Market worker ಯುನೈಟೆಡ್ ನೇಷನ್ಸ್ ಎಕನಾಮಿಕ್ ಅಂಡ್ ಸೋಶಿಯಲ್ ಕಮಿಷನ್ ಫಾರ್ ಏಷ್ಯಾ ಅಂಡ್ ದ ಪೆಸಿಫಿಕ್ ಹಾಗೂ ಉಬುಂಟು ಮಹಿಳಾ ಉದ್ಯಮಿಗಳ ಒಕ್ಕೂಟದ ಸಹಯೋಗದೊಂದಿಗೆ ಸ್ವೇದ ಮಹಿಳಾ ಉದ್ಯಮಿಗಳ ಸಂಘವು ನವೆಂಬರ್ 30ರಂದು ಶಿವಮೊಗ್ಗದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಾಗಾರ ಹಮ್ಮಿಕೊಂಡಿದೆ.
ಸೌತ್ ಈಸ್ಟ್ ಏಷ್ಯಾ ದೇಶಗಳಲ್ಲಿ ಉತ್ಪನ್ನಗಳನ್ನು ಆನ್‌ಲೈನ್ ನಲ್ಲಿ ಮಾರಾಟ ಮಾಡಲು ಕಾರ್ಯಗಾರದಲ್ಲಿ ತರಬೇತಿ ನೀಡಲಾಗುತ್ತದೆ. ವಿಸೆಲ್ ಆನ್‌ಲೈನ್ ಎಂಬ ಈ ಪೋರ್ಟಲ್ ನಲ್ಲಿ ಉತ್ಪನ್ನಗಳನ್ನು ಆನ್ ಬೋರ್ಡ್ ಮಾಡಲು ಜಿ ಎಸ್ ಟಿ ನೋಂದಣಿ ಅವಶ್ಯಕತೆ ಇರುವುದಿಲ್ಲ.
ಹೊಸದಾಗಿ ಆನ್ ಲೈನ್ ಮಾರ್ಕೆಟಿಂಗ್ ಮಾಡುವವರಿಗೆ ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಸಂಪೂರ್ಣ ಮಾಹಿತಿ ಕೊಡುವ ಈ ಮ್ಯಾನ್ಯೋರ್ ಡೌನ್ಲೋಡ್ ಮಾಡಿಕೊಡಲಾಗುವುದು. ಫೇಸ್ಬುಕ್ ಇನ್ಸ್ಟಾಗ್ರಾಂ ಮುಂತಾದ ಸೋಶಿಯಲ್ ಮೀಡಿಯಾಗಳಲ್ಲಿ ಬಿಸಿನೆಸ್ ಪೇಜ್ ಓಪನ್ ಮಾಡಲು ಹಾಗೂ ಯಶಸ್ವಿಯಾಗಿ ಮಾರಾಟ ಮಾಡಲು ತಜ್ಞರಿಂದ ತರಬೇತಿ ನೀಡಲಾಗುವುದು.
ಆಸಕ್ತಿ ಉಳ್ಳವರು ಹೆಸರನ್ನು ನೋಂದಾಯಿಸಬೇಕು. ತರಬೇತಿ ಹಾಗೂ ಮಾರುಕಟ್ಟೆ ಮಾಡಲು ಜಿಎಸ್‌ಟಿ ಅವಶ್ಯಕತೆ ಇರುವುದಿಲ್ಲ. ತರಬೇತಿ ಉಚಿತವಾಗಿದೆ. ಮಹಿಳಾ ಉದ್ಯಮಿಗಳು ಹಾಗೂ ಉದ್ಯಮಿಗಳಾಗಲು ಇಚ್ಚಿಸುವ ಮಹಿಳೆಯರು ಸದುಪಯೋಗ ಪಡೆಯಬೇಕೆಂದು ಸ್ವೇದ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆ ಡಾ. ಬಿ.ವಿ.ಲಕ್ಷ್ಮೀ ದೇವಿ ಗೋಪಿನಾಥ್ ತಿಳಿಸಿದರು.
Market worker ಹೆಸರು ನೋಂದಾಯಿಸುವುದು ಕಡ್ಡಾಯ. ಹೆಸರು ನೋಂದಾಯಿಸಲು 9740760061 , 9243314217, 9449967914 ಸಂಪರ್ಕಿಸಬೇಕು.