Monday, April 28, 2025
Monday, April 28, 2025

Nitin Gadkari ಫೆ.22 ರಂದು ಶಿವಮೊಗ್ಗಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಆಗಮನ & 18 ಕಾಮಗಾರಿಗಳ ಉದ್ಘಾಟನೆ

Date:

Nitin Gadkari ಕೇಂದ್ರದಲ್ಲಿ ಮೋದಿ ಸರ್ಕಾರ ರಾಷ್ಟ್ರದ ಅಭಿವೃದ್ಧಿಗೆ ಸಾಕಷ್ಟು ಆದ್ಯತೆ ಕೊಟ್ಟಿದೆ. ರಾಷ್ಟ್ರೀಯ ಹೆದ್ದಾರಿಗೆ ಹೆಚ್ಚಿನ ಒತ್ತು ನೀಡಿದೆ. ಇದೇ 22 ರ ಗುರುವಾರ ಮಧ್ಯಾಹ್ನ ಕೇಂದ್ರದ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿದ ಸಂಂಸದ ರಾಘವೇಂದ್ರ ಪ್ರಧಾನಿ ಮೋದಿ ಶಿವಮೊಗ್ಗ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 18 ಕಾಮಗಾರಿಗಳ ಲೋಕಾರ್ಪಣೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಭಾರತ ಸ್ವಾತಂತ್ರ್ಯ ನಂತರ 91287 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಆಗಿದೆ ಎಂದರು.

54858 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಈ 10 ವರ್ಷದಲ್ಲಿ ಆಗಿದೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಹೆದ್ದಾರಿ ಅಭಿವೃದ್ಧಿ ಸಾಕಷ್ಟು ಆಗಿದೆ. ಶಿವಮೊಗ್ಗ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಒಟ್ಟು 6 ಜಿಲ್ಲೆಯ ಕಾಮಗಾರಿ ಉದ್ಘಾಟನೆಯಾಗಲಿದೆ ಎಂದರು.

Nitin Gadkari 6168 ಕೋಟಿ ಮೊತ್ತದ ಹೆದ್ದಾರಿ ಕಾಮಗಾರಿ ಲೋಕಾರ್ಪಣೆ, ಶಂಕುಸ್ಥಾಪನೆ ಆಯೋಜನೆ ಮಾಡಲಾಗಿದೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chanakya Chess School ಮೇ 2 ರಿಂದ ಮುಕ್ತ ಚೆಸ್ ತರಬೇತಿ ಶಿಬಿರ

Chanakya Chess School ಚಾಣಕ್ಯ ಚೆಸ್ ಸ್ಕೂಲ್ ವತಿಯಿಂದ ಶಿವಮೊಗ್ಗ ನಗರದ...