Monday, February 2, 2026
Monday, February 2, 2026

B.Y. Raghavendra ನವರಾತ್ರಿಯ ಶುಭಾಶಯ ಕೋರಿದ ಸಂಸದ ಬಿ.ವೈ.ರಾಘವೇಂದ್ರ

Date:

B.Y. Raghavendra ಮತ್ತೆ ಬಂದಿದೆ ಶಕ್ತಿ ದೇವತೆಯನ್ನು ಆರಾಧಿಸುವ ಸಮಯ, ಶಕ್ತಿ ಸ್ವರೂಪಿ ನಾರಿಯರಿಗೆ ನಮಿಸುವ ಸಮಯ.

ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವೇ ಇದು, ಹಿಂದೂ ಧರ್ಮದ ಆಚರಣೆಗಳ ವಿಶೇಷವೇ ಇದು: ಇಲ್ಲಿ ಸದಾ ಮುಂಚೂಣಿಯಲ್ಲಿರುವುದು ನಾರಿಶಕ್ತಿ, ಸದಾ ಪ್ರಥಮ ಶ್ರೇಯಸ್ಸು ಸಲ್ಲುವುದು ನಾರಿಸ್ಫೂರ್ತಿಗೆ. ಎಲ್ಲ ಹಬ್ಬಗಳೂ ಸ್ತ್ರೀ ಸಂಭ್ರಮದ ಸುತ್ತಲಲ್ಲೇ ಇರುವಂಥವು. ನವರಾತ್ರಿ ಇನ್ನೂ ವಿಶೇಷವೇಕೆಂದರೆ ಇಲ್ಲಿ ನಾರಿಯ ಮೂರು ಸ್ವರೂಪಗಳನ್ನೂ ಆರಾಧಿಸಲಾಗುತ್ತದೆ: ದುರ್ಗೆ, ಲಕ್ಷ್ಮಿ, ಸರಸ್ವತಿ ಎಂದು ಸಂಸದರಾದ ಬಿ.ವೈ. ರಾಘವೇಂದ್ರ ಅವರು ನವರಾತ್ರಿಯ ಶುರುವಾದ ಹಿನ್ನೆಲೆಯಲ್ಲಿ ತಮ್ಮನ್ ಟ್ವಿಟರ್ ಖಾತೆಯಲ್ಲಿ ಸಂದೇಶ ಒಂದನ್ನು ಹಂಚಿಕೊಂಡಿದ್ದಾರೆ.

B.Y Raghavendra ಈ ಮೂರು ಶಕ್ತಿಗಳೇ ಜಗತ್ತಿನ ಚಾಲನಾ ಶಕ್ತಿಗಳು, ಧಾರಣಾ ಶಕ್ತಿಗಳು, ಪ್ರೇರಣಾ ಶಕ್ತಿಗಳು.

ಎಲ್ಲರಿಗೂ ಈ ಮೂರೂ ಶಕ್ತಿದೇವತೆಯರ ಅನುಗ್ರಹ ಸಿಗಲಿ, ಎಲ್ಲರ ಮನೆಯ ಗೃಹಲಕ್ಷ್ಮಿಯರೂ ಸುಖವಾಗಿರಲಿ ಅನ್ನುವುದೇ ನನ್ನ ಪ್ರಾರ್ಥನೆ
ನವರಾತ್ರಿಯ ಹಾರ್ದಿಕ ಶುಭಾಶಯಗಳು ಎಂದು ಶುಭ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...