Aam Aadmi Party ನಾಡಿನ ರೈತರು ಬರಪೀಡಿತದಿಂದ ಅನುಭವಿಸುತ್ತಿರುವ ಸಂದರ್ಭದಲ್ಲಿ ರಾಜ್ಯಸರ್ಕಾರ ಪರಿಹಾರ ನೀಡುವ ಬಗ್ಗೆ ಚಿಂತಿಸುವ ಬದಲು ಘೋಷಿಸಿದರೆ ರೈತರ ಬದುಕು ಎಂದಿಗೂ ಹಸನಾಗಲು ಸಾಧ್ಯವಿಲ್ಲ ಎಂದು ಆಮ್‌ಆದ್ಮಿ ಜಿಲ್ಲಾ ಮಾಧ್ಯಮ ಉಸ್ತುವಾರಿ ಡಾ|| ಕೆ.ಸುಂದರಗೌಡ ಹೇಳಿದ್ದಾರೆ.
ಈ ಸಂಬಂಧ ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ಬಯಲುಸೀಮೆಯ ಅನೇಕ ಭಾಗಗಳಲ್ಲಿ ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ರೈತರ ಮುಂದಿನ ಜೀವನಕ್ಕೆ ರಾಜ್ಯಸರ್ಕಾರ ಸವಲತ್ತುಗಳನ್ನು ಒದಗಿಸುವ ಬದಲು ಘೋಷಣೆಯಿಂದ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಬಯಲುನಾಡಿನ ಮುಖ್ಯ ಕೃಷಿ ಉತ್ಪನ್ನವು ಕೊಬ್ಬರಿಯಾಗಿದೆ. ಕಡೂರಿನಲ್ಲಿ ಕಳೆದ ವರ್ಷ 20 ಸಾವಿರ ಕ್ವಿಂಟಾಲ್ ಕೊಬ್ಬರಿಯನ್ನು 8 ಸಾವಿರಕ್ಕೆ ಇಳಿಸಿರುವುದು ಸರ್ಕಾರದ ಬರ ಪರಿಹಾರದ ತೀವ್ರತೆಗೆ ಹಿಡಿದ ಕೈಗನ್ನಡಿ ಯಾಗಿದ್ದು ಕೊಬ್ಬರಿ ಉತ್ಪತ್ತಿ ತೀವ್ರಗತಿಯಲ್ಲಿ ಇಳಿಮುಖವನ್ನು ಕಂಡಿರುವುದು ರೈತರ ಆತ್ಮಹತ್ಯಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ರೈತರು ತೀವ್ರ ಬರವನ್ನು ಅನುಭವಿಸುತ್ತಿರುವ ಸಮಯದಲ್ಲಿ ಬ್ಯಾಂಕಿನವರು, ಮೈಕ್ರೋ ಫೈನಾನ್ಸ್ ನವರು ಹಿಂಸಿಸುವುದರಿಂದ ರೈತ ಮಹಿಳೆಯರು ಕೂಡಾ ಆತ್ಮಹತ್ಯೆಗೆ ಬಲಿಯಾಗಿದ್ದಾರೆ, ರೈತರ ಸ್ವಾಭಿಮಾನ ಮತ್ತು ಸ್ವಾವಲಂಬನೆಯನ್ನು ಕಾಪಾಡುವಲ್ಲಿ ರಾಜ್ಯಸರ್ಕಾರ ವಿಫಲತೆ ಕಾಣಲಾಗುತ್ತಿದೆ ಎಂದು ದೂರಿದ್ದಾರೆ.
Aam Aadmi Party ಇದರ ನಡುವೆ ಮದ್ಯ ಮತ್ತು ವಿದ್ಯುಚ್ಚಕ್ತಿಯ ದುಬಾರಿತನದಿಂದ ಮದ್ಯವನ್ನು ಪ್ರತಿ ಗ್ರಾಮ ಪಂಚಾಯಿತಿ ಮಟ್ಟ ದಲ್ಲಿ ತೆರೆಯಲು ಮುಂದಾಗಿರುವುದು ರೈತರ ಶಕ್ತಿಗುಂದಿಸುವ ಮೂಲಕ ಮಾನವ ಶಕ್ತಿಯ ನಾಶಕ್ಕೆ ಸರ್ಕಾರ ಮುಂದಾಗಿರುವುದಕ್ಕೆ ನಿದರ್ಶನವಾಗಿದೆ. ಇನ್ನೊಂದೆಡೆ ವ್ಯಸಮುಕ್ತ ಚಟುವಟಿಕೆ ನಡೆಸಲು ಕರೆ ನೀಡುವ ಸರ್ಕಾರ ಮತ್ತೊಂದೆಡೆ ಮದ್ಯದಾಸರಾಗಲು ಗ್ರಾ.ಪಂ.ಗಳಲ್ಲಿ ತೆರೆಯಲು ಮುಂದಾಗಿರುವುದು ಸರಿಯಿಲ್ಲ.
ವಿದ್ಯುತ್ ಉಚಿತವಾಗಿ ನೀಡುತ್ತೇವೆಂದು ಗ್ರಾಮೀಣ ಜನರಿಂದ ಲೋಡ್‌ಶೆಡ್ಡಿಂಗ್ ಮಾಡುವ ಮುಖಾಂತರ ಉತ್ಪತ್ತಿ ಕುಗ್ಗಿಸುವುದೇ ಸರ್ಕಾರದ ಗುರಿಯೇ.ಇಷ್ಟೆಲ್ಲಾ ಸಾಮಾನ್ಯಜನತೆಗೆ ಉಚಿತವೆಂದು ಹೇಳುವ ಮೂಲಕ ಕಂಡಿಷನ್, ಕಡಿವಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಇನ್ನೆಷ್ಟು ದಿನ ಅಧಿಕಾರದಲ್ಲಿ ಮುಂದುವರೆಯಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.