Water Project ತೀರ್ಥಹಳ್ಳಿ: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿರೋಧಿಸಿ ಹೋರಾಟ ನೆಡೆಸುತ್ತಿರುವ ತಾಲೂಕಿನ ಹೆಗ್ಗೋಡು ಗ್ರಾಮದ ಗ್ರಾಮಸ್ಥರು ಬರಲಿರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಯಾವುದೇ ರಾಜಕಾರಣಿಗಳು ಗ್ರಾಮದೊಳಗೆ ಪ್ರವೇಶಿಸದಂತೆ ಬಹಿಷ್ಕಾರ ಹಾಕಿದ್ದಾರೆ.
ರಾಜಕಾರಣಿಗಳು ಗ್ರಾಮದೊಳಗೆ ಪ್ರವೇಶಿಸಿದರೆ ಮಹಿಳೆಯರಿಂದ ಹಿಡಿಕುಂಟೆ ಉಪಚಾರ ಮಾಡಿಸುತ್ತೇವೆ ಎಂದು ಬ್ಯಾನರ್ ಮೂಲಕ ಎಚ್ಚರಿಕೆ ನೀಡಿದ್ದಾರೆ.
Water Project ರಾಜಕಾರಣಿಗಳು ಆಲಗೇರಿ,ಹೆಗ್ಗೋಡು ಗ್ರಾಮಕ್ಕೆ ಬರುವ ಅಗತ್ಯವಿಲ್ಲ,ಮುಂದಿನ ದಿನಗಳಲ್ಲಿ ಮುಳುಬಾಗಿಲು, ಹೊಸಹಳ್ಳಿ,ತೀರ್ಥಮುತ್ತೂರು ಸೇರಿದಂತೆ ತುಂಗಾ,ಮಾಲತಿ ನದಿ ತೀರದ ೧೫ಗ್ರಾ.ಪಂ.ವ್ಯಾಪ್ತಿಯಲ್ಲಿಯೂ ಪ್ರವೇಶ ನಿರ್ಬಂಧ ಕ್ಕೆ ತೀರ್ಮಾನಿಸಲಾಗಿದೆ ಎಂದು ಹೋರಾಟ ಸಮಿತಿಯ ರೈತ ಮುಖಂಡ ಕೋಡ್ಲು ವೆಂಕಟೇಶ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹೋರಾಟಗಾರರಾದ ಕಂಬಳಿಗೆರೆ ರಾಜೇಂದ್ರ,ಅಭಿಲಾಶ್ ಸೌಳಿ,ಬಿಕ್ಕೊಳ್ಳಿ ಮಂಜುನಾಥ್ ಮುಂತಾದವರಿದ್ದರು.
