Shivamogga Police ಶಿವಮೊಗ್ಗ ನಗರದ ಟೆಂಪೋ ಸ್ಟ್ಯಾಂಡ್ ಬಳಿ ಸಂಭವಿಸಿದ ಅಪಘಾತ ಸಂಬಂಧ ಕೆಎಸ್ಸಾರ್ಟಿಸಿ ಬಸ್ ಡ್ರೈವರ್‌ನನ್ನು ಅಪಹರಿಸಿ ಅಪರಿಚಿತ ಸ್ಥಳಕ್ಕೆ ಕರೆದೊಯ್ದು ಹಲ್ಲೆ ಮಾಡಿದ ಘಟನೆ ವರದಿಯಾಗಿದೆ.
ಮೆಗ್ಗಾನ್ ಆಸ್ಪತ್ರೆಯ ಗೇಟ್ ಬಳಿ ಡ್ರೈವರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರ ಬಗ್ಗೆ ಸ್ವತಃ ಗಾಯಾಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಮೂರು ದಿನದ ಹಿಂದೆ ತಡರಾತ್ರಿ 2:40ರ ವೇಳೆ ಧರ್ಮಸ್ಥಳ-ಸಂಡೂರು ಬಸ್ ಟೆಂಪೋ ಸ್ಟ್ಯಾಂಡ್ ಬಳಿ ಬರುವಾಗ ಜೆ ಸಿ ನಗರ ಕ್ರಾಸ್‌ನಿಂದ ಬೈಕ್ ತಿರುಗಿಸಿಕೊಂಡು ಮೇನ್ ರೋಡ್‌ಗೆ ಬಂದ ಇಬ್ಬರು ಬಸ್‌ಗೆ ಡಿಕ್ಕಿ ಹೊಡೆದು ಬಿದ್ದಿದ್ದರು.
ಈ ವೇಳೆ ಬಸ್‌ನಿಂದ ಕೆಳಕ್ಕೆ ಇಳಿದ ಡ್ರೈವರ್‌ನೊಂದಿಗೆ ಜಗಳವಾಡಿದ ಯುವಕರು ಬಸ್ ಮುಂದಕ್ಕೆ ಬಿಡಲು ಅವಕಾಶ ಕೊಡಲಿಲ್ಲ. ಇದರಿಂದ ಕೆಎಸ್‌ಆರ್‌ಟಿಸಿ ಡಿಪೋಗೆ ಮಾಹಿತಿ ನೀಡಲು ಅಲ್ಲಿಂದ ಚಾಲಕ ನಡೆದುಕೊಂಡು ಹೋಗುವಾಗ ಸ್ಕೂಟಿಯಲ್ಲಿ ಬಂದ ಆರೋಪಿಗಳು ಯೂನಿಫಾರ್ಮ್ನಲ್ಲಿದ್ದ ಡ್ರೈವರ್‌ನನ್ನು ಕೂಡ್ರಿಸಿಕೊಂಡು ಅಪರಿಚಿತ ಸ್ಥಳಕ್ಕೆ ಕರೆದೊಯ್ದಿದ್ದರು.
Shivamogga Police ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಜೀವ ಭಯದಿಂದ ಡ್ರೈವರ್ ನಾನಲ್ಲ ಎಂದು ಹೇಳಿದಾಗ, ಆರೋಪಿಗಳು ಆತನನ್ನು ಮೆಗ್ಗಾನ್ ಆಸ್ಪತ್ರೆ ಗೇಟ್ ಬಳಿ ಕರೆತಂದು ಬಿಟ್ಟಿದ್ದರು. ಅಷ್ಟರಲ್ಲಿ ಆಗಿದ್ದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ ಮಾಹಿತಿ ಹೊರಬಿದ್ದಿತ್ತು.
ಅಲ್ಲಿದ್ದ ಗುಂಪು ಇನ್ನೊಬ್ಬ ಡ್ರೈವರ್ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲು ಮುಂದಾಗಿದೆ. ಮೆಗ್ಗಾನ್ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್ಗಳು ಗಾಯಾಳು ಡ್ರೈವರ್‌ನನ್ನು ಗುಂಪಿನಿಂದ ಬಿಡಿಸಿ ಅಲ್ಲಿಯೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಪೆಟ್ಟಿನಿಂದ ನರಳುತ್ತಿದ್ದ ಕೊಪ್ಪಳ ಮೂಲದ ಡ್ರೈವರ್‌ನಿಂದ ಹೇಳಿಕೆ ಪಡೆದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವತ್ತು ಮಂದಿಯನ್ನು ಆರೋಪಿಯನ್ನಾಗಿಸಿ ಪ್ರಕರಣ ದಾಖಲಿಸಲಾಗಿದೆ.
