Sunday, August 2, 2026
Sunday, August 2, 2026

Crime News ಮಹಿಳೆಯನ್ನು ಕೊಲೆಗೈದು ಶವ ಕೆರೆಗೆಸೆದ ಪಾತಕಿಗಳ ಬಂಧನ

Date:

Crime News ಮಾ.18 ರಂದು ರಿಪ್ಪನ್ ಪೇಟೆ ಠಾಣೆಯ ಹುಂಚದ ಮುತ್ತಿನಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಜಯಮ್ಮನವರ ಹಂತಕರನ್ನ ಬಂಧಿಸುವಲ್ಲಿ ರಿಪ್ಪನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ
ಕೋಡೂರು ಗ್ರಾಪಂ ವ್ಯಾಪ್ತಿಯ,
ಯಳಗಲ್ಲು ಗ್ರಾಮದ ಮಯೂರ ಕೆ. (24) ತನ್ನ ಅತ್ತೆ ಹೊಳಲೂರು ಗ್ರಾಮದ ಸೀತಾರ ರವರು ಕೆಲಸ ಮಾಡುತ್ತಿದ್ದ ಮಠದಲ್ಲಿ,
ಕಸಗುಡಿಸುವ ಕೆಲಸ ಮಾಡುತ್ತಿದ್ದ
ಜಯಮ್ಮ ಕೋಂ ಕುಮಾರ (62) ರವರ
ಹತ್ತಿರ ಕೈಸಾಲವಾಗಿ ಹಣ ತೆಗೆದುಕೊಂಡು ಅದನ್ನು ವಾಪಾಸ್ ಕೊಡಲು ಸಾಧ್ಯವಾಗಿರಲಿಲ್ಲ.

ಜಯಮ್ಮನ ಹತ್ತಿರ ಹಣ ಮತ್ತು ಬಂಗಾರವಿರುವುದನ್ನು ಗಮನಿಸಿದ ಮಯೂರ ಕೆ ಅಪ್ರಾಪ್ತ ಸ್ನೇಹಿತನೊಂದಿಗೆ
ಬುದ್ಧಿವಂತಿಕೆಯಿಂದ ರಿಪ್ಪನ್‌ಪೇಟೆಯಲ್ಲಿ ಸೈಟ್ ಕೊಡಿಸುವುದಾಗಿ ನಂಬಿಸಿ ವ್ಯಾಗನಾರ್ ಕಾರಿನಲ್ಲಿ ಕೂರಿಸಿಕೊಂಡು ಬಂದ ಯುವಕ ಹಗ್ಗದ ಸಹಾಯದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುವುದು ತಿಳಿದು ಬಂದಿದೆ.

ಕೊಲೆಯನ್ನು ಮರೆ ಮಾಚುವ ಉದ್ದೇಶದಿಂದ ಬೇಲಿ ಕಂಬದ ಕಲ್ಲನ್ನು ಜೊತೆಗೆ ಪ್ಲಾಸ್ಟಿಕ್ ಹಗ್ಗದಿಂದ ಸುತ್ತಿ ಬಿಗಿದು ಅದೇ ದಿನ ರಾತ್ರಿ ಸುಮಾರು 10:45ರ ಸುಮಾರಿಗೆ ಹುಂಚ ಮುತ್ತಿನಕೆರೆಯಲ್ಲಿ ಮೃತದೇಹವನ್ನು ಬಿಸಾಕಿ ಹೋಗಿದ್ದರು.

Crime News ಮೊದಲಿಗೆ ಜಯಮ್ಮನ ಶವ ಪತ್ತೆಯಾಗಿರಲಿಲ್ಲ. ಎರಡುದಿನಗಳ ನಂತರ ಪತ್ತೆಯಾಗಿತ್ತು. ನಂತರ ಪೊಲೀಸರ ಖಡಕ್ ಕಾರ್ಯಾಚರಣೆಯಿಂದ ಪ್ರಕರಣ ಬೇಧಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K.Sivakumar ರಾಜ್ಯದಲ್ಲಿ 70.000 ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭ – ಡಿ.ಕೆ.ಶಿವಕುಮಾರ್

D.K.Sivakumar ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 70 ಸಾವಿರಕ್ಕೂ ಹೆಚ್ಚು ಸರ್ಕಾರಿ...

Rotary Club Shivamogga ನಿಸ್ವಾರ್ಥ ಸೇವೆಯಿಂದ ಸಮಾಜಕ್ಕೆ ರೊಟೇರಿಯನ್ಸ್ ದಾರಿದೀಪವಾಗಿದ್ದಾರೆ- ಸಿ.ಎಸ್.ಷಡಾಕ್ಷರಿ

Rotary Club Shivamogga ರೋಟರಿ ಸದಸ್ಯರುಗಳಲ್ಲಿ ನಾಯಕತ್ವ, ಸೇವಾ ಮನೋಭಾವ, ಸಾಮಾಜಿಕ...

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...