News Week
Magazine PRO

Company

Monday, April 21, 2025

Ayodhya Ram Mandir ಜನವರಿ 22, ನಮಗೆಲ್ಲ ಅಚ್ಛೇ ದಿನ್- ಡಾ.ಸಿ.ಜಿ.ರಾಘವೇಂದ್ರ ವೈಲಾಯ.

Date:

Ayodhya Ram Mandir ಆಡದಲೇ ಮಾಡುವನು ರೂಢಿಯೊಳ ಗುತ್ತಮನು ಎಂಬ ನಾಣ್ಣುಡಿಯಂತೆ ಅತ್ಯುನ್ನತ ಆದರ್ಶಗಳನ್ನು ತಾನು ಸ್ವತಃ ಬದುಕಿ ತೋರಿಸಿದವನು ಶ್ರೀರಾಮ. ತಾನು ಸ್ವಪೌರುಷದಿಂದ ಗೆದ್ದುಕೊಂಡ ಹಾಗೂ ಬಂಗಾರದ ತಟ್ಟೆಯಲ್ಲಿಟ್ಟು ತನಗೆ ಕೊಡಮಾಡಲ್ಪಟ್ಟ ಸ್ವರ್ಣಲಂಕೆಯನ್ನು ತಿರಸ್ಕರಿಸಿ “ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂದು ಉದ್ಘೋಷಿಸಿ ತನ್ನ ತಾಯ್ನಾಡಿಗೆ ಮರಳಲು ಹಪಹಪಿಸಿದವನು ಶ್ರೀರಾಮ.

ಅಸ್ತೇಯ & ಅಪರಿಗ್ರಹಗಳೆಂಬ ಸನಾತನ ಮೌಲ್ಯಗಳ ಸಾಕಾರ ಮೂರ್ತಿಯಾದ ಶ್ರೀರಾಮನನ್ನು ಯಃಕಶ್ಚಿತ್ ಮಾನವನೆನ್ನಲು ಸಾಧ್ಯವೇ? ಸ್ವಾರ್ಥ ಸಾಧನೆಗಾಗಿ ಸ್ವಜನರ ರಕ್ತಪಾತಕ್ಕೂ ಹೇಸದ ಕೌರವರಂಥ ಬಹುಜನರ ಮಧ್ಯೆ, ಕೇವಲ ಪಿತೃವಾಕ್ಯ ಪರಿಪಾಲನೆಗಾಗಿ ತನ್ನ ಸರ್ವಸ್ವವನ್ನೂ ಕ್ಷಣಮಾತ್ರದಲ್ಲಿ ಪರಿತ್ಯಜಿಸಿ ತಾನು ಏಕಾಂಗಿಯಾಗಿ ಕಾಡಿಗೆ ಹೊರಟು ನಿಂತ ಇಂಥ ಮಹಾ ತ್ಯಾಗಿಯೂ ಯೋಗಿಯೂ ಎಲ್ಲೇ ಇದ್ದರೂ ಆತ ದೇವರೇ ಸರಿ. “ರಾಮೋ ವಿಗ್ರಹವಾನ್ ಧರ್ಮ” ಎಂದು ಹೇಳಿದ ಮಹರ್ಷಿ ವಾಲ್ಮೀಕಿಗಳೇನು ಸಾಮಾನ್ಯರೇ? ಆತ ಗುಣವಾನ್, ವೀರ್ಯವಾನ್, ಧರ್ಮಜ್ಞ, ಕೃತಜ್ಞ, ಸತ್ಯವಾಕ್ಯ ಪರಿಪಾಲಕ, ದೃಢ, ವರ್ಚಸ್ವಿ, ಸರ್ವ ಭೂತೇಷು ಹಿತ, ವಿದ್ವಾನ್, ಸಮರ್ಥ, ಪ್ರಿಯದರ್ಶನ, ಆತ್ಮವಾಂಕ, ಜಿತಕಾಮ, ಜಿತಕ್ರೋಧ, ದ್ಯುತಿಮಾನ್, ಅನಸೂಯಕ, ಬಿಬ್ಯತಿ ದೇವಾ, ಭಕ್ತವತ್ಸಲ, ಅನಾಥರಕ್ಷಕ. ಇಂಥ ಶೋಡಷಗುಣ ಪರಿಪೂರ್ಣನಾದ ಶ್ರೀರಾಮಚಂದ್ರನು ಹಿಂದೊಮ್ಮೆ ನಮ್ಮೀ ಭರತಭೂಮಿಯಲ್ಲಿ ನಡೆದಾಡಿದ್ದ ನೆನ್ನುವುದೇ ಭಾರತೀಯರಾದ ನಮಗೆಲ್ಲಾ ಹೆಮ್ಮೆ. ನ ಭೂತೋ ನ ಭವಿಷ್ಯತಿ ಎಂಬಂತೆ ಇದಕ್ಕಿಂತ ಹೆಚ್ಚಿನ ಆದರ್ಶವನ್ನು ನಾವು ಇನ್ನೆಲ್ಲಿ ಕಂಡೇವು?

Ayodhya Ram Mandir ಹಿಂದುಗಳಿಗೆ ಸಪ್ತ ಮೋಕ್ಷದಾಯಕ ಪುಣ್ಯ ತೀರ್ಥಕ್ಷೇತ್ರಗಳ ಪೈಕಿ ಮೊತ್ತ ಮೊದಲನೆಯದಾದ ಈ ಅಯೋಧ್ಯಾ ನಗರವನ್ನು ಸರ್ವಜನಾನುರಾಗಿ ಧರ್ಮಪ್ರಭು ಶ್ರೀರಾಮನ ಕಾಲಾನಂತರದಲ್ಲಿ ಆತನ ಪುತ್ರ ಕುಶನು ಮರುನಿರ್ಮಿಸಿದನು. ತದನಂತರ ಕ‌ಲಿಯುಗದ ಮಹಾನ್ ಚಕ್ರವರ್ತಿಯಾದ ಶಕಪುರುಷ ವಿಕ್ರಮಾದಿತ್ಯನು ಸರಯೂ ನದಿ ತಟದಲ್ಲಿ ನಿರ್ಮಿಸಿದ ಅಯೋಧ್ಯೆಯಲ್ಲಿನ (ಅವಧ್) ಈ ಮೂಲ ರಾಮಮಂದಿರವನ್ನು ಮತ್ತೆ ಜೀರ್ಣೋದ್ಧಾರ ಮಾಡಿದ್ದು ಶುಂಗವಂಶದ ಮುಕುಟಮಣಿ ಪುಷ್ಯಮಿತ್ರಶುಂಗ. ತದನಂತರ ೫ನೇ ಶತಮಾನದಲ್ಲಿ ಅದು (ಸಾಕೇತ) ಬೌದ್ಧರ ಪ್ರಮುಖ ಕೇಂದ್ರವಾಗಿತ್ತು ಹಾಗೂ ಅಲ್ಲಿ ಆದಿನಾಥನೂ ಸೇರಿದಂತೆ ಐದು ಜನ ತೀರ್ಥಂಕರರು ಜನ್ಮತಾಳಿದ್ದರು. ಆ ನಂತರ ಕನೌಜಿನ ರಾಜ ಜಯಚಂದನು ಅದನ್ನು ನವೀಕರಿಸಿದನು. ಆತ ಪಾಣಿಪತ್‌ ಯುದ್ಧದಲ್ಲಿ ಮರಣಿಸಿದ ನಂತರ ಅನೇಕ ಆಕ್ರಮಣಕಾರರು ಕಾಶಿ, ಮಥುರಾಗಳ ಮೇಲೆ ದಾಳಿ ಮಾಡಿ ಅಲ್ಲಿದ್ದ ಹಲವು ಮೂಲ ದೇವಾಲಯವನ್ನು ನೆಲಸಮ ಮಾಡಿ ಅಲ್ಲಿನ ಅರ್ಚಕರನ್ನು ಹತ್ಯೆಗೈದರು. ಆದರೆ 14ನೇ ಶತಮಾನದವರೆಗೂ ಅವರಿಗೆ ಅಯೋಧ್ಯೆಯ ಮೂಲ ರಾಮ ದೇಗುಲವನ್ನು ಕೆಡವಲು ಸಾಧ್ಯವಾಗಿರಲಿಲ್ಲ. ಸಿಕಂದರ್ ಲೋದಿಯ ಆಳ್ವಿಕೆಯಲ್ಲೂ ಅಲ್ಲಿ ಭವ್ಯವಾದ ರಾಮ ದೇಗುಲವಿದ್ದ ಪುರಾವೆಗಳಿವೆ.

ಮೊಘಲರು 14ನೇ ಶತಮಾನದ ನಂತರ ಭಾರತದಲ್ಲಿ ಅಧಿಕಾರಕ್ಕೆ ಬಂದರು ಮತ್ತು 1527-28ರ ಅವಧಿಯಲ್ಲಿ ಬಾಬರನ ಸೇನಾ ದಂಡ ನಾಯಕನಾದ ಮೀರ್ ಬಾಕಿಯು ಅಲ್ಲಿನ ಮಂದಿರವನ್ನು ನೆಲಸಮಗೊಳಿಸಿ ಅದೇ ಭಗ್ನ ಅವಶೇಷಗಳಿಂದ ಅಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಿದನು. ತದನಂತರದ ಐತಿಹಾಸಿಕ ವಿವರಗಳು ಈಗಿನವರಿಗೆ ತಿಳಿಯದ್ದೇನಿಲ್ಲ.

ಸಾಕೇತದ ರಾಮ ಮಂದಿರವನ್ನು ಭೌತಿಕವಾಗಿ ಕೆಡವಿದ ಮತಾಂಧರನ ಕಾಲದಿಂದ ತೊಡಗಿ, ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ ಅಂದಿನ ಸೆಕ್ಯುಲರ್ ಸರ್ಕಾರ ಮತ್ತು ಕೊಟ್ಟ ಕೊನೆಗೆ ರಾಮಂದಿರದ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ ಸರ್ವೋಚ್ಚ ನ್ಯಾಯಾಲಯದ ಸುದೀರ್ಘ ಕಾನೂನು ಹೋರಾಟದವರೆಗಿನ ಆಸ್ತಿಕ ಹಿಂದೂಗಳ ಈ ಅವಿರತ ಹೋರಾಟವು, “ಧರ್ಮೋ ರಕ್ಷತಿ ರಕ್ಷಿತ” ಎಂಬುದನ್ನು ಮತ್ತೆ ಸಾಬೀತುಪಡಿಸಿದೆ. ಭಗವಾನ್ ಕೇ ಘರ್ ಮೇ ದೇರ್ ಸಹೀ ಅಂಧೇರಾ ನಹಿ ಎಂದು ನಂಬಿದ್ದು ಇಂದು ಸಾರ್ಥಕವಾಯ್ತು. ನಮ್ಮ ದೇಶವು ವಸಾಹತುಶಾಹಿಗಳ ಕಪಿಮುಷ್ಟಿಯಿಂದ ಸ್ವಾತಂತ್ರ್ಯ ಪಡೆದು 75ವರ್ಷಗಳು ಕಳೆದ ಈ ಅಮೃತ ಕಾಲದಲ್ಲಿ ರಾಷ್ಟ್ರಪುರುಷ ಶ್ರೀರಾಮಚಂದ್ಭರನ ಭವ್ಯವೂ ದಿವ್ಯವೂ ಆದ ಮಂದಿರವು ಆತನ ಜನ್ಮಭೂಮಿಯೂ ಕರ್ಮ ಭೂಮಿಯೂ ಆದ ಅಯೋಧ್ಯೆಯಲ್ಲಿಯೇ ನಿರ್ಮಾಣ ಗೊಂಡು ಸದ್ಯದಲ್ಲೇ ಲೋಕಾರ್ಪಣೆಗೊಳ್ಳುತ್ತಿರುವುದು ಸನಾತನ ಭಾರತದ ಸಾಂಸ್ಕೃತಿಕ & ಆಧ್ಯಾತ್ಮಿಕ ಪುನರುಜ್ಜೀವನದ ಶುಭ ಸಂಕೇತವಲ್ಲದೇ ಇನ್ನೇನು? ಅಚ್ಛೇ ದಿನ್ ಬರುತ್ತಿದೆ ಎಂದು ನಂಬಿದ್ದು ಸಾರ್ಥಕವಾಯಿತು. ಭವಿಷ್ಯದಲ್ಲಿ ಭಾರತವು ಮತ್ತೆ ವಿಶ್ವಗುರುವಾಗುವ ಮುನ್ಸೂಚನೆ ಇದಲ್ಲವೇ? ಎಲ್ಲದಕ್ಕೂ ಕಾಲ ಕೂಡಿ ಬರಬೇಕು, ಅಷ್ಟೇ.ತಾಳಿದವನು ಬಾಳಿಯಾನು‌.

ಇರಾಕಿನ ಕುರ್ದಿಸ್ತಾನದ ಗವಿಗಳಲ್ಲಿ ದೊರೆತ ಶಿಲಾಯುಗದ ಪಳೆಯುಳಿಕೆಗಳಿಂದು ಹಿಡಿದು, ಸಿರಿಯಾ, ಟರ್ಕಿ, ಮೆಕ್ಸಿಕೋ, ಪೆರು (ಇಂಕಾಗಳು), ಈಜಿಪ್ಟ್, ರಷ್ಯಾ, ಜರ್ಮನಿ, ಶ್ರೀಲಂಕಾ ಹೀಗೆ ಎಲ್ಲೆಲ್ಲೂ ರಾಮನ ಅಸ್ತಿತ್ವದ ಕುರಿತು ಐತಿಹಾಸಿಕ ಪುರಾವೆಗಳು ದೊರೆತಿವೆ. ಜಗತ್ತಿನಲ್ಲಿ ಅತೀ ಹೆಚ್ಚು ಮುಸ್ಲಿಮರಿರುವ ಇಂಡೋನೇಷ್ಯಾದ ಜನರು ತಮ್ಮ ರಿಲಿಜನ್ ಬದಲಾದರೂ ತಾವು ತಮ್ಮ ಪೂರ್ವ ಸಂಸ್ಕೃತಿಯನ್ನು & ಪೂರ್ವಜನಾದ ರಾಮನ ಸ್ಮೃತಿಯನ್ನು ಇಂದಿಗೂ ಮರೆತಿಲ್ಲ‌. ಸಮಕಾಲೀನ ಭಾರತೀಯರಂತೆ ಅವರಿಗೆ ತಮ್ಮ ಪೂರ್ವೇತಿಹಾಸದ ಕುರಿತು ಗುಲಗಂಜಿ ಯಷ್ಟೂ ಉಪೇಕ್ಷೆ ಮತ್ತು ಕೀಳರಿಮೆಗಳಿಲ್ಲ. ಈ ಸಮಗ್ರ & ವಿಶಾಲ ಭಾವವೇ ಅವರ ರಾಷ್ಟ್ರೀಯತೆಗೆ ಭದ್ರ ಬುನಾದಿ. ಸಕಲ ಮಾನವ ಕುಲಕ್ಕೆ ಈತ ಮುಕುಟಮಣಿ. ದಲಿತ ಕವಿ ವಾಲ್ಮೀಕಿಯಿಂದ ರಚಿತವಾದ ಆ ಮಹಾನ್ ದೃಶ್ಯಕಾವ್ಯ ರಾಮಾಯಣವು ವಿದೇಶಗಳಲ್ಲಿ ಹಲವಾರು ಪ್ರಕ್ಷಿಪ್ತ ಹೆಸರುಗಳಿಂ ಪ್ರಸಿದ್ಧಿ ಪಡೆದಿದೆ. ಥೈಲ್ಯಾಂಡ್, ಬರ್ಮಾ (ಬ್ರಹ್ಮದೇಶ), ಜಾವಾ, ಮಲೇಶಿಯಾ, ಇಂಡೋನೇಷ್ಯಾ, ಕಾಂಬೋಡಿಯಾ, ಚೀನಾ, ಜಪಾನ್, ಫಿಲಿಪ್ಪೀನ್ಸ್, ಲಾವೋಸ್, ಮಂಗೋಲಿಯಾ ಮೊದಲಾದ ದೇಶಗಳಲ್ಲಿ ರಾಮನ ಕುರಿತು ವ್ಯಾಪಕವಾದ ಭಕ್ತಿ ಮತ್ತು ಶ್ರದ್ಧೆಗಳನ್ನು ಇಂದಿಗೂ ನಾವು ಕಾಣಬಹುದು.

ರಾಮ & ರಾಮಾಯಣ ಆ ದೇಶಗಳ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗ. ಪ್ರಾಚೀನ ಈಜಿಪ್ಟ್, ಇರಾಕ್, ಸಿರಿಯಾ, ಟರ್ಕಿ, ಮಧ್ಯಪ್ರಾಚ್ಯ, ರಷ್ಯಾ, ಮೆಕ್ಸಿಕೋ, ಗ್ವಾಟೆಮಾಲಾ, ದಕ್ಷಿಣ ಅಮೆರಿಕಾ, ಪೆರು, ಮೊದಲಾದ ಹಲವು ಕಡೆಗಳಲ್ಲಿ ರಾಮನ ಶಿಲ್ಪಗಳು, ಚಿತ್ರಗಳು, ನಾಣ್ಯಗಳು ದೊರೆತಿವೆ. ಅಲ್ಲಿನ ಸಾಹಿತ್ಯ, ಭಾಷೆ, ನದಿ/ಜನ/ ಸ್ಥಳಗಳ ಹೆಸರುಗಳು, ಕಲೆ, ನೃತ್ಯ, ಧಾರ್ಮಿಕ ಆಚರಣೆಗಳಲ್ಲಿ ಸಂಸ್ಕೃತ, ರಾಮ & ರಾಮಾಯಣದ ಅಚ್ಚಳಿಯದ ಪ್ರಭಾವವಿರುವುದು ಕಂಡು ಬಂದಿದೆ. ಥೈಲ್ಯಾಂಡಿನ ರಾಜವಂಶಸ್ಥರು ತಮ್ಮನ್ನು ರಾಮನ ವಂಶಜರೆಂದೇ ಗುರುತಿಸಿಕೊಳ್ಳುತ್ತಾರೆ. ಹೀಗೆ ರಾಮನ ಆದರ್ಶವನ್ನು ಕೇವಲ ಭಾರತ ಮಾತ್ರವಲ್ಲ ಸಮಸ್ತ ವಿಶ್ವವೇ ಒಪ್ಪಿಕೊಂಡಿದೆ.

ರಾಮನ ಜೀವನಗಾಥೆಯು ಒಂದು ಅಮರ ಪ್ರೇಮಕಥೆ. ತನ್ನ ಜನಾನಾದ ಅಸಂಖ್ಯಾತ ಸ್ತ್ರೀಯರಲ್ಲಿ ಓರ್ವಳಾದ ಮತ್ತು ತನ್ನ 14 ಮಕ್ಕಳನ್ನು ಹೆತ್ತು ಕೊನೆಯ ಮಗುವಿನ ಪ್ರಸವ ಕಾಲದಲ್ಲಿ ಅಸುನೀಗಿದ ಮುಮ್ತಾಜಳ ನೆನಪಿಗೆ ಕಟ್ಟಿದ ತಾಜ್ಮಹಲನ್ನು ಪ್ರೇಮಸೌಧ ಎನ್ನುತ್ತಾರೆ. ಏಕಪತ್ನಿ ವೃತಸ್ಥನಾದ ರಾಮನು ತನ್ನ ಅಪಹೃತ ಪತ್ನಿ ಸೀತೆಯ ಶೋಧಕಾಲದಲ್ಲಿ ಕಪಿಸೇನೆಯ ಸಹಾಯದಿಂದ ನಿರ್ಮಿಸಿದ ರಾಮಸೇತುವು ಇಂದು ನಮ್ಮ ಕಣ್ಣ ಮುಂದೆ ಇರುವಾಗ ಅಮರ ಪ್ರೇಮಕ್ಕೆ ಇದಕ್ಕಿಂತ ಭವ್ಯ ಸ್ಮಾರಕವನ್ನು ಇನ್ನೆಲ್ಲಿ ಕಂಡೇವು? ಮುಮ್ತಾಜಳ ಸಾವಿನ ನಂತರ ತನ್ನ ಸ್ವಂತ ಮಗಳಾದ ಜಹಾನರಾಳನ್ನು ಪತ್ನಿಯಾಗಿಸಿಕೊಂಡ ಆ ಕಾಮುಕನನ್ನು ಪ್ರೇಮಿ ಎನ್ನುವುದು ಸೂಕ್ತವೇ? ರಾಮಸೇತುವು ಮಾನವ ನಿರ್ಮಿತ ಎಂದು ವಿಜ್ಞಾನಿಗಳು ಕೂಡಾ ಒಪ್ಪುವ ಈ ಕಾಲಕ್ಕೆ ರಾಮನಿಗಿಂತ ಮಿಗಿಲಾದ ಆದರ್ಶ ಪುರುಷ ನಮ್ಮ ದೇಶದ ಇತಿಹಾಸದಲ್ಲಿ ಇನ್ನು ಯಾರಿದ್ದಾರೆ?

ತ್ರೇತೆಯ ಶ್ರೀರಾಮನ ಆದರ್ಶಗಳು ದೇಶ ಕಾಲಾತೀತವಾಗಿ ಕಲಿಯುಗಕ್ಕೂ ಅಷ್ಟೇ ಪ್ರಸ್ತುತವಾಗಿವೆ. ದಲಿತೋದ್ಧಾರ, ಸ್ತ್ರೀಪರ ಹೋರಾಟ, ಪರಧರ್ಮ ಸಹಿಷ್ಣುತೆ, ವಚನ ಬದ್ಧತೆ, ದೀನದುರ್ಬಲರ ರಕ್ಷಣೆ, ಜನಾಭಿಪ್ರಾಯಕ್ಕೆ ಮನ್ನಣೆ, ಸಮಾಜವಾದ…

ಹೀಗೆ ಇಂದು ಆಧುನಿಕ ಎನ್ನಲಾಗುವ ಮಹಾ ಉದಾರವಾದಿ ಆದರ್ಶಗಳನ್ನೆಲ್ಲಾ ಸಹಸ್ರಾರು ವರ್ಷಗಳ ಹಿಂದೆಯೇ ಅಕ್ಷರಶಃ ಪಾಲಿಸಿದ ಮಹಾತ್ಮನೀತ. ಶಾಸ್ತ್ರವು “ಪಿತಾ ಹಿ ಸರ್ವಭೂತಾನಾಂ ರಾಜಾ ಭವತಿ ಧರ್ಮತಃ’. ಎಂದರೆ, ಧರ್ಮದ ದೃಷ್ಟಿಯಲ್ಲಿ ರಾಜನು ಪ್ರಜೆಗಳಿಗೆಲ್ಲರಿಗೂ ತಂದೆಯಾಗುತ್ತಾನೆ ಎನ್ನುತ್ತದೆ.

ಒಬ್ಬ ರಾಜನಾದವನು ಹೇಗಿರಬೇಕು ಎಂಬುದನ್ನೇ ನಾವು ಶ್ರೀರಾಮನ ಪ್ರತಿಯೊಂದು ನಡೆನುಡಿಗಳಲ್ಲೂ ಕಾಣುವೆವು. ರಾಜ ಮತ್ತು ಪ್ರಜೆಗಳ ಸಂಬಂಧವು ತಂದೆ ಮಕ್ಕಳ ಸಂಬಂಧದಂತಿರಬೇಕೆಂದ ರಾಮನವು ಆದರ್ಶವು ಪ್ರಜಾಪ್ರಭುತ್ವಕ್ಕೇ ಮೇರು ಉದಾಹರಣೆಯಲ್ಲವೇ?

ದಶರಥನ ಜೀವಿತ ಕಾಲದಲ್ಲಿ ಎಲ್ಲಾ ಪರಿಜನರು, ಅದರಲ್ಲೂ ವಿಶೇಷವಾಗಿ ಸ್ತ್ರೀಯರು ರಾಮನೇ ತಮಗೆ ರಾಜನಾಗಬೇಕೆಂದು ಬಯಸಿದ್ದರಂತೆ. ಆತ ಅಡವಿಯಿಂದ ಹಿಂತಿರುಗಿ ಬರಲೆಂದು 14 ವರ್ಷಗಳ ಕಾಲ ನಾನಾ ವೃತಗಳನ್ನೂ ಕೈಗೊಡಿದ್ದರಂತೆ. ಆದರೆ ಕೊನೆಗೆ ಸಾಕ್ಷಾತ್ ರಾಮನೇ ರಾಜನಾಗಿ ಒದಗಿದಾಗ ಸೀತಾ ಸಹಿತನಾಗಿ ಆತನನ್ನು ರಾಜ್ಯದಲ್ಲಿ ಉಳಿಸಿಕೊಳ್ಳಲು ಅದೇ ಪ್ರಜೆಗಳಿಗೆ ಆಗಲಿಲ್ಲ. ಇದರಿಂದ ನಾವು ಕಿಂಚಿತ್ತಾದರೂ ಪಾಠವನ್ನು ಕಲಿಯಬೇಡವೇ? ಹಿಂದೊಮ್ಮೆ ಕಾಡಿಗೆ ಹಿಂಬಾಲಿಸಿಕೊಂಡು ಹೊರಟ ಪುರಜನರೇ ಮುಂದೊಮ್ಮೆ ರಾಮನನ್ನು ಅಕಾರಣವಾಗಿ ನಿಂದಿಸಿ ಕೊನೆಗೆ ಸೀತೆ ಅಡವಿಪಾಲಾಗಲು ತಾವು ಕಾರಣರಾದರಲ್ಲವೇ? ಜನರ ನೆನಪು ಅಲ್ಪಾಯುಷಿ ಎನ್ನುತ್ತಾರೆ. ರಾಮರಾಜ್ಯವನ್ನು ಸದಾ ಬಯಸುವ ನಮಗೆ ಅದನ್ನು ಉಳಿಸಿಕೊಳ್ಳುವ ಯೋಗ್ಯತೆ ಇದೆಯೇ? ಆಳುವ ರಾಜ ತಾನು ಯೋಗಿಯಾದರೇ ಸಾಕೇ? ಪ್ರಜೆಗಳಿಗೆ ಯಾವುದೇ ಕರ್ತವ್ಯ & ಬಾಧ್ಯತೆಗಳಿಲ್ಲವೇ? ದೇಶವನ್ನು ಮುನ್ನಡೆಸುವ ನೇತಾರನಿಗೆ ರಾಜಕೀಯ, ಧಾರ್ಮಿಕ & ನೈತಿಕ ಬಲವನ್ನು ತುಂಬಬೇಕಾದರೆ ನಾವು ಕೂಡಾ ಅಷ್ಟೇ ಧರ್ಮಿಷ್ಠರಾಗಿರಬೇಡವೇ? ರಾಮಬಾಣದ ಅಗಣಿತ ಶಕ್ತಿಗೆ ಆತನ ತಪಸ್ಸು, ನೈತಿಕತೆ & ಧರ್ಮ ನಿಷ್ಠೆಯೇ ಮೂಲ ಕಾರಣ. ನಾವು ನಾಡಿಗಾಗಿ ಏನನ್ನೂ ಕೊಡುಗೆ ನೀಡದೇ, ಪ್ರಭುತ್ವದಿಂದಲೇ ಎಲ್ಲವನ್ನೂ ಉಚಿತವಾಗಿ ನಿರೀಕ್ಷಿಸುವ ಹೀನ ಮನಸ್ಥಿತಿಯವರಾಗಿದ್ದೇವೆ. ಇದು ಶ್ರಮಜೀವನದ ಬೋಧೆ ಮಾಡುವ ರಾಮರಾಜ್ಯದ ಕಲ್ಪನೆಗೆ ತದ್ವಿರುದ್ಧ ವಾದದ್ದು. ಜೆ.ಎಫ್.ಕೆನೆಡಿ ಹೇಳಿದ ಮಾತುಗಳು ಇಲ್ಲಿ ಪ್ರಸ್ತುತ ಎನಿಸುತ್ತವೆ, “ದೇಶ ನಮಗೇನು ಕೊಟ್ಟಿದೆ ಎಂದು ಕೇಳುವ ಮುನ್ನ ನಾವು ದೇಶಕ್ಕಾಗಿ ಏನು ನೀಡಿದ್ದೇವೆ ಎಂದು ಕೇಳಿಕೊಳ್ಳಿ”. ಯಥಾ ರಾಜ ತಥಾ ಪ್ರಜಾ.

ರಾಮರಾಜ್ಯವೇ ನಿಜವಾದ ಪ್ರಜಾರಾಜ್ಯ. ಪ್ರಜಾಪ್ರಭುತ್ವದ ನೈಜ ಪರಿಕಲ್ಪನೆಗೆ ಇದಕ್ಕಿಂತ ಉತ್ತಮ ನಿದರ್ಶನ ಇನ್ನೊಂದಿಲ್ಲ. ಸಂವಿಧಾನದ ಮೂಲಪ್ರತಿಯಲ್ಲಿ ಮೂಲಭೂತ ಹಕ್ಕುಗಳನ್ನು ವಿವರಿಸುವ ಪುಟದಲ್ಲಿ ರಾಮಪಟ್ಟಾಭಿಷೇಕದ ರೇಖಾಚಿತ್ರವು ಮುದ್ರಿತವಾಗಲು, ರಾಮನು ಸುದೀರ್ಘ ವನವಾಸದ ತರುವಾಯ ರಾಜನಾಗಿ ಅಧಿಕಾರ ವಹಿಸಿಕೊಂಡ ನಂತರ ಆತ ಜನಾಭಿಪ್ರಾಯಕ್ಕೆ ಕೊಟ್ಟ ಮನ್ನಣೆಯೇ ಮೂಲ ಪ್ರೇರಣೆ‌ಯಾಗಿದೆ. ರಾಮನ ನಡೆ, ನುಡಿ, ಬದುಕು ಅಷ್ಟೇ ಏಕೆ ಅಂತ್ಯವೂ ಕೂಡಾ ಸ್ಮರಣೀಯವೇ. ನಿರಪೇಕ್ಷತೆಗೆ, ನಿಸ್ವಾರ್ಥತೆಗೆ ಆತನ ಬದುಕೇ ಅನ್ವರ್ಥ. A man may die, nations may rise and fall, but the idea lives on.

ಹಾಗಾಗಿ ಈ ರಾಮರಾಜ್ಯವೆಂಬ ಆದರ್ಶದ ಪರಿಕಲ್ಪನೆಯು ದೇಶ ಕಾಲಾತೀತವಾದದ್ದು. ಇಂಥ ಕಲ್ಪನೆಯೊಂದನ್ನು ಹುಟ್ಟು ಹಾಕಬಲ್ಲ ಮತ್ತು ತನ್ನ ಬದುಕಿನಲ್ಲಿ ಬಾಳಿ ತೋರಿಸಬಲ್ಲ ರಾಮನಂಥವರು ಕೇವಲ ಈ ಪವಿತ್ರ ಮಣ್ಣಿನಲ್ಲಿ ಮಾತ್ರವೇ ಹುಟ್ಟಬಲ್ಲರು. ಭೂಮಿಯ ಮೇಲೆ ಅಂತಿಮ ಮಾನವನು ಇರುವತನಕ ಈ ಆದರ್ಶವು ಅಬಾಧಿತವಾಗಿ ಉಳಿಯಲಿದೆ.

ತಾನು ಜೀವ ಕಳೆದುಕೊಳ್ಳಬೇಕಾಗಿ ಬಂದರೂ ಕೆಟ್ಟದ್ದನ್ನು ಎಂದೂ ಮಾಡಬಾರದು. ಸ್ವಂತ ಜೀವನವನ್ನು ಪಣಕ್ಕಿಟ್ಟಾದರೂ ಒಳ್ಳೆಯ ಕೆಲಸವನ್ನು ಮಾಡಬೇಕೆನ್ನುವುದೇ ಸನಾತನ ಧರ್ಮದ ಬೋಧೆ. ಈ ಆದರ್ಶವನ್ನು ವ್ಯಕ್ತಿಯೋರ್ವನು ತನ್ನ ಜೀವನದಲ್ಲಿ ಬದುಕಿ ತೋರಿಸಿ, ಪ್ರತಿಯೊಬ್ಬ ಮಾನವನೂ ತಾನು ಮಾದರಿಯಾದ ನಡೆನುಡಿಗಳಿಂದ ದೇವರಾಗಬಲ್ಲನು ಎಂದು ಸಾಧಿಸಿದ ಈ ಮಹನೀಯನ ಚಿರಂತನ ನೆನಪಿಗಾಗಿ ಅಲ್ಲೊಂದು ಶಾಶ್ವತವಾದ ರಾಷ್ಟ್ರಮಂದಿರ ನಿರ್ಮಾಣದ ಕನಸು ಹೊತ್ತ ಅಸಂಖ್ಯಾತ ರಾಮಭಕ್ತರ ತ್ಯಾಗ ಬಲಿದಾನಗಳ ಪುಣ್ಯ ವಿಶೇಷವೆಂಬಂತೆ ಅಯೋಧ್ಯೆಯಲ್ಲಿ ಭವ್ಯ ದೇಗುಲವೊಂದು ತಲೆಯೆತ್ತಿ ನಿಲ್ಲುವ ಈ ಚಾರಿತ್ರಿಕ ಅಮೃತ ಘಳಿಗೆಗೆ ನಾವುಗಳು ಜೀವಂತ ಸಾಕ್ಷಿಯಾಗುವವರಿದ್ದೇವೆ.

ಭಾರತ ದೇಶವನ್ನು ಬಾಧಿಸುತ್ತಿರುವ ಸಕಲ ಕ್ಲೈಬ್ಯಕಗಳಿಗೂ ಮತ್ತು ಧರ್ಮಗ್ಲಾನಿಗೂ ಇದುವೇ ನಮಗೆ ರಾಮಬಾಣವಾಗಲಿ. ಅದು ರಾಷ್ಟ್ರೋದ್ದೀಪನದ ಅಮರ ಸಂಜೀವಿನಿಯಾಗಲಿ. ರಾಮನಾಮವೇ ಸಮಸ್ತ ಭಾರತೀಯರನ್ನು ಒಗ್ಗೂಡಿಸುವ ಬೀಜಮಂತ್ರವಾಗಲಿ. ರಾಮನೇ ಈ ನಾಡಿನ ರಾಷ್ಟ್ರಪುರುಷ. ಈ ಭವ್ಯ ದೇಗುಲವು ವಿಶ್ವದೆಲ್ಲೆಡೆಯಲ್ಲೂ ಹರಿದು ಹಂಚಿ ಹೋಗಿರುವ ಸಮಸ್ತ ಸನಾತನಿಗಳಿಗೆ ಪರಮ ಪವಿತ್ರವಾದ ರ್ತೀರ್ಥಕ್ಷೇತ್ರವಾಗಲಿದೆ. ಶ್ರೀ ಅಯೋಧ್ಯೆಯು ಮತ್ತೊಮ್ಮೆ ತನ್ನ ಗತ ವೈಭವವಕ್ಕೆ ಮರಳಿ ವಿಶ್ವವಿಖ್ಯಾತ ಸಾಂಸ್ಕೃತಿಕ & ಆಧ್ಯಾತ್ಮಿಕ ಕೇಂದ್ರವಾಗಿ ಅಜರಾಮರವಾಗಿ ವಿಜೃಂಭಿಸಲಿ ಎನ್ನುವುದೇ ಭಾರತೀಯರೆಲ್ಲರ ಆಶಯ. ಅಷ್ಟೇ ಅಲ್ಲದೆ ಮನೆಮನೆಯಲ್ಲೂ, ಮನಮನದಲ್ಲೂ ರಾಮ ಮಂದಿರದ ನಿರ್ಮಾಣವಾಗಬೇಕಿದೆ‌.

-ಡಾ. ಸಿ.ಜಿ. ರಾಘವೇಂದ್ರ ವೈಲಾಯ
ನವಜಾತ ಶಿಶು & ಮಕ್ಕಳ ತಜ್ಞರು
ಜನನಿ ನ್ಯೂಲೈಫ್ ಮಹಿಳಾ & ಮಕ್ಕಳ ಆಸ್ಪತ್ರೆ
ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News
  • United States+1
  • United Kingdom+44
  • Afghanistan+93
  • Albania+355
  • Algeria+213
  • American Samoa+1
  • Andorra+376
  • Angola+244
  • Anguilla+1
  • Antigua & Barbuda+1
  • Argentina+54
  • Armenia+374
  • Aruba+297
  • Ascension Island+247
  • Australia+61
  • Austria+43
  • Azerbaijan+994
  • Bahamas+1
  • Bahrain+973
  • Bangladesh+880
  • Barbados+1
  • Belarus+375
  • Belgium+32
  • Belize+501
  • Benin+229
  • Bermuda+1
  • Bhutan+975
  • Bolivia+591
  • Bosnia & Herzegovina+387
  • Botswana+267
  • Brazil+55
  • British Indian Ocean Territory+246
  • British Virgin Islands+1
  • Brunei+673
  • Bulgaria+359
  • Burkina Faso+226
  • Burundi+257
  • Cambodia+855
  • Cameroon+237
  • Canada+1
  • Cape Verde+238
  • Caribbean Netherlands+599
  • Cayman Islands+1
  • Central African Republic+236
  • Chad+235
  • Chile+56
  • China+86
  • Christmas Island+61
  • Cocos (Keeling) Islands+61
  • Colombia+57
  • Comoros+269
  • Congo - Brazzaville+242
  • Congo - Kinshasa+243
  • Cook Islands+682
  • Costa Rica+506
  • Croatia+385
  • Cuba+53
  • Curaçao+599
  • Cyprus+357
  • Czech Republic+420
  • Côte d’Ivoire+225
  • Denmark+45
  • Djibouti+253
  • Dominica+1
  • Dominican Republic+1
  • Ecuador+593
  • Egypt+20
  • El Salvador+503
  • Equatorial Guinea+240
  • Eritrea+291
  • Estonia+372
  • Eswatini+268
  • Ethiopia+251
  • Falkland Islands+500
  • Faroe Islands+298
  • Fiji+679
  • Finland+358
  • France+33
  • French Guiana+594
  • French Polynesia+689
  • Gabon+241
  • Gambia+220
  • Georgia+995
  • Germany+49
  • Ghana+233
  • Gibraltar+350
  • Greece+30
  • Greenland+299
  • Grenada+1
  • Guadeloupe+590
  • Guam+1
  • Guatemala+502
  • Guernsey+44
  • Guinea+224
  • Guinea-Bissau+245
  • Guyana+592
  • Haiti+509
  • Honduras+504
  • Hong Kong+852
  • Hungary+36
  • Iceland+354
  • India+91
  • Indonesia+62
  • Iran+98
  • Iraq+964
  • Ireland+353
  • Isle of Man+44
  • Israel+972
  • Italy+39
  • Jamaica+1
  • Japan+81
  • Jersey+44
  • Jordan+962
  • Kazakhstan+7
  • Kenya+254
  • Kiribati+686
  • Kosovo+383
  • Kuwait+965
  • Kyrgyzstan+996
  • Laos+856
  • Latvia+371
  • Lebanon+961
  • Lesotho+266
  • Liberia+231
  • Libya+218
  • Liechtenstein+423
  • Lithuania+370
  • Luxembourg+352
  • Macau+853
  • Madagascar+261
  • Malawi+265
  • Malaysia+60
  • Maldives+960
  • Mali+223
  • Malta+356
  • Marshall Islands+692
  • Martinique+596
  • Mauritania+222
  • Mauritius+230
  • Mayotte+262
  • Mexico+52
  • Micronesia+691
  • Moldova+373
  • Monaco+377
  • Mongolia+976
  • Montenegro+382
  • Montserrat+1
  • Morocco+212
  • Mozambique+258
  • Myanmar (Burma)+95
  • Namibia+264
  • Nauru+674
  • Nepal+977
  • Netherlands+31
  • New Caledonia+687
  • New Zealand+64
  • Nicaragua+505
  • Niger+227
  • Nigeria+234
  • Niue+683
  • Norfolk Island+672
  • North Korea+850
  • North Macedonia+389
  • Northern Mariana Islands+1
  • Norway+47
  • Oman+968
  • Pakistan+92
  • Palau+680
  • Palestine+970
  • Panama+507
  • Papua New Guinea+675
  • Paraguay+595
  • Peru+51
  • Philippines+63
  • Poland+48
  • Portugal+351
  • Puerto Rico+1
  • Qatar+974
  • Romania+40
  • Russia+7
  • Rwanda+250
  • Réunion+262
  • Samoa+685
  • San Marino+378
  • Saudi Arabia+966
  • Senegal+221
  • Serbia+381
  • Seychelles+248
  • Sierra Leone+232
  • Singapore+65
  • Sint Maarten+1
  • Slovakia+421
  • Slovenia+386
  • Solomon Islands+677
  • Somalia+252
  • South Africa+27
  • South Korea+82
  • South Sudan+211
  • Spain+34
  • Sri Lanka+94
  • St Barthélemy+590
  • St Helena+290
  • St Kitts & Nevis+1
  • St Lucia+1
  • St Martin+590
  • St Pierre & Miquelon+508
  • St Vincent & Grenadines+1
  • Sudan+249
  • Suriname+597
  • Svalbard & Jan Mayen+47
  • Sweden+46
  • Switzerland+41
  • Syria+963
  • São Tomé & Príncipe+239
  • Taiwan+886
  • Tajikistan+992
  • Tanzania+255
  • Thailand+66
  • Timor-Leste+670
  • Togo+228
  • Tokelau+690
  • Tonga+676
  • Trinidad & Tobago+1
  • Tunisia+216
  • Turkey+90
  • Turkmenistan+993
  • Turks & Caicos Islands+1
  • Tuvalu+688
  • US Virgin Islands+1
  • Uganda+256
  • Ukraine+380
  • United Arab Emirates+971
  • United Kingdom+44
  • United States+1
  • Uruguay+598
  • Uzbekistan+998
  • Vanuatu+678
  • Vatican City+39
  • Venezuela+58
  • Vietnam+84
  • Wallis & Futuna+681
  • Western Sahara+212
  • Yemen+967
  • Zambia+260
  • Zimbabwe+263
  • Åland Islands+358

Popular

More like this
Related

eAsset ಇ-ಸ್ವತ್ತು ದಾಖಲೀಕರಣ ಸಮಸ್ಯೆಗಳ ಬಗ್ಗೆ ಅಧ್ಯಯನಕ್ಕೆ ಸಮಿತಿ ರಚನೆ- ಪ್ರಿಯಾಂಕ ಖರ್ಗೆ

eAsset ಇ-ಸ್ವತ್ತು ಅನುಷ್ಠಾನದಲ್ಲಿ ಕಾಲಕಾಲಕ್ಕೆ ಎದುರಾಗುವ ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ಪರಿಹರಿಸಲು...

Sri Chidambara Mahaswami ಗುಬ್ಬಿ ಚಿದಂಬರಾಶ್ರಮದಲ್ಲಿಎಲೆಕ್ಟ್ರಿಷಿಯನ್ ವೃತ್ತಿ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Sri Chidambara Mahaswami ಶ್ರೀ ಶ್ರೀ ಚಿದಂಬರ ಮಹಾಸ್ವಾಮಿಗಳು ಶ್ರೀ ಚಿದಂಬರಾಶ್ರಮವನ್ನು...

CM Siddharamaih ಪೌರ ಕಾರ್ಮಿಕರ ಸೇವೆ ಖಾಯಂಗೊಳಿಸುವ ಕಾರ್ಯ ನಡೆಯುತ್ತಿದೆ- ಸಿದ್ಧರಾಮಯ್ಯ

CM Siddharamaih ಎಲ್ಲಾ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವ ಕಾರ್ಯ ನಡೆಯುತ್ತಿದೆ.ಈಗಾಗಲೇ...

DC Shivamogga ಪರೀಕ್ಷಾರ್ಥಿಯ ಜನಿವಾರ ತೆಗೆಸಿದ ಪ್ರಕರಣ, ಈರ್ವರು ಗೃಹ ರಕ್ಷಕ ದಳ ಸಿಬ್ಬಂದಿ ಅಮಾನತು-ಗುರುದತ್ತ‌ ಹೆಗಡೆ

DC Shivamogga ಶಿವಮೊಗ್ಗ ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಇತ್ತೀಚಿಗೆ...