Tuesday, April 22, 2025
Tuesday, April 22, 2025

ಅಳಿವಿನಂಚಿನಲ್ಲಿ ಗುಬ್ಬಚ್ಚಿ ಸಂತತಿKLive Special Article ಅಳಿವಿನಂಚಿನಲ್ಲಿ ಗುಬ್ಬಚ್ಚಿ ಸಂತತಿ

Date:

ಬರಹ: ಅಂಜುಮ್ ಬಿ.ಎಸ್.

KLive Special Article ವರ್ಷಗಳ ಹಿಂದೆ ಪ್ರತಿ ಮನೆಯ ಮೇಲೆ , ಛಾವಣಿಯಲ್ಲಿ ,ಫೋಟೋಗಳ ಹಿಂದೆ ಮರಗಳಲ್ಲಿ ಗೂಡು ಕಟ್ಟುತ್ತಿದ್ದ ಮುದ್ದಾದ ಗುಬ್ಬಿಗಳು ಈಗ ಕಣ್ಮರೆಯಾಗಿವೆ. ಹಿಂಡು ಹಿಂಡಾಗಿರುತ್ತಿದ್ದ ಗುಬ್ಬಚ್ಚಿಗಳು ಈಗ ಅಪರೂಪವೆಂಬಂತೆ ಅಲ್ಲೊಂದು ಇಲ್ಲೊಂದು ಕಾಣಸಿಗುತ್ತವೆ.

ಒಂದೆಡೆ ದೇಶ ಪ್ರಗತಿಯತ್ತ ಸಾಗುತ್ತಿದ್ದರೆ ಇನ್ನೊಂದೆಡೆ ಪರಿಸರ ನಾಶ ಯತೇಚ್ಛವಾಗಿ ಉಡೆಯುತ್ತಿದೆ‌.ಆಧುನಿಕತೆಯ ಅನಾಹುತದಿಂದ ನಮ್ಮ ಸೂಕ್ಷ್ಮ ಪರಿಸರ ಸಮತೋಲನವನ್ನು ಕಳೆದುಕೊಳ್ಳುತ್ತಿದೆ.

ವಿನಾಶದ ಅಂಚಿನಲ್ಲಿರುವ ಹಲವಾರು ಪಕ್ಷಿ ಪ್ರಾಣಿಗಳ ಪೈಕಿ ಗುಬ್ಬಚ್ಚಿಗಳು ಮೊದಲ ಸಾಲಿನಲ್ಲಿ ನಿಲ್ಲುತ್ತವೆ. ಗುಬ್ಬಚ್ಚಿಗಳ ಸಂಖ್ಯೆ ಇಳಿಮುಖವಾಗಲು ಹಲವು ಕಾರಣಗಳಿವೆ. ಕೀಟನಾಶಕ ಬಳಕೆಯೂ ಗುಬ್ಬಚ್ಚಿಗಳಿಗೆ ಹಾನಿಯನ್ನುಂಟು ಮಾಡುತ್ತದೆ.ಶಬ್ದ ಮಾಲಿನ್ಯ, ಗುಬ್ಬಚ್ಚಿ ಗೂಡು ಕಟ್ಟುವ ತಾಣಗಳ ಅವನತಿ, ಮೊಬೈಲ್ ಟವರ್ ರೇಡಿಯೇಷನ್, ಆಧುನಿಕ ಕಟ್ಟಡ, ಮೈಕ್ರೋವೇವ್ ಗಳಿಂದಾಗಿ ಗುಬ್ಬಿಗಳ ಸಂತತಿ ದಿನೇ ದಿನೇ ಕ್ಷೀಣಿಸುತ್ತಿದೆ.

ಭೂಮಿಯ ಮೇಲಿನ ಅತ್ಯಂತ ಸರ್ವತ್ರ ಪಕ್ಷಿಗಳಲ್ಲಿ ಗುಬ್ಬಚ್ಚಿ ಯೂ ಒಂದು. ಇದು ಮಾನವರ ಅತ್ಯಂತ ಹಳೆಯ ಒಡನಾಡಿಗಳಯೂ ಹೌದು‌

ಒಂದು ಕಾಲದಲ್ಲಿ ಪ್ರಪಂಚದಾದ್ಯಂತ ಸಾಮಾನ್ಯ ಪಕ್ಷಿಯಾಗಿದ್ದ ಗುಬ್ಬಚ್ಚಿ ಇತ್ತೀಚಿನ ವರ್ಷಗಳಲ್ಲಿ, ಈ ಪಕ್ಷಿಯು ನಗರ ಮತ್ತು ಗ್ರಾಮೀಣ ಆವಾಸಸ್ಥಾನಗಳಲ್ಲಿ ತನ್ನ ನೈಸರ್ಗಿಕ ವ್ಯಾಪ್ತಿಯ ಬಹುಪಾಲು ವಿನಾಶದ ಅಂಚಿನಲ್ಲಿದೆ.
ನಗರೀಕರಣದಿಂದಾಗಿ ಇಂದಿನ ಮಕ್ಕಳು ಕೇವಲ ಪುಸ್ತಕಗಳಲ್ಲಿ ಪೋಟೋ ವಿಡಿಯೋಗಳಲ್ವಿ ಮಾತ್ರ ಗುಬ್ಬಚ್ಚಿಯನ್ನು ಕಾಣಬಹುದು.

ಜೀವಂತವಾಗಿ ಗುಬ್ಬಿಯ ನೋಡಿದ ಇಂದಿನ ಪೀಳಿಗೆ ಗುಬ್ಬಚ್ಚಿಗಳೊಂದಿಗಿನ ಭಾವನಾತ್ಮಕ ಸಂಬಂಧದ ಅರಿವು ಇರುವುದಿಲ್ಲ.

ಗುಬ್ಬಚ್ಚಿಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ.

ಈ ದಿನದಂದು ಸಾಮಾಜಿಕ ಸಂಸ್ಥೆಗಳು , ವಿವಿಧ ಸರ್ಕಾರಿ ಸಂಸ್ಥೆಗಳು ಮತ್ತು ವೈಜ್ಞಾನಿಕ ಸಮುದಾಯಗಳು ಗುಬ್ಬಚ್ಚಿಗಳ ನ್ನು ಉಳಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತವೆ.

ವಿಶ್ವ ಗುಬ್ಬಚ್ಚಿ ದಿನವನ್ನು ಮೊದಲ ಬಾರಿಗೆ ಮಾರ್ಚ್ 20, 2010 ರಂದು ಆಚರಿಸಲಾಯಿತು.

ಮೊಹಮ್ಮದ್ ದಿಲಾವರ್, ಭಾರತೀಯ ಸಂರಕ್ಷಣಾವಾದಿ ಮತ್ತು ನೇಚರ್ ಫಾರೆವರ್ ಸೊಸೈಟಿಯ ಸಂಸ್ಥಾಪಕ, ವಿಶ್ವ ಗುಬ್ಬಚ್ಚಿ ದಿನವನ್ನು ಪ್ರಾರಂಭಿಸಿದರು.

ಮನೆ ಗುಬ್ಬಚ್ಚಿಗಳ ಸಂರಕ್ಷಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.
ಮಾಲಿನ್ಯದಿಂದಾಗಿ ಮನೆ ಗುಬ್ಬಚ್ಚಿಗಳ ಜನಸಂಖ್ಯೆಯಲ್ಲಿ ಭಾರಿ ಇಳಿಕೆಯನ್ನು ಈ ಆಚರಣೆ ಎತ್ತಿ ತೋರಿಸುತ್ತದೆ.

KLive Special Article ಶಬ್ದ, ವಾಯು ಮತ್ತು ಜಲ ಮಾಲಿನ್ಯದ ಹೆಚ್ಚಳವು ವಿಶ್ವಾದ್ಯಂತ ಪಕ್ಷಿಗಳ ಇಳಿಕೆಗೆ ಕಾರಣವಾಗುತ್ತದೆ. ರಾಸಾಯನಿಕ ತ್ಯಾಜ್ಯ ಮತ್ತು ಪ್ಲಾಸ್ಟಿಕ್‌ಗಳು ಜಲಚರಗಳು ಮತ್ತು ಪಕ್ಷಿಗಳಿಗೆ ಹಾನಿಯನ್ನುಂಟುಮಾಡುತ್ತವೆ

ಕಾಡು ಗುಬ್ಬಚ್ಚಿಯ ಸರಾಸರಿ ಜೀವಿತಾವಧಿ 4 ರಿಂದ 5 ವರ್ಷಗಳು ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ, ಈ ಪಕ್ಷಿಗಳನ್ನು ವಿನಾಶದಿಂದ ರಕ್ಷಿಸುವುದು ಅತ್ಯಗತ್ಯವಾಗಿದೆ.

ಗುಬ್ಬಚ್ಚಿಗಳು ಆಲ್ಫಾ ಮತ್ತು ಕಟ್ ವರ್ಮ್ ಕೀಟಗಳನ್ನು ತಿನ್ನುವುದರಿಂದ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ಅತ್ಯಗತ್ಯ. ಈ ಕೀಟಗಳು ಸಾಮಾನ್ಯವಾಗಿ ಬೆಳೆಗಳನ್ನು ಹಾನಿಗೊಳಿಸುತ್ತವೆ ಮತ್ತು ಅವುಗಳನ್ನು ನಾಶಮಾಡುತ್ತವೆ.

ಐಯುಸಿಎನ್ ವರದಿಯ ಪ್ರಕಾರ ಕಳೆದ 25 ವರ್ಷಗಳಲ್ಲಿ ಗುಬ್ಬಚ್ಚಿಗಳ ಸಂತತಿಯು ಶೇ. 71ರಷ್ಟು ಕುಸಿದಿದೆ. ಈ ಸಂತತಿಯ ಬಗ್ಗೆ ಅರಿವು ಮೂಡಿಸಲು ಮತ್ತು ಸಂರಕ್ಷಿಸಲು ಗುಬ್ಬಚ್ಚಿಯನ್ನು 2012ರಲ್ಲಿ ದೆಹಲಿಯ ರಾಜ್ಯ ಪಕ್ಷಿ ಎಂದು ಘೋಷಿಸಲಾಯಿತು.

ಇತ್ತೀಚೆಗೆ ಬಿಹಾರ ರಾಜ್ಯವು ಕೂಡ ಗುಬ್ಬಚ್ಚಿಯನ್ನು ತನ್ನ ರಾಜ್ಯದ ಪಕ್ಷಿಯನ್ನಾಗಿ ಘೋಷಿಸಿದೆ.

ರೈತರ ಒಡನಾಡಿಯಾಗಿರುವ ಗುಬ್ಬಿಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ಸರ್ಕಾರಿ, ಸಾರ್ವಜನಿಕ ಸ್ಥಳಗಳಲ್ಲಿನ ಸುತ್ತಮುತ್ತ ಗಿಡ, ಮರಗಳನ್ನು ಬೆಳೆಸಬೇಕು.

ಗಿಡದ ರೆಂಬೆಗಳಿಗೆ ನೀರು ತುಂಬಿದ ಮಡಿಕೆ, ನೇತು ಹಾಕಬಹುದು. ಮನೆಯ ಟೇರಸ್ ಮೇಲೆ ನೀರು ತುಂಬಿದ ಮಡಿಕೆಗಳನ್ನು ಇಡಬೇಕು. ಬೇಸಿಗೆಯಲ್ಲಿ ನೀರಿನ ಸಮಸ್ಯೆಯಿಂದಾಗಿ ಸಾಕಷ್ಟು ಪ್ರಾಣಿ ಪಕ್ಷಿಗಳು ಸಾವನ್ನಪ್ಪುತ್ತವೆ.
ಬೇಸಿಗೆ ಮುಗಿಯುವವರೆಗೆ ಈ ರೀತಿ ಮಾಡುವುದರಿಂದ ಕೊಂಚ ಪಕ್ಷಿಗಳನ್ನು ಉಳಿಸುವಲ್ಲಿ ಸಣ್ಣ ಪ್ರಯತ್ನ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ತಾಲ್ಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ- ಮಧು ಬಂಗಾರಪ್ಪ

Madhu Bangarappa ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರ ದೊರಕಿಸಲು...

Fisheries project 2024-25ನೇ ಸಾಲಿನ ಮತ್ಸ್ಯಸಂಪದ ಯೋಜನೆಗೆ ಅರ್ಹರಿಂದ ಅರ್ಜಿ ಆಹ್ವಾನ

Fisheries project 2024-25 ನೇ ಸಾಲಿನ ಪ್ರಧಾನ ಮಂತ್ರಿ ಮತ್ಯ್ಸ ಸಂಪದ...

Ravi Telex ಪತ್ರಕರ್ತ‌ “ಟೆಲೆಕ್ಸ್ ರವಿ ” ಗೆ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ

Ravi Telex ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ...

Inner Wheel East Shimoga ಆಶ್ರಮವಾಸಿಗಳ ಸೇವೆ ,ದೇವರ ಸೇವೆಗೆ ಸಮ- ವಾಗ್ದೇವಿ ಬಸವರಾಜ್

Inner Wheel East Shimoga ಆಶ್ರಮವಾಸಿಗಳ ಸೇವೆ ದೇವರ ಸೇವೆಗೆ ಸಮಾನ....