Monday, May 13, 2024
Monday, May 13, 2024

Cooking Competition ಪಾಕ ಪ್ರವೀಣತೆ ಮೆರೆದ ವಿದ್ಯಾರ್ಥಿ ವೃಂದ

Date:

Cooking Competition  ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಇಂಧನ ರಹಿತ ಅಡುಗೆ ಸ್ಪರ್ಧೆ ಗಮನ ಸೆಳೆಯಿತು.

ತರಕಾರಿ, ಹಣ್ಣು, ಮಂಡಕ್ಕಿ, ಪಾನಿಪೂರಿ, ಸೊಪ್ಪು, ಬಿಸ್ಕಟ್ ಸೇರಿದಂತೆ ವೈವಿಧ್ಯ ಬಗೆಯ ಅಡುಗೆಗೆ ಬೇಕಾಗುವ ವಸ್ತುಗಳನ್ನು ವಿದ್ಯಾರ್ಥಿಗಳು ತಂದಿದ್ದರು. ಅತ್ಯಂತ ಉತ್ಸಾಹದಿಂದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಯಲ್ಲಿ ಆಸಕ್ತಿ ಹೆಚ್ಚಿಸುವ, ಕ್ರೀಯಾತ್ಮಕ ಆಲೋಚನೆ ಬೆಳೆಸುವ ದೃಷ್ಠಿಯಿಂದ ಇಂತಹ ಸ್ಪರ್ಧೆಗಳು ಅತ್ಯಂತ ಉಪಯುಕ್ತ ಆಗಿರುತ್ತವೆ. ವಿದ್ಯಾರ್ಥಿಗಳು ಹೊಸ ಹೊಸ ರೀತಿಯ ಚಾಟ್ಸ್, ತಿಂಡಿ ತಿನಿಸುಗಳನ್ನು ತಯಾರಿಸಿದ್ದರು. ಆಸಕ್ತಿ ವಹಿಸಿ ವಿದ್ಯಾರ್ಥಿಗಳ ತಂಡಗಳು ವಿಶೇಷ ವಿಭಿನ್ನವಾಗಿ ಅಡುಗೆ ಸಿದ್ಧಪಡಿಸಿದ್ದರು.

ಇಂಧನರಹಿತ ಅಡುಗೆ ಮಾಡುವುದು ಅತ್ಯಂತ ಸವಾಲಿನ ಕೆಲಸ. ಈ ಸ್ಪರ್ಧೆಯಲ್ಲಿ 250ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಗುಂಪುಗಳಾಗಿ ವಿಂಗಡಿಸಿ ಸ್ಪರ್ಧೆ ನಡೆಸಲಾಯಿತು. 8ನೇ ತರಗತಿ, 9ನೇ ತರಗತಿ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆ ನಡೆಯಿತು.

ವಿದ್ಯಾರ್ಥಿಗಳಿಗೆ 30ಕ್ಕೂ ಅಧಿಕ ನಿಮಿಷಗಳ ಕಾಲ ತಿಂಡಿ ತಿನಿಸು ತಯಾರಿಕೆಗೆ ಅವಕಾಶ ನೀಡಲಾಗಿತ್ತು. ನಂತರ ತೀರ್ಪುಗಾರರು ವಿದ್ಯಾರ್ಥಿಗಳ ಗುಂಪುಗಳು ತಯಾರಿಸಿದ್ದ ಅಡುಗೆ ರುಚಿ ಸವಿದು 8ನೇ, 9ನೇ ಹಾಗೂ 10ನೇ ತರಗತಿಯ ಪ್ರತಿ ವಿಭಾಗದಲ್ಲೂ ಐದು ತಂಡಗಳಿಗೆ ಬಹುಮಾನ ನೀಡಿದರು.

Cooking Competition  ದೇಶಿಯ ವಿದ್ಯಾಶಾಲಾ ಸಮಿತಿ ಉಪಾಧ್ಯಕ್ಷ ಎಸ್.ಪಿ.ದಿನೇಶ್, ಕಾರ್ಯದರ್ಶಿ ಎಸ್.ರಾಜಶೇಖರ್, ಖಜಾಂಚಿ ಬಿ.ಗೋಪಿನಾಥ್, ಆಡಳಿತ ಮಂಡಳಿಯ ಹರೀಶ್.ಎಸ್., ಪ್ರೌಢಶಾಲಾ ವಿಭಾಗದ ಉಪಪ್ರಾಚಾರ್ಯ ಸಿ.ಕೆ.ಶ್ರೀಧರ್, ಶಿಕ್ಷಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Geetha Shivarajkumar ಬೆಟ್ಟಿಂಗ್ ನಿಷಿದ್ಧ ಆದರೂ ರೈತರೊಬ್ಬರು ಗೀತಾ ಶಿವರಾಜ್ ಕುಮಾರ್ ಗೆಲ್ತಾರೆ ಅಂತ ಬೆಟ್ಟಿಂಗ್ ಮಾತಾಡಿದ್ದಾರೆ

Geetha Shivarajkumar ಶಿವಮೊಗ್ಗ ಲೋಕಸಭಾ ಚುನಾವಣಾ ಯಲ್ಲಿ ಶುರುವಾಯಿತು ಬೆಟ್ಟಿಂಗ್ ಕಾಂಗ್ರೆಸ್...

Shivamogga Death News ಶಿವಮೊಗ್ಗದ ಪ್ರಸಿದ್ಧಹಿರಿಯ ಸಿವಿಲ್ ಇಂಜಿನಿಯರ್ ವಿ.ಟಿ.ಅನಂತಕೃಷ್ಣ ನಿಧನ

Shivamogga Death News ಶಿವಮೊಗ್ಗದ ಹೆಸರಾಂತ ಹಿರಿಯ ಸಿವಿಲ್ ಇಂಜಿನಿಯರ್ ವಿ...

Ayanur Manjunath ಆಯನೂರು ಮಂಜುನಾಥ್ ಗೆ ಬೆಂಬಲ ನೀಡಿ- ಮಧುಬಂಗಾರಪ್ಪ

Ayanur Manjunath 'ಕ್ಷೇತ್ರದಲ್ಲಿ ಆಯನೂರು ಮಂಜುನಾಥ ಅವರ ಗೆಲುವು, ಪಕ್ಷದ ಗೆಲುವು....

Shankara Jayanti ಜಿಲ್ಲಾಡಳಿತದ ಆಶ್ರಯದಲ್ಲಿ ಶಂಕರ ಜಯಂತಿ ಸರಳ ಆಚರಣೆ

Shankara Jayanti ಜಿಲ್ಲಾಡಳಿತದ ಆಶ್ರಯದಲ್ಲಿ ಶಂಕರ ಜಯಂತಿ ಸರಳ ಆಚರಣೆಜಿಲ್ಲಾಡಳಿತ, ಕನ್ನಡ...