Department of School Education and Literacy ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿವಮೊಗ್ಗ ಇವರ ಸಹಯೋಗದಲ್ಲಿ ರಾಷ್ಟ್ರೀಯ ಆಯುಷ್ ಅಭಿಯಾನದಡಿ ಫೆ.6 ಮತ್ತು 7 ರಂದು 2 ದಿನಗಳ ಕಾಲ ಶಾಲಾ ಶಿಕ್ಷಕರಿಗೆ ಯೋಗ ತರಬೇತಿ ಕಾರ್ಯಕ್ರಮವನ್ನು ಬಸವನಗುಡಿಯ ಸರ್ಕಾರಿ ನೌಕರರ ವಿಕಾಸ ಕೇಂದ್ರ ಇಲ್ಲಿ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಆಯುಷ್ ಅಧಿಕಾರಿ(ಪ್ರ) ಡಾ.ಸಿ.ಎ.ಹಿರೇಮಠ ಇವರು ವಹಿಸಿದ್ದರು.
Department of School Education and Literacy ಮುಖ್ಯ ಅತಿಥಿಗಳಾಗಿ ಬಿ.ಹೆಚ್.ನಿರಂಜನಮೂರ್ತಿ, ಜಿ.ಹೆಚ್.ಪ್ರಭು, ಕಾಳಾನಾಯ್ಕ್ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಅನಿಲ್‍ಕುಮಾರ್ ಎಸ್.ಹೆಚ್, ಡಾ.ಮಲ್ಲಿಕಾರ್ಜುನ ಡಂಬಳ, ಡಾ.ಪತಂಜಲಿ ಕೆ.ವಿ, ಡಾ.ವೀಣಾ ಭಟ್, ಡಾ.ಗೀತಾ ಕೆ.ಎಸ್ ಮತ್ತು ಡಾ.ಶಿವಕುಮಾರ್ ಟಿ ಪಾಲ್ಗೊಂಡಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ವಹಿಸಿ ಮಾತನಾಡಿದರು. ಕಾರ್ಯಕ್ರಮ ಸಂಯೋಜನೆಯನ್ನು ಡಾ.ಸುರೇಂದ್ರ ಸಿ ಇವರು ನೆರವೇರಿಸಿದರು.