Wednesday, April 23, 2025
Wednesday, April 23, 2025

KLive Special Article ಹಾಲಿವುಡ್ ದಂತಕಥೆ, 20 ನೇ ಶತಮಾನದ ಕ್ಲಿಯೋಪಾತ್ರಾ

Date:

KLive Special Article ಇಪ್ಪತ್ತನೆಯ ಶತಮಾನದ ಮಹಾನ್ ನಟಿ, ಹಾಲಿವುಡ್ ನ ದಂತ ಕಥೆ ಎಂದೇ ಖ್ಯಾತರಾಗಿದ್ದ ಲಿಜ್ ಟೇಲರ್ ಅಥವಾ ಎಲಿಜಬೆತ್ ಟೇಲರ್ ಅವರು 1932 ವರ್ಷದ ಫೆಬ್ರವರಿ 27 ರಂದು ಲಂಡನ್ನಿನಲ್ಲಿ ಜನಿಸಿದರು. ಅವರು ನಿಧನರಾದ ಸಂದರ್ಭದಲ್ಲಿ “ಇಡೀ ಜೀವನವನ್ನು ಸಂತೋಷದಿಂದ, ಪರಿಪೂರ್ಣವಾಗಿ ಆನಂದಿಸಿದ್ದ ಟೇಲರ್, ಹಾಸ್ಯಜೀವಿಯಾಗಿ, ಪ್ರೀತಿ ನೀಡುವ ತಾಯಿಯಾಗಿ ನಮ್ಮೆಲ್ಲರನ್ನೂ ನೋಡಿಕೊಂಡಿದ್ದರು” ಎಂದು ಅವರ ಪುತ್ರ ಮೈಕೆಲ್ ವಿಲ್ಡಿಂಗ್ ಹೇಳಿದ ಮಾತುಗಳು ಎಲಿಜಬೆತ್ ಟೇಲರ್ ಅವರ ಬದುಕಿನ ಕುರಿತಾದ ಒಂದು ಸಮಗ್ರ ಸಂಗ್ರಹ ವಾಕ್ಯದಂತೆ ಕಾಣುತ್ತದೆ.

‘ದೇರ್ಸ್‌ ಒನ್ ಬಾರ್ನ್ ಎವ್ರಿ ಮಿನಟ್’ ಎಂಬ ಹಾಸ್ಯಚಿತ್ರದಲ್ಲಿ ನಟಿಸಿದಾಗ ಎಲಿಜಬೆತ್ ಅವರಿಗೆ ವಯಸ್ಸಿನ್ನೂ ಹತ್ತು. 1942ರಲ್ಲಿ ಆ ಚಿತ್ರ ಬಿಡುಗಡೆಯಾಯಿತು. ಅದಾದ ಎರಡು ವರ್ಷದ ನಂತರ ‘ನ್ಯಾಷನಲ್ ವೆಲ್ವೆಟ್’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದಾಗ ಅವರು ಬಾಲತಾರೆ ಎನಿಸಿಕೊಂಡರು.

1960ರಲ್ಲಿ ‘ಬಟರ್‌ಫೀಲ್ಡ್ 8′ ಚಿತ್ರದಲ್ಲಿನ ಶ್ರೇಷ್ಠ ಅಭಿನಯಕ್ಕೆ ಎಲಿಜಬೆತ್ ಟೇಲರ್ ಅವರಿಗೆ ಆಸ್ಕರ್ ಪ್ರಶಸ್ತಿ ಸಂದಿತು. 1966ರಲ್ಲಿ ‘ಹೂಸ್ ಅಫ್ರೈಡ್ ಆಫ್ ವರ್ಜಿನಿಯಾ ವೂಲ್ಫ್?’ ಅಭಿನಯಕ್ಕೆ ಅವರಿಗೆ ಮತ್ತೊಂದು ಆಸ್ಕರ್‌ನ ಗರಿ ಮೂಡಿತು. 1957ರಿಂದ ಸತತ ಮೂರು ವರ್ಷ ‘ರೇನ್ ಟ್ರೀ ಕಂಟ್ರಿ’, ‘ಕ್ಯಾಟ್ ಆನ್ ಎ ಹಾಟ್ ಟಿನ್ ರೂಫ್’ ಹಾಗೂ ‘ಸಡನ್ಲಿ, ದಿ ಲಾಸ್ಟ್ ಸಮ್ಮರ್’ ಚಿತ್ರಗಳ ನಟನೆಗಾಗಿ ಅವರ ಹೆಸರು ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡಿತ್ತು.

‘ಕ್ಲಿಯೋಪಾತ್ರಾ’ ಕಳೆದ ಶತಮಾನದ ಅತ್ಯಂತ ಜನಪ್ರಿಯ ಚಿತ್ರಗಳಲ್ಲೊಂದು. ಆ ಚಿತ್ರದಲ್ಲಿನ ದೃಶ್ಯ ವೈಭವಗಳು ಮರೆಯುವಂತದ್ದಲ್ಲ. ಹಾಲಿವುಡ್ ಚಿತ್ರದ ಅಭಿನಯಕ್ಕಾಗಿ 10 ಲಕ್ಷ ಡಾಲರ್ ಸಂಭಾವನೆ ಪಡೆದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಎಲಿಜಬೆತ್ ಪಾತ್ರವಾದದ್ದು ಆ ಚಿತ್ರದ ಮೂಲಕ. 1963ರಲ್ಲಿ ತೆರೆಕಂಡ ‘ಕ್ರಿಯೋಪಾತ್ರ’ ಆ ವರ್ಷ ಅತಿಹೆಚ್ಚು ಹಣ ಗಳಿಸಿದ ಚಿತ್ರವೂ ಹೌದು. ಆ ಚಿತ್ರ ನಾಲ್ಕು ಆಸ್ಕರ್‌ ಪ್ರಶಸ್ತಿಗಳನ್ನು ಗಳಿಸಿತು. ಈ ಚಿತ್ರದ ಪಾತ್ರಕ್ಕಾಗಿ 65 ಉಡುಗೆಗಳನ್ನು ಎಲಿಜಬೆತ್ ಬದಲಿಸಿದ್ದರು. ಆ ಸಂದರ್ಭದಲ್ಲಿ ಅದು ಗಿನ್ನೆಸ್ ದಾಖಲೆ.

KLive Special Article ಎಲಿಜಬೆತ್ ಟೇಲರ್ ಅವರ ಜೀವನದ ಮತ್ತೊಂದು ಮಜಲು ಅವರ ಸಮಾಜಸೇವೆ. ಏಡ್ಸ್ ತಡೆಗಟ್ಟಲು ವಿವಿಧ ಕಾರ್ಯಕ್ರಮಗಳಿಗಾಗಿ ಅವರು 10 ಕೋಟಿ ಡಾಲರ್ ಹಣ ಸಂಗ್ರಹಿಸಿದರು. ಏಡ್ಸ್ ಕುರಿತ ಸಂಶೋಧನೆಗೆಂದೇ ಸ್ಥಾಪಿತವಾದ ಅಮೆರಿಕನ್ ಫೌಂಡೇಷನ್‌ಗೆ ಸ್ವಯಂ ಆರ್ಥಿಕ ನೆರವು ನೀಡಿದರು. ಅಷ್ಟೇ ಅಲ್ಲ, ಎಲಿಜಬೆತ್ ತಮ್ಮದೇ ಹೆಸರಿನಲ್ಲಿ ‘ಏಡ್ಸ್ ಫೌಂಡೇಷನ್’ ಸ್ಥಾಪಿಸಿದರು. ‘ಎಲಿಜಬೆತ್ ಟೇಲರ್ ಏಡ್ಸ್ ಫೌಂಡೇಷನ್’ ಸಾಕಷ್ಟು ಸಂಶೋಧನೆಗಳನ್ನು ನಡೆಸಿತು.

ಆಭರಣಗಳ ಸಂಗ್ರಹಗಳಿಗೆ ಕೂಡಾ ಎಲಿಜಬೆತ್ ಟೇಲರ್ ಪ್ರಸಿದ್ಧರಾಗಿದ್ದರು. 33.19 ಕ್ಯಾರಟ್‌ನ ‘ಕ್ರುಪ್ ವಜ್ರ’ ಹಾಗೂ 69.42 ಕ್ಯಾರಟ್‌ನ ‘ಟೇಲರ್ ಬರ್ಟನ್ ವಜ್ರ’ ಅವರ ಸಂಗ್ರಹದಲ್ಲಿದ್ದ ಅತಿ ದುಬಾರಿ ಆಭರಣಗಳು. ‘ಪ್ಯಾಷನ್’, ‘ವೈಟ್ ಡೈಮಂಡ್ಸ್’ ಹಾಗೂ ‘ಬ್ಲ್ಯಾಕ್ ಪರ್ಲ್ಸ್’ ಹೆಸರಿನ ಸುಗಂಧದ್ರವ್ಯಗಳನ್ನೂ ಅವರು ಮಾರುಕಟ್ಟೆಗೆ ಪರಿಚಯಿಸಿದ್ದರು. ‘ಲುಸಿಲ್ಲೆ ಬಾಲ್, ಹಿಯರ್ ಈಸ್ ಲ್ಯೂಸಿ’ ಎಂಬ ಹಾಸ್ಯ ಸರಣಿಯಲ್ಲಿ ಕ್ರುಪ್ ವಜ್ರವನ್ನು ಎಲಿಜಬೆತ್ ಬಳಸಿದ್ದರು. ಎಲಿಜಬೆತ್ ಟೇಲರ್ 2011 ವರ್ಷದ ಮಾರ್ಚ್ 23 ರಂದು ನಿಧನರಾದರು.

ಬರಹ- ಎನ್.ಎನ್.ಕಬ್ಬೂರ
ಶಿಕ್ಷಕರು
ತಾ-ಸವದತ್ತಿ ಜಿ-ಬೆಳಗಾವಿ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ತಾಲ್ಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ- ಮಧು ಬಂಗಾರಪ್ಪ

Madhu Bangarappa ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರ ದೊರಕಿಸಲು...

Fisheries project 2024-25ನೇ ಸಾಲಿನ ಮತ್ಸ್ಯಸಂಪದ ಯೋಜನೆಗೆ ಅರ್ಹರಿಂದ ಅರ್ಜಿ ಆಹ್ವಾನ

Fisheries project 2024-25 ನೇ ಸಾಲಿನ ಪ್ರಧಾನ ಮಂತ್ರಿ ಮತ್ಯ್ಸ ಸಂಪದ...

Ravi Telex ಪತ್ರಕರ್ತ‌ “ಟೆಲೆಕ್ಸ್ ರವಿ ” ಗೆ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ

Ravi Telex ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ...

Inner Wheel East Shimoga ಆಶ್ರಮವಾಸಿಗಳ ಸೇವೆ ,ದೇವರ ಸೇವೆಗೆ ಸಮ- ವಾಗ್ದೇವಿ ಬಸವರಾಜ್

Inner Wheel East Shimoga ಆಶ್ರಮವಾಸಿಗಳ ಸೇವೆ ದೇವರ ಸೇವೆಗೆ ಸಮಾನ....