Rotary Club Shivamogga ಪ್ರತಿಯೊಬ್ಬ ಮನುಷ್ಯ ಸರ್ವತೋಮುಖವಾಗಿ ಅಭಿವೃದ್ಧಿಯಾಗಿ ದೈಹಿಕ ಸಾಮರ್ಥ್ಯರಾಗಿರಲು ಜೀವನದಲ್ಲಿ ಕ್ರೀಡೆ ತುಂಬಾ ಮುಖ್ಯವಾದ ಪಾತ್ರ ವಹಿಸುತ್ತದೆ ಎಂದು ಸರ್ಜಿ ಫೌಂಡೇಶನ್ ನ ಡಾ. ಧನಂಜಯ್ ಸರ್ಜಿ ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ವಲಯ ಮಟ್ಟದ ಪೂರ್ವ ಚಂದ್ರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ನಮ್ಮ ದೇಶದಲ್ಲಿ ಕ್ರೀಡೆಯಿಂದ ಸಾಕಷ್ಟು ಜನ ವಿಶೇಷವಾದ ಸಾಧನೆ ಮಾಡಿದ ನಿದರ್ಶನಗಳಿವೆ ಎಂದು ತಿಳಿಸಿದರು.
ರೋಟರಿ ಸಂಸ್ಥೆಯು ಪ್ರಪಂಚಾದ್ಯಂತ ವಿಶೇಷವಾದ ಸೇವೆಗಳನ್ನು ಮಾಡುವುದರ ಮುಖಾಂತರ ಸಾರ್ವಜನಿಕರನ್ನು ತಲುಪಿದೆ. ರೋಟರಿ ಸಂಸ್ಥೆ ಆಯೋಜಿಸಿರುವ ಕ್ರೀಡಾಕೂಟದಲ್ಲಿ ಪ್ರತಿಯೊಬ್ಬ ಸದಸ್ಯರು ಕ್ರೀಡೆಯಲ್ಲಿ ತೊಡಗಿಸಿಕೊಂಡು ಆರೋಗ್ಯವಂತರಾಗಿ ಇರಬೇಕು ಎಂದರು.
ವಲಯ 10 ಮತ್ತು 11ರ ಕ್ರೀಡಾಕೂಟದಲ್ಲಿ 12 ರಿಂದ 13 ಕ್ಲಬ್ ಗಳು ಭಾಗವಹಿಸಿದ್ದವು. ಶಟಲ್ ಬ್ಯಾಡ್ಮಿಂಟನ್, ಕೇರಂ, ಚೆಸ್, ಟೇಬಲ್ ಟೆನಿಸ್ ಕ್ರೀಡೆಗಳು ನಡೆಸಲಾಯಿತು.
ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಎರಡು ದಿನದ ವಲಯ ಮಟ್ಟದ ಕ್ರೀಡಾಕೂಟವನ್ನು ಎಲ್ಲಾ ರೋಟರಿ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಸಹಕಾರದಿಂದ ನೆರವೇರಿಸಿದ್ದೇವೆ. ಸೇವೆಗಳ ಜೊತೆಗೆ ಸದಸ್ಯರ ಮನರಂಜನೆ ಹಾಗೂ ಪರಸ್ಪರ ಪ್ರೀತಿ ವಿಶ್ವಾಸ ವೃದ್ಧಿಸಲು ಇಂತಹ ಕ್ರೀಡಾಕೂಟ ಪ್ರತಿ ವರ್ಷ ಆಯೋಜಿಸುತ್ತಿದ್ದೇವೆ ಎಂದು ಹೇಳಿದರು.
Rotary Club Shivamogga ಇದೇ ಸಂದರ್ಭದಲ್ಲಿ ವಲಯ ಹನ್ನೊಂದರ ಸಹಾಯಕ ಗವರ್ನರ್ ರವಿ ಕೋಟೋಜಿ ಮಾತನಾಡಿ, ನಮ್ಮ ರೋಟರಿ ಸಂಸ್ಥೆಗಳಲ್ಲಿ ರಾಜ್ಯ ರಾಷ್ಟ್ರ ಮಟ್ಟದ ಆಟಗಾರರಿದ್ದಾರೆ. ಕ್ರೀಡೆಯಿಂದ ಅವರ ಪ್ರತಿಭೆಗೆ ಪ್ರೋತ್ಸಾಹ ಸಿಗುತ್ತದೆ ಎಂದು ತಿಳಿಸಿದರು.
ವಲಯ 10ರ ಅಸಿಸ್ಟೆಂಟ್ ಗವರ್ನರ್ ರಾಜೇಂದ್ರ ಸಿಂಗ್ ಪ್ರಸಾದ್ ಮಾತನಾಡಿ, ಕ್ರೀಡೆಯಲ್ಲಿ ವಿಜೇತರಾದವರಿಗೆ ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ಅವಕಾಶವಿರುತ್ತದೆ. ಹಾಗಾಗಿ ಕ್ರೀಡೆಯಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಮುಖ್ಯ. ಸೋಲು ಗೆಲುವು ನಂತರ ಎಂದರು.
ವೇದಿಕೆಯಲ್ಲಿ ವಲಯ ಸೇನಾನಿ ಧರ್ಮೇಂದ್ರ ಸಿಂಗ್ ಬಂಟಿ, ವಲಯ ತರಬೇತುರದಾರ ಡಾ. ಗುಡದಪ್ಪ ಕಸಬಿ, ಆನಂದಮೂರ್ತಿ, ಕ್ರೀಡಾಕೂಟದ ಸಂಯೋಜಕ ರಂಗರಾಜನ್, ಮಲ್ಲೇಶ್, ರೋಟರಿ ಪೂರ್ವ ಶಿವಮೊಗ್ಗ ಕಾರ್ಯದರ್ಶಿ ಕಿಶೋರ್ ಕುಮರ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಸಂತ ಹೋಬಳಿದಾರ್ ಹಾಗೂ ಎಲ್ಲಾ ರೋಟರಿ ಕ್ಲಬ್ ಅಧ್ಯಕ್ಷರು, ಕಾರ್ಯದರ್ಶಿ ಉಪಸ್ಥಿತರಿದ್ದರು.