Wednesday, October 2, 2024
Wednesday, October 2, 2024

District Building Workers Union ಹಿಂದಿನ ಪದ್ಧತಿಯಂತೆ ಸ್ವಯಂ ಘೋಷಣಾ ಪತ್ರ ಮುಂದುವರೆಸಲು ಒತ್ತಾಯ

Date:

District Building Workers Union ಕಟ್ಟಡ ಕಾರ್ಮಿಕರ ಸ್ವಯಂ ಘೋಷಣಾ ಪತ್ರವನ್ನು ಹಿಂದಿನ ಪದ್ಧತಿ ಯಂತೆ ಜಾರಿಗೊಳಿಸಿ ನೈಜ ಕಟ್ಟಡ ಕಾರ್ಮಿಕರಿಗೆ ಅರ್ಜಿ ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಕ್ತ ಅವಕಾಶ ಕಲ್ಪಿಸಿಕೊಡಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘವು ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.
ಬಳಿಕ ಮಾತನಾಡಿದ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ವಸಂತ್‌ಕುಮಾರ್ ಕಾರ್ಮಿಕರ ಕಲ್ಯಾಣ ಮಂಡಳಿಯು ಬೋಗಸ್ ಕಾರ್ಡ್ಗಳನ್ನು ತಡೆಯಲು ಜಾರಿ ಮಾಡಿರುವ ಸ್ವಯಂ ಘೋಷಣಾ ಪತ್ರವು ಕಟ್ಟಡ ಕಾರ್ಮಿಕರಿಗಳಿಗೆ ಹೊಸ ಅರ್ಜಿ ಮತ್ತು ನವಿಕರಣ ಸೌಲಭ್ಯಗಳಿಗೆ ನುಂಗಲಾರದ ತುತ್ತಾಗಿ ಪರಿಣಾಮಿಸಿದೆ ಎಂದು ದೂರಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯಿದೆಯಲ್ಲಿ ನೊಂದಣಿ ಸಂಖ್ಯೆಯನ್ನು ಜಿಲ್ಲಾದ್ಯಂತ ಇಲ್ಲಿ ಯವರೆಗೆ ಕಾರ್ಮಿಕರ ಇಲಾಖೆಯಿಂದ ಯಾರಿಗೂ ಸಹ ನೋಂದಣಿ ಸಂಖ್ಯೆ ನೀಡಿರುವುದಿಲ್ಲ. ಹಾಗೂ ನಿರ್ಮಾಣ ಕಾಮಗಾರಿಗೆ ನಗರ ಸ್ಥಳೀಯ ಶಾಸನಾತ್ಮಕ ಪ್ರಾಧಿಕಾರದಿಂದ ಪಡೆದ ಅನುಮೋದನೆ ಸಂಖ್ಯೆಯನ್ನು ನೀಡಲು ಮನೆಯ ಮಾಲೀಕರು ಒಪ್ಪುತ್ತಿಲ್ಲ ಎಂದರು.
ಸ್ವಯo ಘೋಷಣಾ ಪತ್ರವನ್ನು ಜಾರಿ ಮಾಡಿ ಬೋಗಸ್‌ಕಾರ್ಡ್ಗಳನ್ನು ತಡೆಗಟ್ಟಲು ಹೊರಟಿರುವ ಕಾರ್ಮಿ ಕ ಕಲ್ಯಾಣ ಮಂಡಳಿಯು ನೈಜ ಕಾರ್ಮಿಕರಿಗೆ ನ್ಯಾಯವನ್ನು ದೊರಕಿಸಿಕೊಡುವ ಬದಲು ಅನ್ಯಾಯವೆಸಗುತ್ತಿದೆ. ಇದರಿಂದ ಸ್ಥಳೀಯವಾಗಿ ಕೆಲಸ ಮಾಡುವ ಕಾರ್ಮಿಕರಿಗೆ ಉದ್ಯೋಗವಿಲ್ಲದಂತಾಗಿ ಹೊರರಾಜ್ಯದ ಕಾರ್ಮಿಕರಿಗೆ ಮಣೆ ಹಾಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ಜಿ.ರಘು ಮಾತನಾಡಿ ಪ್ರಸ್ತುತ ಜಾರಿಗೆ ಮುಂದಾಗಿರುವ ಸ್ವಯಂ ಘೋಷಣಾ ಪತ್ರ ಹಾಗೂ ಇತರೆ ಎಲ್ಲಾ ಕಾನೂನುಗಳು ನೈಜ ಕಟ್ಟಡ ಕಾರ್ಮಿಕರಿಗೆ ಅನ್ಯಾಯವಾಗದಂತೆ ಕ್ರಮಕೈಗೊಳ್ಳಬೇಕು. ಬೋ ಗಸ್ ಕಾರ್ಡ್ಗಳನ್ನು ತಡೆಗಟ್ಟಲು ಸಂಘವು ಸಂಪೂರ್ಣ ಸಹಕಾರ ನೀಡಲಾಗುವುದರಿಂದ ಅನುಪಯುಕ್ತ ಆದೇಶ ವನ್ನು ಹಿಂಪಡೆದು ಕಾರ್ಮಿಕರಿಗೆ ಬೆಲೆಏರಿಕೆ ಅನುಗುಣವಾಗಿ ಸೌಲಭ್ಯಗಳನ್ನು ವಿತರಿಸಲು ಸೂಚಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಪರ ಜಿಲ್ಲಾಧಿಕಾರಿ ನಾರಾಯಣಕನಕರಡ್ಡಿ ಮುಖಾಂ ತರ ಕಾರ್ಮಿಕರು ಮನವಿ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
District Building Workers Union ಸಂದರ್ಭದಲ್ಲಿ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಜಯಕುಮಾರ್, ತಾಲ್ಲೂಕು ಉಪಾಧ್ಯಕ್ಷ ಸಿ.ಸಿ.ಮಂಜೇಗೌಡ, ಕಾರ್ಯದರ್ಶಿ ಎಂ.ಎಸ್.ಜಾನಕಿ, ಸದಸ್ಯರಾದ ಎ.ಶ್ರೀಧರ್, ಸಲೀಂ, ಶ್ರೀನಿವಾಸ್, ಆರ್.ಮಂಜಯ್ಯ, ಕಾರ್ಮಿಕರಾದ ಸುಶೀಲಮ್ಮ, ಗೌರಮ್ಮ, ಚಂದ್ರಚಾರ್, ಮಂಜಯ್ಯ, ಎ.ಪಿ.ಚಂದ್ರಶೇಖರ್, ಮಂ ಜುಳಾ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...