Visvesvaraya Iron and Steel Plant 3ನೇ ಡಿಸೆಂಬರ್ 2023 ರಂದು ಭದ್ರಾವತಿಯ ಕರ್ನಾಟಕ ಸರ್ಕಾರಿ ಶಾಲೆಗಳ 114 ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಉಪಕರಣಗಳನ್ನು ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಸ್ಥಾವರದಿಂದ ಮದರ್ ತೆರೆಸಾ ವಸತಿ ಶಾಲೆ ಮತ್ತು VISL ಭದ್ರಾ ಅತಿಥಿಗೃಹದಲ್ಲಿ ವಿತರಿಸಲಾಯಿತು.
ಶ್ರೀ ಬಿ.ಎಲ್. ಚಂದ್ವಾನಿ, ಕಾರ್ಯಪಾಲಕ ನಿರ್ದೇಶಕರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಅವರ ಜೊತೆ ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ), ಶ್ರೀಮತಿ ಶೋಭ ಶಿವಶಂಕರನ್, ಮಹಾಪ್ರಬಂಧಕರು (ಹಣಕಾಸು), ಶ್ರೀ ಅರುಣ್ ಎಸ್. ನಾಯಕ್, ಮಹಾಪ್ರಬಂಧಕರು (ವಾಣಿಜ್ಯ) ಶ್ರೀ ಕುಮಾರಸ್ವಾಮಿ, ಉಪಾಧ್ಯಕ್ಷರು, VISL ಕಾರ್ಮಿಕರ ಸಂಘ, ಶ್ರೀ ಆರ್. ಹರೀಶ್, ಕಾರ್ಯದರ್ಶಿ, ಶ್ರೀ ಇಳಯರಾಜ, ಖಜಾಂಚಿ, VISL ಅಧಿಕಾರಿಗಳ ಸಂಘ ಮತ್ತು ಶಿಕ್ಷಣ ಇಲಾಖೆಯಿಂದ ಶ್ರೀ ಕೆ. ನಾಗೇಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶ್ರೀ ಪಂಚಾಕ್ಷರಿ, ಬಿಆರ್‌ಸಿ, ಶ್ರೀಮತಿ ಪ್ರತಿಭಾ, ಶ್ರೀಮತಿ ರೇಣುಕಾ, ಶ್ರೀಮತಿ ಶ್ರೀಮತಿ, ಶ್ರೀ ತೀರ್ಥಪ್ಪ, ಶ್ರೀಮತಿ ಜಯಲಕ್ಷ್ಮೀ ಹಾಗೂ ಮದರ್ ತೆರೆಸಾ ವಸತಿ ಶಾಲೆಯಿಂದ ಫಾದರ್ ರೆನಿಶ್, ಫಾದರ್ ರೆಬೆಟೋ, ತರಂಗ ಶಾಲೆಯಿಂದ ಶ್ರೀಮತಿ ತಾರಾಮಣಿ ಮತ್ತು ಶ್ರೀ ಶುಭಾಷ್ ಉಪಸ್ಥಿತರಿದ್ದರು.
ಮೈಸೂರಿನ ಶ್ರವಣ ತಜ್ಞೆ ಶ್ರೀಮತಿ ಇರ್ಫಾನರವರು ಶ್ರವಣ ಸಾಧನಗಳನ್ನು ಜೊಡಿಸಿಕೊಟ್ಟರು.
ಈ ಸಂದರ್ಭದಲ್ಲಿ 7 ಲಕ್ಷ ರೂಪಾಯಿ ಮೌಲ್ಯದ 105 ಜೊತೆ ಶ್ರವಣ ಸಾಧನಗಳು 1 ವ್ಹೀಲ್ ಚೇರ್ ಮತ್ತು 8 MSIED ಕಿಟ್‌ಗಳನ್ನು ವಿತರಿಸಲಾಯಿತು.
ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ), ಸ್ವಾಗತಿಸಿ, ವಂದನಾರ್ಪಣೆ ಸಲ್ಲಿಸಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ ಅವರು ಮಾತನಾಡಿ SAIL – VISL ಸಾಮಾಜಿಕ ಕಳಕಳಿಯ ಯೋಜನೆಗಳಡಿಯಲ್ಲಿ ಸಾಮಾನ್ಯ ಜನರ ಜೀವನವನ್ನು ಸುಧಾರಿಸಲು ಮತ್ತು ಬದುಕಲು ಸಮಾಜವನ್ನು ಉತ್ತಮ ಸ್ಥಳವನ್ನಾಗಿ ಮಾಡುವ ಕಾರ್ಯಕ್ರಮಗಳಲ್ಲಿ ಯಾವಾಗಲೂ ತೊಡಗಿಸಿಕೊಂಡಿದೆ. ಈ ಹಣಕಾಸು ವರ್ಷದಲ್ಲಿ ಭದ್ರಾವತಿಯ ಮೈದೊಳಲು ಮತ್ತು ಮಂಗೋಟ್ಟೆ ಗ್ರಾಮಗಳಲ್ಲಿ ಸಹ್ಯಾದ್ರಿ ನಾರಾಯಣ ಹೃದಯಾಲಯ, ಶಂಕರ ನೇತ್ರಾಲಯ, ಯೂನಿಟಿ ಆಸ್ಪತ್ರೆ ಭದ್ರಾವತಿ ತಾಲ್ಲೂಕು ಆರೋಗ್ಯ ಕೇಂದ್ರ ಮತ್ತು VISL ಆಸ್ಪತ್ರೆಗಳು ಸಹಯೋಗದೊಂದಿಗೆ ಸಾಮಾನ್ಯ ಆರೋಗ್ಯ, ಮೂಳೆ, ಹೃದಯ, ನೇತ್ರ ತಪಾಸಣೆ, ಸ್ತ್ರೀರೋಗ, ಮಕ್ಕಳ ತಪಾಸಣಾ ಶಿಬಿರಗಳನ್ನು ನಡೆಸಿದ್ದು, ಸುಮಾರು 600 ಗ್ರಾಮಸ್ಥರು ಪ್ರಯೋಜನ ಪಡೆದುಕೊಂಡಿದ್ದಾರೆ.
Visvesvaraya Iron and Steel Plant ಒಟ್ಟಾರೆಯಾಗಿ ಈ ಹಣಕಾಸು ವರ್ಷದಲ್ಲಿ SAIL -VISL ನಿಂದ ಶಿವಮೊಗ್ಗ ಜಿಲ್ಲೆಯ ಎಲ್ಲಾ 7 ತಾಲ್ಲೂಕುಗಳ ಕರ್ನಾಟಕ ಸರ್ಕಾರಿ ಶಾಲೆಗಳ 332 ವಿಶೇಷ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಸಹಾಯಕ ಸಲಕರಣೆಗಳನ್ನು ವಿತರಿಸಲಾಗುವುದು. ಈ ಉದಾತ್ತ ಉದ್ದೇಶಕ್ಕಾಗಿ 21 ಲಕ್ಷ ರೂಪಾಯಿಗಳನ್ನು ಮುಡುಪಾಗಿಡಲಾಗಿದೆ.
ಶ್ರೀ ಎ.ಕೆ. ನಾಗೇಂದ್ರಪ್ಪ, ಬಿ.ಈ.ಓ, ಭದ್ರಾವತಿ ಅವರು SAIL – VISL ಕೊಡುಗೆಗೆ ಧನ್ಯವಾದ ಸಲ್ಲಿಸಿದರು ಮತ್ತು ಭದ್ರಾವತಿಯ ಕರ್ನಾಟಕ ಸರ್ಕಾರಿ ಶಾಲೆಗಳ ಎಲ್ಲಾ ವಿಶೇಷ ಚೇತನ ವಿದ್ಯಾರ್ಥಿಗಳ ಅಗತ್ಯವನ್ನು SAIL – VISL ಸಹಕಾರದೊಂದಿಗೆ ಸಂಪೂರ್ಣವಾಗಿ ಪೂರೈಸಲಾಗಿದೆ ಮತ್ತು ವಿಶೇಷ ಚೇತನರಿಗೆ ಭವಿಷ್ಯದಲ್ಲಿಯೂ ಸಹಾಯ ಮತ್ತು ಬೆಂಬಲವನ್ನು ಕೋರಿದರು.