Wednesday, April 30, 2025
Wednesday, April 30, 2025

Karnataka Lokayukta ಲೋಕಾಯುಕ್ತ ಬಲೆಗೆ ಬಿದ್ದ ಸೊರಬ ಪುರಸಭೆಯ ಕಂದಾಯ ನಿರೀಕ್ಷಕ

Date:

Karnataka Lokayukta ಪಿರಾದುದಾರರಾದ ಶ್ರೀಮತಿ ಪ್ರತಿಭಾ ಎಂ. ನಾಯ್ಕ, ಕೋಂ, ಮಹೇಶ್ ನಾಯ್ಕ, ಗೃಹಿಣಿ, ಶ್ರೀಸತ್ಯ ನಿಲಯ, ಫಾರೆಸ್ಟ್ ಕಾಲೋನಿ, ಪ್ರಭಾತ್ ನಗರ, ಹೊನ್ನಾವರ ಟೌನ್, ಉತ್ತರ ಕನ್ನಡ ಜಿಲ್ಲೆ ಇವರ ಹೆಸರಿಗೆ ಶಿವಮೊಗ್ಗ ಜಿಲ್ಲೆ ಸೊರಬ ತಾ. ಕಸಬಾ ಹೋಬಳಿ, ಹಳೇ ಸೊರಬ ಗ್ರಾ.ಪಂ. ಸ್ವತ್ತಿನ ಸಂ: 15240060270010019ರಲ್ಲಿ 450 250 ಅಡಿ ಅಳತೆಯ ಖಾಲಿ ನಿವೇಶನ ಮತ್ತು ಅದಕ್ಕೆ ಹೊಂದಿಕೊಂಡಂತೆ ಜಾಗವು ಖಾತೆಯಿದ್ದು, ಅದು ಈ-ಸ್ವತ್ತಾಗಿರುತ್ತದೆ.

ಈ ಜಾಗವು ಗ್ರಾಮ ಪಂಚಾಯ್ತಿಯಿಂದ ಸೊರಬ ಪುರಸಭೆ ವ್ಯಾಪ್ತಿಗೆ ಸೇರಿದ್ದರಿಂದ ಪುರಸಭೆ ವ್ಯಾಪ್ತಿಗೆ ಸೇರಿಸಿ ಖಾತೆ ಮಾಡಿಕೊಡುವಂತೆ ಕೋರಿ ಫಿರ್ಯಾದಿಯು ಅರ್ಜಿ ಸಲ್ಲಿಸಿಕೊಂಡ ಮೇರೆಗೆ ಸೊರಬ ಪುರಸಭೆಯಲ್ಲಿ ಒಟ್ಟು 575.5366 ಚ.ಮೀ. ನಿವೇಶನಕ್ಕೆ ಈ-ಸ್ವತ್ತು ನೀಡಿರುತ್ತಾರೆ. ಆದರೆ ಈ ಹಿಂದೆ ಹಳೇ ಸೊರಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ- ಸ್ವತ್ತು ಮಾಡಿಸಿದಾಗ ಸದರಿ ಜಾಗವು ಒಟ್ಟು 6,950 ಚ.ಮೀ. ವಿಸ್ತೀರ್ಣ ವಿದ್ದುದರಿಂದ ಸದರಿ ವಿಸ್ತೀಣಕ್ಕೆ ಅನುಗುಣವಾಗಿ ಇ-ಸ್ವತ್ತು ಮಾಡಿಕೊಡುವಂತೆ ಕೋರಿ ದಿ:10-01-2024ರಂದು ಪುನಃ ಫಿರ್ಯಾದುದಾರರು ಸೊರಬ ಪುರಸಭೆ ಕಛೇರಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿಕೊಂಡಿರುತ್ತಾರೆ. ನಂತರ ದಿನಾಂಕ: 14-02-2024ರಂದು ಫಿರ್ಯಾದಿಯು ಅವರ ತಂದೆ ಶ್ರೀ ಹೆಚ್.ಪಿ. ಚಂದ್ರಶೇಖರ್ ಇವರೊಂದಿಗೆ ಸೊರಬ ಪುರಸಭೆ ಕಛೇರಿಗೆ ಹೋಗಿ ಅಲ್ಲಿನ ಕಂದಾಯ ನಿರೀಕ್ಷಕರಾದ ಶ್ರೀ ವಿನಾಯಕ ಇವರನ್ನು ಭೇಟಿಯಾಗಿ ತಾವು ನೀಡಿದ್ದ ಅರ್ಜಿಯ ಕುರಿತು ವಿಚಾರಿಸಿದಾಗ ಅವರು ಫಿರ್ಯಾದಿಗೆ ರೂ. 50,000/-ಗಳ ಲಂಚದ ಹಣಕ್ಕಾಗಿ ಬೇಡಿಕೆಯಿಟ್ಟು, ಕೊನಗೆ ಫಿರ್ಯಾದಿಯ ಕೋರಿಕೆಯ ಮೇರೆಗೆ ರೂ. 40,000/-ಗಳಿಗೆ ಒಪ್ಪಿಕೊಂಡಿರುತ್ತಾರೆ. ತನ್ನ ಹೆಸರಿಗೆ ಬಂದಿರುವ ಹಳೇ ಸೊರಬ ಗ್ರಾ.ಪಂ, ಖಾತೆಯಲ್ಲಿದ್ದ ಸ್ವತ್ತಿನ ಪ್ರಕಾರ ಈ-ಸ್ವತ್ತು ಮಾಡಿಸಿಕೊಳ್ಳಲು ಶ್ರೀ ವಿನಾಯಕ, ಕಂದಾಯ ನಿರೀಕ್ಷಕರು, ಪುರಸಭೆ, ಸೊರಬ, ಶಿವಮೊಗ್ಗ ಜಿಲ್ಲೆ ಇವರಿಗೆ ಲಂಚದ ಹಣ ಕೊಡಲು ಇಷ್ಟವಿರದ ಫಿರ್ಯಾದಿಯು ಶಿವಮೊಗ್ಗ ಲೋಕಾಯುಕ್ತ ಠಾಣೆಗೆ ಹೋಗಿ ಶ್ರೀ ಪ್ರಕಾಶ್, ಪೊಲೀಸ್ ನಿರೀಕ್ಷಕರು ಇವರಿಗೆ ದೂರು ಕೊಟ್ಟ ಮೇರೆಗೆ ಸದರಿ ಅಧಿಕಾರಿಯವರು ದಿ:15-02-2024ರಂದು ಪ್ರಸಂ: 02/2024, ಕಲಂ 7(ಎ), ಪಿ.ಸಿ. ಆ್ಯಕ್ಟ್ 1988 (ತಿದ್ದುಪಡಿ ಕಾಯ್ದೆ 2018)ರ ಪ್ರಕಾರ ಪ್ರಕರಣ ದಾಖಲಿಸಿರುತ್ತಾರೆ.

Karnataka Lokayukta ಅದರಂತೆ ಇಂದು ದಿ:06-03-2024ರಂದು ಶ್ರೀ ವಿನಾಯಕ, ಬಿನ್, ಗುರುವಯ್ಯ, ಕಂದಾಯ ನಿರೀಕ್ಷಕರು, ಪುರಸಭೆ, ಸೊರಬ, ಶಿವಮೊಗ್ಗ ಜಿಲ್ಲೆ ಇವರು ಫಿರ್ಯಾದಿಯಿಂದ ರೂ.40,000/-ಗಳ ಲಂಚದ ಹಣವನ್ನು ಪಡೆಯುವಾಗ ನಮ್ಮ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ. ಅವರಿಂದ ರೂ.40,000/-ಗಳ ಲಂಚದ ಹಣವನ್ನು ಜಪ್ತಿಪಡಿಸಿಕೊಂಡು ಅವರನ್ನು ಬಂಧಿಸಿದ್ದು, ಮುಂದಿನ ತನಿಖೆಯನ್ನು ಶ್ರೀ ಪ್ರಕಾಶ್, ಪಿಐ-2, ಕ.ಲೋ., ಶಿವಮೊಗ್ಗ ಇವರು ಕೈಗೊಂಡಿದ್ದು ಇರುತ್ತದೆ. ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಕಛೇರಿಯ ಪೊಲೀಸ್ ಅಧೀಕ್ಷಕರಾದ ಶ್ರೀ ಎನ್. ವಾಸುದೇವರಾಮ ಇವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.
ಪೊಲೀಸ್‌ ಉಪಾಧೀಕ್ಷಕರಾದ ಶ್ರೀ ಉಮೇಶ ಈಶ್ವರ ನಾಯ್ಕ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ, ಪೊಲೀಸ್ ನಿರೀಕ್ಷಕರಾದ ಶ್ರೀ ಹೆಚ್.ಎಸ್. ಸುರೇಶ್, ಹಾಗೂ ಪೊಲೀಸ್ ಸಿಬ್ಬಂದಿಗಳಾದ ಶ್ರೀ ಮಹಂತೇಶ, ಸಿ.ಹೆಚ್.ಸಿ., ಶ್ರೀ ಸುರೇಂದ್ರ, ಸಿ.ಹೆಚ್.ಸಿ., ಶ್ರೀ ಯೋಗೀಶ್, ಸಿ.ಹೆಚ್.ಸಿ., ಶ್ರೀ ಬಿ.ಟಿ. ಚನ್ನೇಶ, ಸಿಪಿಸಿ, ಶ್ರೀ ಪ್ರಶಾಂತ್‌ಕುಮಾರ್, ಸಿಪಿಸಿ, ಶ್ರೀ ಅರುಣ್‌ಕುಮಾರ್, ಸಿಪಿಸಿ, ಶ್ರೀ ದೇವರಾಜ, ಸಿ.ಪಿ.ಸಿ., ಶ್ರೀ ರಘುನಾಯ್ಕ, ಸಿ.ಪಿ.ಸಿ., ಶ್ರೀ ಕೆ.ಸಿ. ಜಯಂತ, ಎಪಿಸಿ, ಶ್ರೀ ವಿ. ಗೋಪಿ, ಎಪಿಸಿ ಮತ್ತು ಶ್ರೀ ಪ್ರದೀಪ್ ಕುಮಾರ್, ಎಪಿಸಿ, ಶ್ರೀ ಬಿ.ಕೆ. ಗಂಗಾಧರ, ಎಪಿಸಿ ಇವರುಗಳು ಹಾಜರಿದ್ದು, ಕರ್ತವ್ಯ ನಿರ್ವಹಿಸುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Yadav School of Chess Institute ಯಾದವ ಸಂಸ್ಥೆಯಿಂದ ಚೆಸ್ ತರಬೇತಿ ಶಿಬಿರ

Yadav School of Chess Institute ರವೀದ್ರನಗರದ ಯಾದವ ಸ್ಕೂಲ್ ಆಫ್...

Shivaganga Yoga Center ನಗರದ ಅತಿದೊಡ್ಡ ಬಾಡಾವಣೆಗಳಿಗೆ ₹140 ಕೋಟಿ ಅನುದಾನದಿಂದ ಅಭಿವೃದ್ಧಿ- ವಿಶ್ವಾಸ್

Shivaganga Yoga Center ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ...

Sarva Samriddhi Sadhana Center ರಿಪ್ಪನ್ ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ ಕೇಂದ್ರದಲ್ಲಿ ಮಕ್ಕಳಿಗಾಗಿ ಸಂಸ್ಕಾರ ಶಿಬಿರ

Sarva Samriddhi Sadhana Center ಹೊಸನಗರದ ರಿಪ್ಪನ್‌ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ...