ ಪ್ರಯಾಣಿಕರನ್ನು ಸೊರಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...