Sitaram Mandir Trust ಜಯನಗರ ಶ್ರೀ ಸೀತಾರಾಮ ಮಂದಿರ ಟ್ರಸ್ಟ್ ನಿಂದ ಶ್ರೀ ರಾಮಮಂದಿರದಲ್ಲಿ 61ನೇ ಸೀತಾ ಕಲ್ಯಾಣೋತ್ಸವ ಪಟ್ಟಾಭಿಷೇಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏ. 09ರಿಂದ ಏ. 21ರ ಭಾನುವಾರದವರೆಗೆ ಪ್ರತಿದಿನ ಬೆಳಿಗ್ಗೆ ಅರುಣ ಪಾರಾಯಣ, ರಾಮಾಯಣ ಪಾರಾಯಣ, ಲಕ್ಷ ವಿಷ್ಟು ಸಹಸ್ರನಾಮ ಹಾಗೂ ಸಂಜೆಯ ವೇಳೆಗೆ ಉತ್ಸವ ರಾಮರಿಗೆ ರಾಮಾಯಣದ ಅಲಂಕಾರ ನಡೆಯಲಿದೆ.
ಏ. 9ರಂದು ಉತ್ಸವ ರಾಮರಿಗೆ ಅಭಿಷೇಕ, 17 ಶ್ರೀರಾಮ ನವಮಿ, ಮಾರುತಿ ಹೋಮ, 18 ಲಕ್ಷನರಸಿಂಹ ಮೂಲ ಮಂತ್ರ ಹೋಮ, ರಾತ್ರಿ ಸೀತಾಕಲ್ಯಾಣೋತ್ಸವ 19 ರುದ್ರ ಹೋಮ, ರಾತ್ರಿ ರಾಜಬೀದಿ ಉತ್ಸವ, 20ರಾಮತಾರಕ ಹೋಮ, ಶ್ರೀರಾಮಚಂದ್ರ ಪಟ್ಟಾಭಿಷೇಕ ಹಾಗೂ 21ರಂದು ಶಯನೋತ್ಸವ ಅಲಂಕಾರವಿರುತ್ತದೆ.
Sitaram Mandir Trust ಸಾಂಸ್ಕೃತಿಕ ಕಾರ್ಯಕ್ರಮ : ಏ. 04 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, 4 ರಂದು ವಾಸುದೇವ ಭಟ್ಟರಿಂದ ಪಂಚಾಂಗ ಶ್ರವಣ, ಏ. 10ರಂದು ಕಲಾರ್ಪಣಂ ಸ್ಕೂಲ್ ಆಫ್, ಶಿಷ್ಯವೃಂದದಿಂದ ಭರತನಾಟ್ಯ, 11ರಂದು ಕೃಷ್ಣಾಚಾರ್ಯರಿಂದ ಉಪನ್ಯಾಸ, 12ವಿದೂಷಿ ಪ್ರತಿಮಾ ಜಾಗಟೆಕರ್‌ರಿಂದ ಹರಿಕಥೆ, 13ಸಾಗರದ ಕಲಾರಾಧನಾ ಕಲ್ಚರಲ್ ಟ್ರಸ್ಟ್ನಿಂದ ಭರತನಾಟ್ಯ, 14 ಬೆಂಗಳೂರಿನ ವಿ. ಡಾ. ಶ್ರೀನಿಧಿಪಾರ್ಥ ಸಾರಥಿ ಅವರಿಂದ ರಾಮಂ ರಮೇಶಂ ಭಜೆ ಸಂಗೀತ ಉಪನ್ಯಾಸ, 15ರಂದು ರವೀಂದ್ರನಗರದ ಶ್ರೀಮಾತಾ ಮಹಿಳಾ ಯಕ್ಷಕಲಾ ಟ್ರಸ್ಟ್ನಿಂದ ಯಕ್ಷಗಾನ, 16ವಿದ್ವಾನ್ ಎಂ.ಎಸ್. ವಿನಾಯಕರಿಂದ ಉಪನ್ಯಾಸ ಹಾಗೂ ಏ. 21ರಂದು ಶ್ರೀ ಗುರುಗುಹ ಸಂಗೀತ ಮಹಾ ವಿದ್ಯಾಲಯದಿಂದ ಶ್ರೀರಾಮ ಸಂಕೀರ್ತನ ನಡೆಯಲಿದ್ದು, ಈ ಎಲ್ಲಾ ಕಾರ‍್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಶ್ರೀರಾಮ ಮಂದಿರ ಟ್ರಸ್ಟ್ ಕೋರಿದೆ.