Woman Entrepreneur ಶಿವಮೊಗ್ಗ ನಗರದ ಮಥುರಾ ಪಾರಾಡೈಸ್ನಲ್ಲಿ 2024ರ ಫೆಬ್ರವರಿ 13ರಂದು ಸ್ವೇದ ಮಹಿಳಾ ಉದ್ಯಮಿಗಳ ಸಂಘದಿಂದ “ಜೆಡ್” ಯೋಜನೆ ಕುರಿತು ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಉದ್ಯಮ ನಡೆಸುತ್ತಿರುವ ಶಿವಮೊಗ್ಗ ಮಹಿಳಾ ಉದ್ಯಮಿಗಳು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
ಕೇಂದ್ರ ಸರ್ಕಾರದ ಜೆಡ್ ಯೋಜನೆ ಬಗ್ಗೆ ತಜ್ಞರಿಂದ ಮಾಹಿತಿ ಕೊಡುವ ಕಾರ್ಯಾಗಾರ ಇದಾಗಿದೆ. ಕೇಂದ್ರ ಸರ್ಕಾರವು ಏಪ್ರಿಲ್ 1 ರವರೆಗೆ ಜೆಡ್ ಸರ್ಟಿಫಿಕೇಶನ್ ಉಚಿತವಾಗಿ ಮಾಡಿಕೊಡುವ ವ್ಯವಸ್ಥೆ ಮಾಡಿದೆ.
2024ರ ಏಪ್ರಿಲ್ 1ರ ನಂತರ ಜೆಡ್ ಪ್ರಮಾಣ ಪತ್ರ ಪಡೆಯಲು ಹತ್ತು ಸಾವಿರ ರೂಪಾಯಿ ಶುಲ್ಕ ಪಾವತಿಸಬೇಕು. ಶಿವಮೊಗ್ಗದಲ್ಲಿ ಭಾಗವಹಿಸುವ ತರಬೇತುದಾರರು ಮಾಹಿತಿಯ ಜೊತೆಗೆ ಪ್ರತಿಯೊಬ್ಬ ಉದ್ಯಮಿಗೂ ಅವರೇ ಸ್ವತಃ ಸರ್ಟಿಫಿಕೇಶನ್ ಮಾಡಿಸಿಕೊಡಲಿದ್ದಾರೆ.
Woman Entrepreneur ಇದರೊಂದಿಗೆ ಸ್ಥಳದಲ್ಲಿಯೇ ಉದ್ಯಮ ರೆಜಿಸ್ಟ್ರೇಷನ್ ಕೂಡ ಮಾಡಿಕೊಡಲಾಗುವುದು.
ಜೆಡ್ ಸರ್ಟಿಫಿಕೇಟ್ನಿಂದ ಬ್ಯಾಂಕಿನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ, ಸರ್ಕಾರದ ಮಾರುಕಟ್ಟೆ ಅಭಿವೃದ್ಧಿ ಯೋಜನೆಗಳಲ್ಲಿ ಸಹಾಯ ಮೊದಲಾದ ಹಲವು ಉಪಯುಕ್ತತೆಗಳಿದೆ. ಮಹಿಳಾ ಉದ್ಯಮಿಗಳು ತರಬೇತಿಯ ಉಪಯುಕ್ತತೆಯನ್ನು ಪಡೆದುಕೊಳ್ಳಬೇಕೆಂದು ಸ್ವೇದ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆ ಡಾ. ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ್ ಕೋರಿದ್ದಾರೆ.
ತರಬೇತಿಗೆ ಹೆಸರು ನೋಂದಾಯಿಸಲು ಫೆಬ್ರವರಿ 9 ಕಡೆಯ ದಿನಾಂಕವಾಗಿರುತ್ತದೆ. ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗೆ 9740760061, 9243314217, 9449967914 ಸಂಪರ್ಕಿಸಬಹುದಾಗಿದೆ.
