S.Bangarappa ದೊಡ್ಡಮನೆ ರಾಮಪ್ಪ ಶ್ರೀಧರ್ ಸೇವಾ ಟ್ರಸ್ಟ್ ಅಧ್ಯಕ್ಷರು, ಜೆಸಿಐ ಭಾರತದ ಹಸಿರಿಕರಣ ವಿಭಾಗದ ಪೂರ್ವ ರಾಷ್ಟ್ರೀಯ ಸಂಯೋಜಕರು ಪ್ರಶಾಂತ್ ದೊಡ್ಡಮನೆ ಇವರು ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್. ಬಂಗಾರಪ್ಪನವರ ಹುಟ್ಟು ಹಬ್ಬದ ಪ್ರಯುಕ್ತ ಅಂಕರವಳ್ಳಿ – ಗುಂಜನೂರು ಪ್ರೌಢಶಾಲೆಯಲ್ಲಿ “ಹಸಿರು ಬಂಗಾರ” ಡಿ .ಆರ್ .ಎಸ್ ಪಾರ್ಕ್
ಮಾಡುವ ಕಾರ್ಯಕ್ರಮಗಳಿಗೆ ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ದಿವಂಗತ ಎಸ್ .ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿ ಜನಪರ ಮತ್ತು ರೈತರಿಗೆ ಅನುಕೂಲವಾಗಲು ಹಲವಾರು ಕಾರ್ಯಕ್ರಮಗಳನ್ನ ಮಾಡಿದ್ದಾರೆ ಅದರಲ್ಲಿ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಿಗೆ ಗ್ರಾಮೀಣ ಕೃಪಾಂಕ ರೈತರಿಗೆ ಅನುಕೂಲವಾಗಲು ಪಂಪ್ಸೆಟ್ ಗಳ ವಿದ್ಯುತ್ ಉಚಿತಗೊಳಿಸಿರುವುದು ಇಂದಿಗೂ ಸಹ ರೈತರು ಬದುಕಲು ಅನುಕೂಲವಾಗಿದೆ ,
ಇದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣವು ಗುಣಮಟ್ಟವಾಗಲು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಹಲವಾರು ಯೋಜನೆಗಳನ್ನ ಮಾಡಿದ್ದರು, ಮತ್ತು ಅವರ ಸುಪುತ್ರರಾದ ಶ್ರೀಯುತ ಮಧು ಬಂಗಾರಪ್ಪನವರು ಶಿಕ್ಷಣ ಮಂತ್ರಿಗಳಾಗಿದ್ದು ,,ನಮ್ಮ ತಾಲೂಕಿಗೆ ಗೌರವ ಮತ್ತು ಹೆಮ್ಮೆ ತರುವ ವಿಷಯ ಮತ್ತು ನಾವೆಲ್ಲರೂ ಯುವಕರು ಸೇರಿ ಸರ್ಕಾರಿ ಶಾಲೆಗಳನ್ನ ಬೆಳೆಸುವುದು ಸಹ ನಮ್ಮ ಗುರಿಯಾಗಬೇಕು ಎಂದರು.
ಇಂದು ಅವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಗ್ರಾಮೀಣ ಮಟ್ಟದ ಶಾಲೆಗಳಲ್ಲಿ ಮಕ್ಕಳಿಗೆ ಅನುಕೂಲವಾಗಲು ಪಾರ್ಕ್ ಅನ್ನ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.
ಇದರಿಂದ ಶಾಲೆಯ ಶಾಲೆಯ ಸುತ್ತಮುತ್ತಲಿನ ಪರಿಸರವು ಅಂದವಾಗಿ ಕಾಣುತ್ತದೆ ಮತ್ತು ಮಕ್ಕಳಿಗೆ ಪರಿಸರದ ಮಧ್ಯೆ ಬೆಳೆಯಲು ಅನುಕೂಲವಾಗುತ್ತದೆ ಮತ್ತು ಗಿಡ ಮರಗಳ ಸಂರಕ್ಷಣೆ ಮತ್ತು ಅದರ ಉಪಯೋಗಗಳ ಬಗ್ಗೆ ಮಾಹಿತಿಯು ದೊರೆಯುತ್ತದೆ ಎಂದರು.
ಹಸಿರು ಬಂಗಾರ ಪಾರ್ಕನ್ನು ಉದ್ಘಾಟಿಸಿದ ಎ.ಪಿ.ಎಂ.ಸಿ ಸದಸ್ಯರಾದ ಜೈಶೀಲಾ ಗೌಡರು ಇವರು ಮಾತನಾಡಿ
ಪ್ರಶಾಂತ್ ದೊಡ್ಡಮನೆಯವರು ಕಳೆದ ಹತ್ತು ವರ್ಷಗಳಿಂದ
” ಕೇಕ್ ಬಿಡು ಗಿಡ ನೆಡು” ಧ್ಯೇಯ ವಾಕ್ಯದೊಂದಿಗೆ
ಗಿಡ ನೆಡುವ ಕಾರ್ಯಕ್ರಮಗಳ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ ,,
ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪನವರ ಹುಟ್ಟು ಹಬ್ಬದ ಪ್ರಯುಕ್ತ ಹಸಿರು ಬಂಗಾರ ಉದ್ಯಾವನ ಮಾಡುವ ಕಾರ್ಯ ರಾಜ್ಯದಲ್ಲಿ ಪ್ರಥಮ ಎಂದು ಹೇಳಿದರು.
ಸರ್ಕಾರಿ ಶಾಲೆಗಳನ್ನ ಆಯ್ಕೆ ಮಾಡಿಕೊಂಡು ಗಿಡಗಳನ್ನು ನೆಟ್ಟು ಟ್ರೀಗಾಡುಗಳನ್ನ ಅಳವಡಿಸಿ ನೀರಿನ ಪೈಪ್ ಲೈನ್ ವ್ಯವಸ್ಥೆಯನ್ನು ಮಾಡಿ ಗಿಡಗಳು ಚೆನ್ನಾಗಿ ಬೆಳೆಯಲು ಗೊಬ್ಬರ ಮುಂತಾದ ವ್ಯವಸ್ಥೆಗಳನ್ನು ಮಾಡಿರುತ್ತಾರೆ.
ಹುಟ್ಟುಹಬ್ಬವನ್ನು ಮೋಜು ಮಸ್ತಿ ಮಾಡಿ ಯುವಕರು ದುಡ್ಡನ್ನ ದುಂದು ವೆಚ್ಚ ಮಾಡುತ್ತಿರುವ ಇಂತಹ ಸಂದರ್ಭದಲ್ಲಿ ,,,
ಪ್ರಶಾಂತ್ ದೊಡ್ಡಮನೆಯವರ ಕಾರ್ಯ ಮತ್ತು ಎಲ್ಲ ಯುವಕರಿಗೆ ಮಾದರಿಯನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ಇವರು ಮಾತನಾಡಿ ಮಾತನಾಡಿ ಪ್ರಶಾಂತ್ ದೊಡ್ಡಮನೆ ಇವರು 2018ರ ಸೊರಬ ಜೆಸಿಐನ ಅಧ್ಯಕ್ಷರಾಗಿ “ಪರ್ಯಾವರಣ ಯಾತ್ರೆ “ಕೇರಳ ತಮಿಳುನಾಡು ಕರ್ನಾಟಕ ಸೇರಿದಂತೆ 5,000 ಕೀ.ಮಿ.ವ್ಯಾಪ್ತಿ ಕ್ರಮಿಸಿ ನೂರಕ್ಕೂ ಹೆಚ್ಚು ಶಾಲೆಗಳಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಮೂಡಿಸಿದ್ದಾರೆ.
2019 ರಲ್ಲಿ ಜೆ ಸಿ ಯನ್ನು ದ ವಲಯ ಸಂಯೋಜಕರಾಗಿ “ಪರ್ಯಾವಣಕಿ ಸಪ್ತಾಹ ,”ಎನ್ನುವ ಕಾರ್ಯಕ್ರಮ ಮಾಡಿದ್ದಾರೆ
2020ರಲ್ಲಿ ವಲಯ ಉಪಾಧ್ಯಕ್ಷರಾಗಿ
“ಪರ್ಯಾವರಣ ಸಪ್ತಾಹ” ಎನ್ನುವ ಶ ಕಾರ್ಯಕ್ರಮಗಳನ್ನು ಮಾಡಿ ತೆಂಗಿನ ಗಿಡಗಳನ್ನು ವಿತರಿಸಿದ್ದಾರೆ.
S.Bangarappa 2021ರ ವಲಯ ಅಧ್ಯಕ್ಷರಾಗಿ
18 ಜಿಲ್ಲೆಗಳನ್ನ ಒಳಗೊಂಡ ನಮ್ಮ ವಲಯದಲ್ಲಿ “ಪರ್ಯಾವಣಕ ಕುಟುಂಬ “ಎನ್ನುವ ಧೇಯ ವಾಕ್ಯದೊಂದಿಗೆ ಹಸಿರಿಕರಣದ ಕೆಲಸಗಳನ್ನು ಮಾಡಿದ್ದಾರೆ .
ಇದೇ ರೀತಿ 2022 ರಲ್ಲಿ ಜೆ ಸಿ ಐ ಭಾರತದ ಹಸಿ ಕರಣದ ರಾಷ್ಟ್ರೀಯ ಅಧ್ಯಕ್ಷರಾಗಿ “ಪರ್ಯಾವರಣ ಮಿತ್ರ”ಎಂಬುವ ಹೆಸರಿನಲ್ಲಿ
20ಕ್ಕೂ ಹೆಚ್ಚು ರಾಜ್ಯಗಳಲ್ಲಿ 200 ಹೆಚ್ಚು ಜೆಸಿಐ ಪಾರ್ಕ್ ಗಳನ್ನು ನಿರ್ಮಿಸಿದ್ದಾರೆ ಎಂದರು.
ಪ್ರತಿ ವರ್ಷ ಒಂದು ಸರ್ಕಾರಿ ಶಾಲೆಯನ್ನು ಆಯ್ಕೇ ಮಾಡಿ,
ಆ ಶಾಲೆಯಲ್ಲಿ ಗಿಡಗಳನ್ನ ನೆಟ್ಟು ಜೇಸಿಐ ಪಾರ್ಕ್
ಹಸಿಕರಣ ಮಾಡುವ ಕಾರ್ಯಕ್ರಮ ಈ ಹಿಂದಿನ ವರ್ಷಗಳಲ್ಲಿ ಸರ್ಕಾರಿ ಪ್ರೌಢಶಾಲೆ ಜಡೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕರಡಿಗೆರೆ,
ಬಾಲಿಕಾ ಪ್ರೌಢಶಾಲೆ ಸೊರಬ ,,
ಸರ್ಕಾರಿ ಟೌನ್ ಪ್ರೌಢಶಾಲೆ,
ನಡಹಳ್ಳಿ ಪ್ರಾಥಮಿಕ ಶಾಲೆ ,,
ಪಿಡಬ್ಲ್ಯೂಡಿ ಪ್ರಾಥಮಿಕ ಶಾಲೆ
ಕಿರಿಯ ಪ್ರಾಥಮಿಕ ಶಾಲೆ ಚನ್ನಪುರ ಈ ಶಾಲೆಗಳಲ್ಲಿ ಹಸಿರೀಕರಣದ ಕೆಲಸಗಳನ್ನು ಮಾಡಿದ್ದಾರೆ.
ಈ ಶಾಲೆಯಲ್ಲಿ ಗಿಡಗಳನ್ನು ನೆಟ್ಟು ಪಾರ್ಕ್ ಮಾಡುವ ಯೋಜನೆ ಚಾಲನೆ
ಶಾಲಾ ಮಕ್ಕಳಿಗೆ ಬಿಸಿ ಊಟಕ್ಕೆ ಅನುಕೂಲವಾಗಲು ನುಗ್ಗೆ,ಹೆಬ್ಬೇವು ,ಪೇರಲೆ, ನಿಂಬು ತೆಂಗು ,ಮಾವು
ಶಾಲಾ ಆವರಣದ ನೆರಳು ಮತ್ತು ಅಂದವಾಗಿ ಕಾಣಲು ಕಾಡು ಬಾದಾಮಿ,
ಕಾಡು ಜಾತಿಯ ಗಿಡಗಳಾದ ಸಾಗ್ವಾನಿ ,ಹಲಸು, ಮಾವು ,ನೇರಳೆ ಸಂಪಿಗೆ ,ಮಹಾಗಣಿ ,ಹುಣಿಸೆ ಹೆಬ್ಬೇವು ,ಕಾಡು ಬಾದಾಮಿ ,ನಲ್ಲಿ,
ಮುಂತಾದ ಗಿಡಗಳನ್ನು ಕೊಡಲಾಯಿತು.
“DRS ಹಸಿರು ಬಂಗಾರ ಪಾರ್ಕ್” ಶಾಲಾ ಆವರಣ ಅಂದವಾಗಿ ಕಾಣಲು ಫ್ಯಾನ್ಸಿ ಗಿಡಗಳಾದ,ಗುಲಾಬಿ ,ದಾಸವಾಳ,ತುಂಬೆ, ಕಣಗಿಲೆ, ಅರೇಲಿಯಾ, ಗೋಲ್ಡನ್ ಸೈಪ್ರೋಸ್ಸೂ,ಕ್ರಿಸ್ಮಸ್ ಟ್ರೀ ,ಹೈಡ್ರೋಜಿಯಾ,ಲಿಗೋನೀಯಾ, ಬಾಲಸುಮ್, ಇನ್ಫೆಷನ್ ,ಕ್ಯಾಪಟಸ್ ,ಜೇಡ ಪ್ಲಾಂಟ್, ಗೋಲ್ಡನ್ ತೋಜಾ ,ಸ್ಟ್ರಾಂಗ್ ಆಫ್ ಇಂಡಿಯಾ , ಡ್ರಾಸಿನಾ,ನಿತ್ಯ ಪುಷ್ಪ,ತುಜ್ಯಾ, ಕ್ರಿಸ್ಮಸ್,ಅಶೋಕ,ಕೂಪಿಯ,
ಈಫೋರ್ ಬಿಯಾ ಮುಂತಾದ 300 ಕ್ಕೂ ಹೆಚ್ಚು ಗಿಡಗಳನ್ನು ಶಾಲೆಗೆ ಇಂದು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಎ.ಪಿ.ಎಂ.ಸಿ ಸದಸ್ಯರಾದ ಜಯಶೀಲ್ ಗೌಡ್ರು ಅಂಕರವಳ್ಳಿ,ಮುಖಂಡರಾದ ಬಲಿಂದ್ರಪ್ಪ ಗುಂಜನೂರು ,ರಮೇಶ್ ಗಾಣಿಗ ಹೆಜ್ಜೆ ,ತಿಮ್ಮಪ್ಪ ಬಿ,ವಿ .ಎಸ್.ಡಿ.ಎಂ.ಸಿ ಅಧ್ಯಕ್ಷರು, ವೀರಭದ್ರಪ್ಪ, ಸತೀಶ್ ಗೌಡ್ರು ,ವೀಣಾ ಬಸವರಾಜ್ ,ಚಂದ್ರಶೇಖರ್ ಮುಖ್ಯ ಶಿಕ್ಷಕರು,
ಶಿಕ್ಷಕರಾದ ರಾಜಶೇಖರ್, ಮೌಲಾಸಾಬ್, ನಾಗರಾಜ್, ರೀನಾ ,ಪುಷ್ಪಲತಾ, ರೇಣುಕಾ ,ಚಿತ್ರಮ್ಮ, ಪದ್ಮಾವತಿ ,ದೀಕ್ಷಿತ್ ಮುಂತಾದವರು
ಉಪಸ್ಥಿತರಿದ್ದರು.