Wednesday, June 25, 2025
Wednesday, June 25, 2025

MESCOM Shivamogga ರಾಜ್ಯಮಟ್ಟದ ವಿದ್ಯುತ್ ಮಂಡಳಿ ನೌಕರರ ಕ್ರಿಕೆಟ್ ಪಂದ್ಯಾವಳಿ

Date:

MESCOM Shivamogga ಕರ್ತವ್ಯನಿರತ ಮೆಸ್ಕಾಂ ಪವರ್‌ಮ್ಯಾನ್ ನಿಧನ ಹೊಂದಿದ್ದ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ರಾಜ್ಯಮಟ್ಟದ ವಿದ್ಯುತ್ ಇಲಾಖೆ ನೌಕರರ ಕ್ರಿಕೆಟ್ ಪಂದ್ಯಾವಳಿಯನ್ನು ಡಿ.08 ಹಾಗೂ 10ರಂದು ಜೆಎನ್‌ಎನ್‌ಸಿ ಕಾಲೇಜು ಹಾಗೂ ಕೃಷಿ ಕಾಲೇಜಿನ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಲೀಗ್ ಮಾದರಿಯಲ್ಲಿ ನಡೆಯುವ ಈ ಪಂದ್ಯಾವಳಿಗೆ ರಾಜ್ಯದ 24 ತಂಡಗಳು ಹೆಸರು ನೊಂದಾಯಿಸಿವೆ.

ಬಲರಾಮ್ ಅಭಿಮಾನಿಗಳ ಸಂಘ ಮೆಸ್ಕಾಂ ಶಿವಮೊಗ್ಗ, ಹೆಚ್ ಈರಪ್ಪ ಗ್ರಾಮೀಣಾಭಿವೃದ್ಧಿ ಎಜುಕೇ ಷನ್ ಟ್ರಸ್ಟ್, ತುಂಗಾ ತರಂಗ ದಿನಪತ್ರಿಕೆ ಹಾಗೂ ರಾಜೀವ್‌ಗಾಂಧಿ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಇವರುಗಳ ಆಶ್ರಯದಲ್ಲಿ ನಡೆಯಲಿರುವ ಪಂದ್ಯಾವಳಿಗೆ ಸಕಲ ಸಿದ್ದತೆಗಳು ನಡೆಯುತ್ತಿದ್ದು, 2 ಕಾಲೇಜುಗಳ ಆವರಣದ ಕ್ರೀಡಾಂಗಣಗಳನ್ನು ಸಿದ್ದಪಡಿಸಲಾಗುತ್ತಿದೆ.
ಡಿಸೆಂಬರ್ 9ರ ಬೆಳಗ್ಗೆ 10 ಗಂಟೆಗೆ ಜೆಎನ್ ಎನ್‌ಸಿ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಶಿವಮೊಗ್ಗ ಕಾರ್ಯಪಾಲಕ ಅಭಿಯಂತರ ವಿರೇಂದ್ರ ಅವರು ಪಂದ್ಯಾವಳಿಗೆ ಚಾಲನೆ ನೀಡಿಲಿದ್ದಾರೆ.

ಈ ಸಂದರ್ಭದಲ್ಲಿ ಎಇಇ ಫಣೀಂದ್ರ, ಮೆಸ್ಕಾಂನ ಅಧಿಕಾರಿ ಗಳು ವಿವಿಧ ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಈ 24 ತಂಡಗಳು ತಲಾ 5ರಿಂದ 6 ಪಂದ್ಯಗಳಲ್ಲಿ ಭಾಗವಹಿಸಲಿದ್ದು, ಡಿ.10ರ 03ಗಂಟೆಯೊಳಗೆ ಪಂದ್ಯಾವಳಿಯು ಮುಗಿಯಲಿದ್ದು, ಸಂಜೆ 4 ಗಂಟೆಗೆ ಮೆಸ್ಕಾಂ ನ ಅಧೀಕ್ಷಕ ಅಭಿಯಂತರರಾದ ಶಶಿಧರ್ ಕ.ವಿ.ಪ್ರ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಬಲರಾಮ್, ಉಪಾಧ್ಯಕ್ಷ ಮೋಹನ್, ಮೆಸ್ಕಾಂ ಎಸ್ಸಿಎಸ್ಟಿ ಕಲ್ಯಾಣ ಸಮಿತಿಯ ಅಧ್ಯಕ್ಷ ಹೆಚ್.ಬಿ. ಜಗ ದೀಶ್, ಉಪಾಧ್ಯಕ್ಷ ವಸಂತ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಯಶವಂತ್ ನಾಯ್ಕ್, ಈರಪ್ಪ ಟ್ರಸ್ಟ್‌ನ ಅಧ್ಯಕ್ಷ ಸುರೇಶ್, ರಾಜೀವ್‌ಗಾಂಧಿ ಟ್ರಸ್ಟ್‌ನ ಅಧ್ಯಕ್ಷ ಭಗವಾನ್ ಸೇರಿದಂತೆ ವಿವಿಧ ಗಣ್ಯರು ಆಗಮಿಸಲಿ ದ್ದಾರೆ.

MESCOM Shivamogga ಈ ಸಂದರ್ಭದಲ್ಲಿ ಪ್ರಸಕ್ತ 2023ರ ಅವಧಿಯಲ್ಲಿ ಕರ್ತವ್ಯ ನಿರತರಾಗಿ ವಿದ್ಯುತ್ ಅವಕೃಪೆಗೆ ಐವರು ಪವರ್ ಮ್ಯಾನ್‌ಗಳ ಕುಟುಂಬದವರಿಗೆ ಆತ್ಮೀಯವಾಗಿ ಸನ್ಮಾನಿಸಿ ಸಾಂತ್ವಾನ ನೀಡುವ ಕಾರ್ಯಕ್ರಮ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೊಂದಾಯಿಸಲು9980543829, 9611948 975, 9986202626, 8880037088, 9448977686 ಅನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Gurudatta Hegde ಅತ್ಯಾಧುನಿಕ ತಂತ್ರಾಂಶವನ್ನು ಅರಿತು ಕಾರ್ಯಕ್ಷೇತ್ರದಲ್ಲಿ ಅಳವಡಿಸಿಕೊಳ್ಳಿ : ಗುರುದತ್ತ ಹೆಗಡೆ

Gurudatta Hegde ನಾಗಾಲೋಟದಲ್ಲಿ ಬದಲಾಗುತ್ತಿರುವ ಕಾಲಮಾನಕ್ಕೆ ಅನುಗುಣವಾಗಿ ಸರ್ಕಾರವು ಸುಗಮ ಆಡಳಿತಕ್ಕೆ...

MESCOM ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಸಾಗರ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜೂ.26 ರಂದು ಬೆಳಿಗ್ಗೆ...

Backward Classes Welfare Department ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

Backward Classes Welfare Department ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ...

Department of Horticulture ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

Department of Horticulture ಭದ್ರಾವತಿ ತಾಲೂಕು ತೋಟಗಾರಿಕೆ ಇಲಾಖೆಯು 2025-26ನೇ ಸಾಲಿನ...