Saturday, October 10, 2026
Saturday, October 10, 2026

Rajeev Chandrasekhar ರಾಜೀವ್ ಚಂದ್ರಶೇಖರ್ ಗೆ ತಿರುವನಂತಪುರ ಲೋಕಸಭಾ ಟಿಕೆಟ್?

Date:

Rajeev Chandrasekhar ಲೋಕಸಭಾ ಚುನಾವಣೆಯಲ್ಲಿ ಕೇರಳದ ತಿರುವಂನತಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗುವವರ ಪಟ್ಟಿಯಲ್ಲಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್ ಹೆಸರು ಮುಂಚೂಣಿಯಲ್ಲಿದೆ. ಸದ್ಯ,ಇವರು ರಾಜ್ಯಸಭೆ ಸದಸ್ಯರು.
ಈ ಕ್ಷೇತ್ರದ ಸಂಸದ, ಕಾಂಗ್ರೆಸ್‌ನ ಶಶಿ ತರೂರ್‌, ಪುನರಾಯ್ಕೆ ಬಯಸಿ ಮತ್ತೆ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಕೇರಳದಲ್ಲಿ ಖಾತೆ ತೆರೆಯುವ ಹೆಜ್ಜೆಯಾಗಿ ತಿರುವನಂತಪುರ ಕ್ಷೇತ್ರದ ಮೇಲೆ ಬಿಜೆಪಿ ರಾಷ್ಟ್ರೀಯ ನಾಯಕರು ಹೆಚ್ಚು ಗಮನಹರಿಸಿದ್ದಾರೆ.

Rajeev Chandrasekhar ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಎಸ್‌. ಜೈಶಂಕರ್, ನಟಿ ಹಾಗೂ ನೃತ್ಯಪಟು ಶೋಭನಾ ಅವರ ಹೆಸರು ಸಹ ಕೇಳಿಬರುತ್ತಿವೆ.
ಬಿಜೆಪಿ ಮೂಲಗಳ ಪ್ರಕಾರ, ಸದ್ಯ ರಾಜೀವ್ ಚಂದ್ರಶೇಖರ್‌ ಅವರ ಹೆಸರು ಮುಂಚೂಣಿಯಲ್ಲಿದೆ. ಸಚಿವರು ಬೆಂಗಳೂರಿನಿಂದ ಸ್ಪರ್ಧಿಸಲು ಬಯಸಿದ್ದರೂ, ಆ ಸಾಧ್ಯತೆ ಕಡಿಮೆ. ತಿರುವನಂತಪುರ ಕ್ಷೇತ್ರವು 2ನೇ ಆಯ್ಕೆಯಾಗಬಹುದು.
ರಾಜೀವ್‌ ಚಂದ್ರಶೇಖರ್ ಅವರ ತಂದೆ–ತಾಯಿ ಮಲೆಯಾಳಿಗರು. 59 ವಯಸ್ಸಿನ ಸಚಿವರು ಅಹಮದಾಬಾದ್‌ನಲ್ಲಿ ಜನಿಸಿದ್ದು, ಸದ್ಯ ಬೆಂಗಳೂರಿನಲ್ಲಿ ವಾಸವಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...