Basavamarula Siddhaswamyji ಮನುಷ್ಯ ತನ್ನಲ್ಲಿರುವ ರ್ದುಗುಣವನ್ನು ಹೋಗಲಾಡಿಸಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಬಸವ ತತ್ವಪೀಠದ ಶ್ರೀ ಡಾ|| ಬಸವಮರುಳ ಸಿದ್ದಸ್ವಾಮೀಜಿ ಹೇಳಿದರು.
ಚಿಕ್ಕಮಗಳೂರು ತಾಲ್ಲೂಕಿನ ಬೀಕನಹಳ್ಳಿ ಗ್ರಾಮದ ಶ್ರೀ ಚಾಮುಂಡೇಶ್ವರಿ ಸುಕ್ಷೇತ್ರದಲ್ಲಿ 72ನೇ ವರ್ಷದ ನಾಡಹಬ್ಬ ದಸರಾ ಮಹೋತ್ಸವ ಕಾರ್ಯಕ್ರಮಕ್ಕೆ ಭಾನುವಾರ ಸಂಜೆ ಚಾಲನೆ ನೀಡಿ ಅವರು ಆರ್ಶೀವಚನ ನೀಡಿದರು.
ಸಮಾಜದಲ್ಲಿ ಪ್ರತಿಯೊಬ್ಬರು ಪ್ರೀತಿ-ವಿಶ್ವಾಸ ಹಾಗೂ ಸಹಬಾಳ್ವೆಯನ್ನು ಹೊಂದಬೇಕು. ಮನಸ್ಸಿನಲ್ಲಿರುವ ಕೆಟ್ಟಗುಣಗಳನ್ನು ಹೋಗಲಾಡಿಸಿ ಒಳ್ಳೆಯ ಅಂಶಗಳನ್ನು ಬೆಳೆಸಿಕೊಂಡು ಎಲ್ಲರೊಂದಿಗೆ ಬೆರೆಯಬೇಕು ಎಂದು ಹೇಳಿದರು.
ದೇಶದ ಪರಂಪರೆಯಲ್ಲಿ ಅಂಗುಲಿಮಾಲ, ವಾಲ್ಮೀಕಿ ಸೇರಿದಂತೆ ಹಲವಾರು ಮಹಾನೀಯರು ತಪ್ಪುಗಳನ್ನು ತಿದ್ದಿಕೊಂಡು ಜೀವನದಲ್ಲಿ ಮುನ್ನಡೆದ ಪರಿಣಾಮ ಪ್ರಖ್ಯಾತಿಯಾಗಿದ್ದಾರೆ. ಆ ನಿಟ್ಟಿನಲ್ಲಿ ಮನುಷ್ಯ ತನ್ನ ತಪ್ಪನ್ನು ತಿದ್ದಿ ಮುನ್ನಡೆದರೆ ಶ್ರೇಷ್ಟವಾಗುವ ಜೊತೆಗೆ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂದರು.
ಮನಷ್ಯನ ಕೆಟ್ಟತನದ ರಾಕ್ಷಸವನ್ನು ನಾಶಮಾಡಲು ನಿಟ್ಟಿನಲ್ಲಿ ಬಸವತತ್ವ ಪೀಠವು ಕಾರ್ಯನಿರ್ವಹಿಸುತ್ತಿದೆ. ದೇವರ ಅನುಗ್ರಹ ಪಡೆಯುವ ಭಕ್ತಾಧಿಗಳು ಸನ್ನಡತೆ, ಸನ್ಮಾರ್ಗ ಹಾಗೂ ಉತ್ತಮ ಒಡನಾಟವನ್ನು ಹೊಂದಿರ ಬೇಕು. ಹಬ್ಬ ಹರಿದಿನಗಳನ್ನು ಆಚರಣೆಗಳಿಗೆ ಇವುಗಳೆಲ್ಲಾ ಜೀವನದಲ್ಲಿ ಪೂರಕವಾಗಲಿದೆ ಎಂದು ತಿಳಿ ಹೇಳಿದರು.
ದಸರಾವನ್ನು ಹಿಂದಿನ ಕಾಲದಿಂದಲೂ ರಾಜಮಹಾರಾಜರು ಆಚರಣೆ ಮಾಡಿಕೊಂಡು ಬಂದಿದ್ದು ಆಚರಣೆ ಯ ಉದ್ದೇಶವೆಂದರೆ ಎಲ್ಲರೂ ಒಗ್ಗಟ್ಟಾಗಿ ಪ್ರೀತಿವಿಶ್ವಾಸವನ್ನು ಸಾರುವ ಹಬ್ಬವಾಗಿದೆ. ಮಹಾತಾಯಿ ದುರ್ಗಿಯು ಪ್ರಪಂಚದ ಒಳಿತಿಗಾಗಿ ರಾಕ್ಷಸರನ್ನು ಸಂಹರಿಸಿ ಜೀವರಾಶಿಯ ರಕ್ಷಣೆಗೆ ಮುಂದಾಗಿದ್ದಾಳೆ ಎಂದು ಹೇಳಿದರು.
ಪ್ರತಿಯೊಬ್ಬ ಮಾನವನಲ್ಲೂ ಒಳ್ಳೆಯ ಹಾಗೂ ಕೆಟ್ಟ ಗುಣಗಳಿರುತ್ತವೆ. ಇವುಗಳನ್ನು ಸರಿಯಾಗಿ ನಡೆಸಿ ಕೊಂ ಡು ಹೋಗುವುದು ಮುಖ್ಯವಾಗಿದೆ. ಆ ಹಿನ್ನೆಲೆಯಲ್ಲಿ ಕೆಟ್ಟತನದ ನಡತೆಯನ್ನು ಮನಸ್ಸಿನಿಂದ ಹೋಗಲಾಡಿಸಿ ಒಳ್ಳೆಯತನವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕಿದೆ ಎಂದು ತಿಳಿಸಿದರು.
ಬಸವತತ್ವ ಪೀಠವು ಎಲ್ಲಾ ಧರ್ಮವನ್ನು ಸಮಾನಾಗಿ ಕಾಣುವ ಮೂಲಕ ಸಮಾಜಕ್ಕೆ ಮಾದರಿಯಾಗಿ ಕೆಲಸ ಮಾಡುತ್ತಿದೆ. ಪೀಠವನ್ನು ಅಲಂಕರಿಸುವವರು ತಮ್ಮ ಇಡೀ ಜೀವನವನ್ನು ಸನ್ನಡತೆಯ ಸಮಾಜವನ್ನು ಕಟ್ಟುವ ಸಲುವಾಗಿ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
Basavamarula Siddhaswamyji ಬೀಕನಹಳ್ಳಿ ಗ್ರಾ.ಪಂ. ಸದಸ್ಯ ಬಿ.ವಿ.ವಿಜಯ್‌ಕುಮಾರ್ ಮಾತನಾಡಿ ಹಿಂದಿನ ಹಿರಿಯ ಕಾಲದಿಂದಲೂ ಗ್ರಾಮದಲ್ಲಿ ದಸರಾ ಆಚರಣೆ ಬಹಳಷ್ಟು ಅದ್ದೂರಿಯಾಗಿ ನಡೆಯತ್ತಿದೆ. ರಾಜ್ಯದ ವಿವಿಧ ಕಡೆಗಳಿಂದ ಹಲವಾರು ಮಂದಿ ಗ್ರಾಮದ ದಸರ ವೀಕ್ಷಣೆಗೆ ಆಗಮಿಸಿ ಚಾಮುಂಡಿ ಆರ್ಶೀವಾದ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಬೀಕನಹಳ್ಳಿ ಗ್ರಾ.ಪಂ. ಸದಸ್ಯ ಹೆಚ್.ಪಿ.ಮಂಜೇಗೌಡ ಮಾತನಾಡಿ ದಸರವನ್ನು ಅತ್ಯಂತ ವಿಜಂಭ್ರಮಣೆ ಯಿಂದ ಪ್ರತಿ ವರ್ಷವು ಆಚರಿಸಲಾಗುತ್ತಿದೆ. ಇದೀಗ ೭೨ನೇ ವರ್ಷ ತುಂಬಿರುವುದು ಸಂತೋಷದ ಸಂಗತಿ. ದೇವಾ ಲಯ ಆಡಳಿತವು ಸ್ವಚ್ಚತೆ ಕಾಪಾಡುವ ಮೂಲಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೀಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಾವತಿ ದಿನೇಶ್, ಸದಸ್ಯರಾದ ಮಂಜುಳಾ ಶಿವಣ್ಣ, ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಬಿ.ಪಿ.ನಂಜಪ್ಪ, ಉಪಾಧ್ಯಕ್ಷ ಗುರುಬಸಪ್ಪ, ಕಾರ್ಯದರ್ಶಿ ಬಿ.ಎಂ. ಯೋಗಾನಂದ, ಖಜಾಂಚಿ ಬಿ.ಹೆಚ್.ಸೋಮೇಗೌಡ, ಸದಸ್ಯರಾದ ಬಿ.ಸಿ.ಗುರುಸಿದ್ದಪ್ಪ, ನಾಗರಾಜು, ಪರಮೇ ಶ್ವರಪ್ಪ, ನಂಜುಡಪ್ಪ, ಬಿ.ವಿ.ಯತಿರಾಜ್, ವಿಜಯ್‌ಕುಮಾರ್, ನಾಗಭೂಷಣ್ ಮತ್ತಿತರರು ಹಾಜರಿದ್ದರು.