Forest Police ಅಕ್ರಮವಾಗಿ ಅಕೇಶಿಯ ಮರ ಕಡಿತಲೆ ಮಾಡಿ ದಾಸ್ತಾನು ಮಾಡಿದ್ದ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ನಾಟವನ್ನು ಪೊಲೀಸ್ ಅರಣ್ಯ ಸಂಚಾರಿ ದಳ ವಶಪಡಿಸಿಕೊಂಡ ಘಟನೆ ಹೊಸನಗರ ತಾಲೂಕಿನ ಹೊಸನಾಡು ಗ್ರಾಮದಲ್ಲಿ ನಡೆದಿದೆ.
ಖಚಿತ ಮಾಹಿತಿಯನ್ನು ಆಧರಿಸಿದ ದಾಳಿ ಪೊಲೀಸ್ ಅರಣ್ಯ ಸಂಚಾರಿ ದಳ ಹೊಸನಗರ ತಾಲೂಕಿನ ಹೊಸನಾಡು ಗ್ರಾಮದ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಟಾವ್ ಮಾಡಿ ಇರಿಸಿದ್ದ ಲಕ್ಷಾಂತರ ರೂ ಮೌಲ್ಯದ ಅಕೇಶಿಯ ಮರಗಳನ್ನು ವಶಕ್ಕೆ ಪಡೆದು ಆರೋಪಿತರ ಮೇಲೆ ಪ್ರಕರಣ ದಾಖಲಿಸಿದೆ.
Forest Police ದಾಳಿಯಲ್ಲಿ ಪಿಎಸ್ಐ ವಿನಾಯಕ ನೇತೃತ್ವದಲ್ಲಿ ಸಿಬ್ಬಂದಿಯವರಾದ ಗಿರೀಶ, ಕೃಷ್ಣ ವಿಶ್ವನಾಥ್ ಪಾಲ್ಗೊಂಡಿದ್ದರು.