Wednesday, April 30, 2025
Wednesday, April 30, 2025

Chikkamagalur ನಾಮಫಲಕಗಳಲ್ಲಿ ಶೇ 60 ಕನ್ನಡ ಕಡ್ಡಾಯ ಆಂದೋಲನ

Date:

Chikkamagalur ಚಿಕ್ಕಮಗಳೂರು, ನಗರದ ಬಹುತೇಕ ಅಂಗಡಿಮು0ಗಟ್ಟುದಾರರು ಆಂಗ್ಲಭಾಷೆ ನಾಮಫ ಲಕ ತೆರವುಗೊಳಿಸಿ ಶೇ.60ರಷ್ಟು ಕನ್ನಡ ಪದ ಬಳಕೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾ ರಕ್ಷಣಾ ವೇದಿಕೆ ಮುಖಂಡರುಗಳು ಮಂಗಳವಾರ ನಗರದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ಕೈಗೊಂಡು ಪ್ರತಿಭಟನೆ ನಡೆ ಸಿದರು.
ನಗರದ ಬೋಳರಾಮೇಶ್ವರ ದೇವಾಲಯದಿಂದ ಐ.ಜಿ.ರಸ್ತೆ ಹಾಗೂ ಎಂ.ಜಿ.ರಸ್ತೆ ಮುಖಾಂತರ ಸಾಗಿದ ಪ್ರತಿಭಟನಾಕಾರರು ಪಾದಯಾತ್ರೆಯುದ್ದಕ್ಕೂ ಪ್ರತಿ ಅಂಗಡಿದಾರರ ನಾಮಫಲಕ ಗಮನಿಸಿ ಶೇ.೬೦ ಕನ್ನಡ ಬಳಸಿದ ಮಾಲೀಕರಿಗೆ ಸನ್ಮಾನಿಸಿ, ಉಳಿದ ಮುಂಗಟ್ಟುದಾರರಿಗೆ ಮಾ.೧೩ರ ತನಕ ಅಂತಿಮ ಗಡುವು ನೀಡಿ ಎಚ್ಚರಿಸಿದ ನಂ ತರ ಪೌರಾಯುಕ್ತ ಹೆಚ್.ಟಿ.ಕೃಷ್ಣಮೂರ್ತಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್ ಕನ್ನಡ ನಾಮಫಲಕಗಳು ಇರಬೇಕೆಂಬ ಹಕ್ಕೋತ್ತಾಯವನ್ನು ಇರಿಸಿ ಕರವೇ ಮುಖಂಡರುಗಳು ಚಳುವಳಿಯ ನಿರ್ಣಯ ಕೈಗೊಂಡಿದೆ. ಕನ್ನಡ ನಮಗೇಕೆ ಬೇಕು ಎಂಬ ದರ್ಪದಿಂದ ಕೊಬ್ಬಿರುವ ಪರಭಾಷಿಕ ಉದ್ಯಮಿಗಳಿಗೆ ತಕ್ಕ ಪಾಠಕಲಿಸುವ ಕೆಲಸವನ್ನು ಯಶಸ್ವಿ ಯಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈಗಾಗಲೇ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಸಾವಿರಾರು ಕನ್ನಡೆತೇರ ನಾಮಫಲಕಗಳು ಧರೆ ಗುಳಿದವು. ಚಳುವಳಿಗೆ ರಾಜ್ಯದ ಜನತೆ ತುಂಬ ಮನಸ್ಸಿನಿಂದ ಬೆಂಬಲಿಸಿ ಕನ್ನಡ ನಾಮಫಲಕ ಬೇಕು ಎಂದು ದಶಕ ಗಳಿಂದ ಹಂಬಲಿಸುತ್ತಿದ್ದ ಮನಸ್ಸುಗಳಿಗೆ ಸಮಾಧಾನ ತಂದಿರುವ ಬಹುದೊಡ್ಡ ಹೋರಾಟವಾಗಿದೆ ಎಂದರು.
ರಾಜ್ಯಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ತಿದ್ದುಪಡಿ ವಿಧೇಯಕವನ್ನು ಸದನಗಳಲ್ಲಿ ಮಂಡಿಸಿ ಅನು ಮೋದನೆ ಪಡೆದುಕೊಂಡಿದ್ದು ಕರವೇ ಮುಖಂಡರು, ಕಾರ್ಯಕರ್ತರ ತ್ಯಾಗವೇ ಕಾರಣ. ಕರ್ನಾಟಕದಲ್ಲಿ ಕನ್ನಡ ಸೊರಗಬಾರದೆಂಬ ದೃಷ್ಟಿಯಿಂದ ಕನ್ನಡದಲ್ಲಿ ನಾಮಫಲಕ ಅಭಿಯಾನವನ್ನು ಇಡೀ ರಾಜ್ಯಾದ್ಯಂತ ವಿಸ್ತರಿಸುತ್ತಿದೆ. ಕನ್ನಡ ವಿಧೇಯಕದ ಕುರಿತು ಎಲ್ಲರಿಗೂ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ ಎಂದರು.
ಪ್ರಸ್ತುತ ರಾಜ್ಯಸರ್ಕಾರ ಜಾರಿಗೆ ತಂದಿರುವ ಕನ್ನಡಭಾಷಾ ಸಮಗ್ರ ಅಭಿವೃದ್ದಿ ಪ್ರತಿ ಅಂಗಡಿ ಮುಂಗಟ್ಟುದಾ ರರು ಶೇ.೬೦ರಷ್ಟು ಭಾಗ ಕನ್ನಡ ಬಳಸಬೇಕು. ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಪ್ರಚಾರ ಕಾರ್ಯದಲ್ಲಿ ಹಾಗೂ ಜಾಹೀರಾತು ಫಲಕಗಳು ಕನ್ನಡದಲ್ಲಿರಬೇಕು ಹಾಗೂ ಎಲ್ಲಾ ಉದ್ಯಮಿಗಳು, ವ್ಯಾಪಾರಸ್ಥರು ಪಾಲಿಸು ವುದು ಕಡ್ಡಾಯವಾಗಿದೆ ಎಂದರು.
ಕನ್ನಡಿಗರು ಎಂದಿಗೂ ಯಾವ ಭಾಷೆ ವಿರೋಧಿಗಳಲ್ಲ. ಆದರೆ ಪದೇ ಪದೇ ಕನ್ನಡಕ್ಕೆ ಅಪಮಾನ ಆಗು ವುದನ್ನು ಸಹಿಸುವುದಿಲ್ಲ. ಹೀಗಾಗಿ ಕನ್ನಡ ನಾಮಫಲಕ ಹಾಕದವರು ಕನ್ನಡದ್ರೋಹಿಗಳು ಅವರಿಗೆ ಜಿಲ್ಲೆಯಲ್ಲಿ ಎಚ್ಚರಿಸುವ ನಿಟ್ಟಿನಲ್ಲಿ ನೂರಾರು ಸಂಖ್ಯೆಯಲ್ಲಿ ಕರವೇ ಮುಖಂಡರುಗಳು ನಗರದಲ್ಲಿ ಸುಮಾರು ೬ ಕಿ.ಮೀ. ಪಾದ ಯಾತ್ರೆ ಕೈಗೊಂಡು ಅಂಗಡಿ ಮುಂಗಟ್ಟುದಾರರಿಗೆ ಮಾ.೧೩ರ ತನಕ ಗಡುವು ನೀಡಿ ಎಚ್ಚರಿಸುವ ಕೆಲಸ ಮಾಡಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನಗರಸಭಾ ಪೌರಾಯುಕ್ತರು ಸಂಬAಧಿಸಿದ ಅಧಿಕಾರಿಗಳಿಂದ ಅಂಗಡಿ ಮುಂಗಟ್ಟು ದಾರರಿಗೆ ನೋಟೀಸ್ ಜಾರಿಗೊಳಿಸುವ ಮೂಲಕ ರಾಜ್ಯಸರ್ಕಾರದ ನಿರ್ಣಯವನ್ನು ಯಥಾವತ್ತಾಗಿ ಪಾಲನೆ ಮಾಡಲಾಗುವುದು ಎಂದು ಹೇಳಿದರು.
Chikkamagalur ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಟೆ ಮಲ್ಲೇಶ್, ತಾಲ್ಲೂಕು ಅಧ್ಯಕ್ಷ ಮನೋಜ್‌ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾದ ಶಶಿ, ಪಂಚಾಕ್ಷರಿ, ಯುವಘಟಕದ ಅಧ್ಯಕ್ಷ ಕುಮಾರ್‌ಶೆಟ್ಟಿ, ವಕ್ತಾರ ಕೋಟೆ ಸೋಮಣ್ಣ, ಕಡೂರು ಅಧ್ಯಕ್ಷ ಸಿದ್ದಪ್ಪ, ಅಜ್ಜಂಪುರ ಅಧ್ಯಕ್ಷ ಮಧು, ಮೂಡಿಗೆರೆ ಅಧ್ಯಕ್ಷ ಪ್ರಸನ್ನ ಗೌಡ, ಮುಖಂಡರುಗಳಾದ ನಾಗಲತಾ, ಪೂರ್ಣಿಮಾ, ಮಂಜುಳಾಬಾಯಿ, ಶೈಲಶ್ರೀ, ಶ್ರೀಧರ್, ವಿಜಯಲಕ್ಷಿö್ಮÃ, ವೆಂಕಟೇಶ್, ಇರ್ಷಾದ್ ಅಹ್ಮದ್, ಮಧು ಮತ್ತಿತರರಿ ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Yadav School of Chess Institute ಯಾದವ ಸಂಸ್ಥೆಯಿಂದ ಚೆಸ್ ತರಬೇತಿ ಶಿಬಿರ

Yadav School of Chess Institute ರವೀದ್ರನಗರದ ಯಾದವ ಸ್ಕೂಲ್ ಆಫ್...

Shivaganga Yoga Center ನಗರದ ಅತಿದೊಡ್ಡ ಬಾಡಾವಣೆಗಳಿಗೆ ₹140 ಕೋಟಿ ಅನುದಾನದಿಂದ ಅಭಿವೃದ್ಧಿ- ವಿಶ್ವಾಸ್

Shivaganga Yoga Center ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ...

Sarva Samriddhi Sadhana Center ರಿಪ್ಪನ್ ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ ಕೇಂದ್ರದಲ್ಲಿ ಮಕ್ಕಳಿಗಾಗಿ ಸಂಸ್ಕಾರ ಶಿಬಿರ

Sarva Samriddhi Sadhana Center ಹೊಸನಗರದ ರಿಪ್ಪನ್‌ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ...