ನೇರ-ನುಡಿ
ಲೇ: ಪ್ರಭಾಕರ ಕಾರಂತ.
ಹೊಸಕೊಪ್ಪ ,
ಶೃಂಗೇರಿ.
Klive News Special Article ಉಕ್ರೇನ್ ಯುದ್ದದಿಂದ ತತ್ತರಿಸುತ್ತಿದ್ದ ವಿಶ್ವಕ್ಕೆ ಇಸ್ರೇಲ್ ಪ್ಯಾಲಸ್ಟೈನ್ ಯುದ್ದ ಇನ್ನಷ್ಟು ಸಂಕಟ ತರಲಿದೆ.ಗಾಜಾ ಪಟ್ಟಿಯ ಹಮಾಸ್ ಉಗ್ರರಿಗೆ ಇಸ್ರೇಲ್ ನೆರೆಹೊರೆಯ ಇಸ್ಲಾಂನ ಎಲ್ಲಾ ದೇಶಗಳ ಕುಮ್ಮಕ್ಕು ಇದ್ದೇ ಇದೆ.ಆಂತರಿಕ ಬಿನ್ನಾಭಿಪ್ರಾಯದಿಂದ ಸ್ವಲ್ಪ ಮೈಮರೆತಿದ್ದ ಇಸ್ರೇಲಿಗೆ ಉಗ್ರರು ದೊಡ್ಡ ಪೆಟ್ಟೇನೋ ನೀಡಿದ್ದಾರೆ.ಇಸ್ರೇಲಿಗೆ ನುಗ್ಗಿದ ಅವರು ರಾಕ್ಷಸರೂ ನಾಚುವಂತ ಕ್ರೌರ್ಯ ಮೆರೆದಿದ್ದಾರೆ. ಇಸ್ರೇಲ್ ಮಹಿಳೆಯರ ಮೇಲಿನ ಅವರ ದೌರ್ಜನ್ಯ ಈ ಪಶುಗಳು ನಾಗರೀಕ ಪ್ರಪಂಚದಲ್ಲಿರಲು ಯೋಗ್ಯರಲ್ಲ ಎಂದು ಸಿದ್ದ ಮಾಡಿದೆ.ಕತ್ತು ಕತ್ತರಿಸುವುದು ಈಗೀಗ ಹಿಂಸೆಯ ಸೌಮ್ಯ ರೂಪ ಎನಿಸುತ್ತಿದೆ.
ಈ ಹಿಂಸಾಚಾರ ನೋಡಿದ ಮೇಲೂ ಬೇರೆಡೆ ಇರಲಿ ಭಾರತದ ಅನೇಕ ರಾಜಕಾರಣಿಗಳು ಸಂಭ್ರಮ ಪಟ್ಟಿದ್ದಾರೆ.ಮಫ್ತಿ,ಓವೈಸಿ ಇಂತವರಿಗೆ ಹೃದಯ ಅರಳಿದೆ.
ಕಾಂಗ್ರೆಸ್ ಕಾರ್ಯಸಮಿತಿ ಹಿಂಸೆಯನ್ನು ಖಂಡಿಸುವ ಬದಲು ಪ್ಯಾಲಸ್ಥೀನಿಯನ್ ರ ಬದುಕುವ ಹಕ್ಕನ್ನು ಬೆಂಬಲಿಸದೆ.ಈ ಪಕ್ಷ ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಮಾಡಿಕೊಂಡೇ ಬಂದ ತುಷ್ಟೀಕರಣ ನೀತಿಗೆ ದೇಶ ಬಹಳ ಬೆಲೆ ತೆತ್ತಿದೆ. ಈಗಲೂ ಅದರ ಏಕಪಕ್ಷೀಯ ನಿಲುವು ಗಾಭರಿ ಹುಟ್ಟಿಸುತ್ತದೆ.ಭಾರತದ ಇಸ್ಲಾಮೀಕರಣಕ್ಕೆ ಕಾಂಗ್ರೆಸ್ಸಿನ ಭದ್ದತೆ ಜಗಜ್ಜಾಹೀರಾಗುತ್ತಿದೆ.
10 ಕಿಮೀ ಅಗಲ ಮತ್ತು 41 ಕಿಮೀ ಉದ್ದದ ಗಾಜಾ ಪಟ್ಟಿ ಹಮಾಸ್ ಉಗ್ರರ ಆಡೊಂಬಲವಾಗಿದೆ. ಇಡೀ ಇಸ್ರೇಲ್ ತನ್ನದು ಎಂದು ಈ ಉಗ್ರರು ನಂಬುತ್ತಾರೆ.ವಿಶ್ವದ ಬಹುತೇಕ ಇಸ್ಲಾಂನ ಅನುಯಾಯಿಗಳೂ ಇದೇ ವಾದ ಮಾಡುತ್ತಾರೆ. ಇಸ್ಲಾಂನ ಹುಟ್ಟಿನ ಮೊದಲೇ ಯಹೂದಿಗಳ ತಾಯ್ನಾಡು ಅಲ್ಲಿದ್ದದ್ದನ್ನು ಇಸ್ಲಾಂನ ಅನುಯಾಯಿಗಳು ಮರೆತು ಬಿಡುತ್ತಾರೆ.ಇತಿಹಾಸ ತಮಗೆ ಬೇಕಾದಷ್ಟೇ ಹಿಂದಕ್ಕೆ ತೆಗೆದುಕೊಂಡು ಹೋಗುವ ಅವರು ಯಾವ ಮುಲಾಜೂ ಇಲ್ಲದೇ ಹಿಂಸೆಯ ಮೂಲಕ ಜಗತ್ತನ್ನೇ ಆಳಲು ಬಯಸುತ್ತಾರೆ.ಭಾರತವನ್ನೂ ಸಹ ಅವರು ಒಂದು ಕಾಲದ ತಮ್ಮ ದೇಶ ಎಂದೇ ಪರಿಗಣಿಸುತ್ತಾರೆ. ಸಾವಿರ ವರ್ಷ ತಮ್ಮದಾಗಿದ್ದ ದೇಶ ಇನ್ನೂ ತಮ್ಮದೇ ಆಗಬೇಕು ಎಂಬುದನ್ನು ಹುಟ್ಟಾದಾರಬ್ಯ ಮಕ್ಕಳ ಮನಸಲ್ಲಿ ತುಂಬಿಸಲಾಗುತ್ತದೆ. ದೇಶವೇ ಅವರದ್ದಾದ ಮೇಲೆ ರಾಮ ಜನ್ಮಭೂಮಿ, ಜ್ಞಾನವ್ಯಾಪಿ ಇವುಗಳ ಹಕ್ಕನ್ನು ಹೇಗೆ ತಾನೇ ಬಿಟ್ಟುಕೊಟ್ಟಾರು?.ಜಗತ್ತಲ್ಲಿ ತಮ್ಮ ಧರ್ಮ ಮಾತ್ರ ಇರಬೇಕು ಮತ್ತು ಕಾಫಿರರನ್ನು ಕೊಂದು ಹಾಕಬೇಕು ಎಂಬ ಮನಸ್ಥಿತಿಯನ್ನ ಬೆಳೆಸುವುದನ್ನ ಸೆಕ್ಯುಲರಿಸಮ್ ಹೆಸರಿನಲ್ಲಿ ಕಾಂಗ್ರೆಸ್ ಪೋಷಿಸಿಕೊಂಡೇ ಬಂದಿದ್ದು ಈಗಂತೂ ಅದು ಮುಲಾಜಿಲ್ಲದೇ ಅದನ್ನು ಸಾರಿದೆ.ಒಂದು ಕಡೆ ಜಾತಿ ಜನಗಣತಿ ಲೆಕ್ಕದಲ್ಲಿ ಹಿಂದೂ ಸಮಾಜ ಛಿದ್ರ ಮಾಡಿ ಅತ್ತ ಪ್ಯಾಲಸ್ಥೈನ್ ಹೆಸರಲ್ಲಿ ಮುಸ್ಲಿಮರ ಮತ ಗಟ್ಟಿ ಮಾಡಿಕೊಂಡು ರಾಹುಲ ಗಾಂಧಿಯವರ ಪಟ್ಟಾಭಿಷೇಕ ಮಾಡಲು ಕಾಂಗ್ರೆಸ್ ಮುಂದಾಗಿದೆ.ಸ್ವಾತಂತ್ರ್ಯ ಬಂದ ಅನೇಕ ದಶಕಗಳಿಂದ ಇಸ್ರೇಲೊಂದಿಗೆ ರಾಜತಾಂತ್ರಿಕ ಸಂಬಂಧ ಸಹ ಇಟ್ಟುಕೊಳ್ಳದ ಕಾಂಗ್ರೆಸ್ಸಿನ ನೀತಿ ಭಾರತದ ಮಟ್ಟಿಗೆ ವಿನಾಶಕಾರಿ ಎನಿಸಿದೆ.
Klive News Special Article ಇಸ್ರೇಲ್ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಉಗ್ರ ಶಬ್ದಗಳಿಂದ ಖಂಡಿಸಿರುವ ಭಾರತ ಈ ಯುದ್ಧದಲ್ಲಿ ಅಮೆರಿಕ ಮತ್ತು ಯುರೋಪಿನ ಪರ ನಿಂತಿದೆ. ರಷ್ಯಾ ಉಕ್ರೇನ್ ಯುದ್ದದಲ್ಲಿ ತೆಗೆದುಕೊಂಡ ನಿರ್ಧಾರಕ್ಕಿಂತ ಇದು ಬೇರೆಯದೇ ಆಗಿದೆ.ಅದೇ ಇಸ್ಲಾಂನ ಉಗ್ರರಿಂದ ಭಾರತ ಸಹ ಅನೇಕ ದಶಕಗಳಿಂದ ಅಪಾಯ ಎದುರಿಸುತ್ತಿದ್ದು, ಇಸ್ರೇಲ್ ಎಲ್ಲಾ ಹಂತದಲ್ಲೂ ಭಾರತದ ಸನ್ಮಿತ್ರ ಎನಿಸಿರುವಾಗ ನಾವು ಸಂಕಟದ ಸಮಯದಲ್ಲಿ ಅವರ ಪರ ನಿಲ್ಲುವುದು ನ್ಯಾಯವೇ ಆಗಿದೆ.ರಾಷ್ಟ್ರೀಯ ಹಿತದ ವಿರುದ್ಧ ನಿಲ್ಲುವ ಕಾಂಗ್ರೆಸ್ ಈಗಲೂ ಅದನ್ನೇ ಮುಂದುವರೆಸಿದೆ.ಪಾಕಿಸ್ತಾನದ ನಿಲುವನ್ನೇ ಕಾಂಗ್ರೆಸ್ ಮತ್ತೆ ಬೆಂಬಲಿಸಿದೆ.ಮೌಲ್ವಿಗಳೂ,ಕಮ್ಯುನಿಷ್ಟರೂ,ತೃಣಮೂಲರೂ ಎಲ್ಲರದ್ದೂ ಒಂದೇ ನಿಲುವು!.ಭಯೋತ್ಪಾದಕರು ಮುಗ್ದರು.ಉಗ್ರರು ಮೂಲನಿವಾಸಿಗಳು. ಜಗತ್ತಿನ ಉಳಿವಿಗೆ ಇವರೇ ಬೇಕು!!.
ಮೋದಿಯವರು ಸೈನ್ಯ ನೇಮಕಾತಿಯಲ್ಲಿ ಅಗ್ನಿವೀರ್ ತಂದಿದ್ದೇ ಯುದ್ಧದ ಸನ್ನಿವೇಶದಲ್ಲಿ ಸೈನ್ಯ ತರಬೇತು ಪಡೆದ ಒಂದು ಪಡೆ ದೇಶದ ಎಲ್ಲೆಡೆ ಆಂತರಿಕ ಶತೃ ನಿಗ್ರಹಕ್ಕೆ ಇರಬೇಕು ಎಂಬ ಘನೋದ್ದೇಶದಿಂದ. ಆಗ ಕಾಂಗ್ರೆಸ್ಸಿನ ವಿರೋಧ ಸಹ ಇಂತಹ ಪಡೆ ತನ್ನ ಬ್ರದರ್ಸ್ ವಿರುದ್ಧ ಇರಬಾರದು ಎಂಬ ಕಾರಣಕ್ಕೆ.
ಇಸ್ರೇಲ್ ಸುತ್ತಲಿನ ಎಲ್ಲಾ ದೇಶಗಳೂ ಉಗ್ರ ಪರವೇ ಆಗಿವೆ.ಲೆಬಿನಾನ್ ಸೇರಿಸದಂತೆ ವಿವಿದ ದೇಶಗಳ ಸಂಯುಕ್ತ ಕಾರ್ಯಾಚರಣೆ ಮೊನ್ನೆಯ ದಾಳಿ ಅನಿಸದಿರುವುದಿಲ್ಲ.ಇಸ್ರೇಲ್ ನಿಂದ ಎರಡು ಸಾವಿರ ಕಿಮೀ ದೂರದಲ್ಲಿರುವ ಇರಾನ್ ಈ ದಾಳಿಗೆ ಸಹಯೋಗ ನೀಡಿದೆ.ಹಮಾಸ್ ಸುನ್ನಿ ಮುಸ್ಲಿಮರ ಉಗ್ರ ಸಂಘಟನೆ. ಇರಾನ್ ಶಿಯಾ ಮುಸ್ಲಿಮರ ದೇಶ.ಹೀಗಿದ್ದೂ ಇಸ್ರೇಲ್ ವಿಷಯ ಬಂದಾಗ ಈ ಬೇದಭಾವ ಮರೆತು ಬಿಡುತ್ತಾರೆ.ಇರಾನ್ ನಲ್ಲಿ ಆಯತುಲ್ಲಾ ಖೊಮೇನಿ ಯಂತ ಉಗ್ರವಾದಿ ಆಡಳಿತ ಬಂದಮೇಲೆ ಆ ದೇಶ ಸಂಪೂರ್ಣ ಕಟ್ಟರ್ ಪಂಕ್ತಿ ಕೈವಶವಾಗಿದೆ.
ಮಹತ್ವದ ಸಂಗತಿ ಎಂದರೆ ಯುಎಇ ಈ ಸಂದರ್ಭ ಉಗ್ರರ ವಿರುದ್ಧ ನಿಲುವು ತಾಳಿದೆ. ಸೌದಿ ಸಹ ಉಗ್ರರ ಪರ ನೇರ ನಿಲ್ಲಲು ಅನುಮಾನಿಸಿದೆ. ಈಜಿಪ್ಟ್,ಇಂಡೋನೇಷಿಯಾದ್ದೂ ಹೀಗೇ ನಿಲುವು.ಮುಸ್ಲಿಮ್ ಜಗತ್ತಿನಲ್ಲೂ ಉಗ್ರ ವಿರೋಧ ವ್ಯಕ್ತವಾಗಿರುವುದು ಆಶಾದಾಯಕ ಬೆಳವಣಿಗೆ.
ಇಸ್ರೇಲ್ ಕೆಣಕಿ ಹಮಾಸ್ ಬಹುದೊಡ್ಡ ತಪ್ಪು ಮಾಡಿದೆ.ಇಸ್ರೇಲ್ ಗಾಜಾ ಪಟ್ಟಿಯನ್ನು ತನ್ನ ವಶಕ್ಕೆ ಪಡೆಯಲಿದೆ.ಅಲ್ಲಿನ ಆಹಾರ, ನೀರು ಪೂರೈಕೆ ಸ್ಥಗಿತಗೊಳಿಸಿದೆ.ಚದುರ ಕಿಮೀ ಗೆ ಐದು ಸಾವಿರ ಜನಸಾಂದ್ರತೆ ಇರುವ ಆ ಪುಟ್ಟ ಪ್ರದಚಶದ 21 ಲಕ್ಷ ಜನರ ಬದುಕು ಬರ್ಬರ ಆಗಲಿದೆ. ಭಯೋತ್ಪಾದಕರಿಗೆ ಬೆಂಬಲಿಸಿದ ಪರಿಣಾಮ ಈಗ ಪಾಯಾಲಸ್ಥೈನ್ ಅನುಭವಿಸಲಿದೆ. ಇಸ್ರೇಲ್ ಜತೆ ಯುರೋಪ್ ಮತ್ತು ಅಮೆರಿಕ ಗಟ್ಟಿಯಾಗಿ ನಿಲ್ಲಲಿವೆ.ಆಗಲೇ ಅಮೆರಿಕ ಸೈನ್ಯ ಮತ್ತು ಯುದ್ಧ ಹಡಗು ವಿಮಾನ ಇಸ್ರೇಲಿಗಿ ಕಳಿಸಿದೆ.ಚೀನಾ ಮತ್ತು ರಷ್ಯ ಇಸ್ರೇಲಿನ ವಿರುದ್ದ ನೇರ ಬರುವ ಸಂಭಾವ್ಯತೆ ಕಡಿಮೆ .ಗಾಜಾ ಅಂತರರಾಷ್ಟ್ರೀಯ ನೇರವಿನಿಂದಲೇ ಬದುಕುತ್ತಿತ್ತು. ಅದನ್ನೀಗ ಯುರೋಪ್ ಸ್ಥಗಿತಗೊಳಿಸಿದೆ.
ಇಸ್ರೇಲ್ ನೀತಿ ಯಾವಾಗಲೂ ಸ್ಪಸ್ಟ.ತನ್ನ ಸುದ್ದಿಗೆ ಬಂದವರಿಗೆ ಅದು ಪಾಠ ಕಲಿಸಲಿದೆ. ಅಲ್ಲಿನ ಎಲ್ಲಾ ಯುವಕರೂ ಪ್ರೌಡರೂ ಮಿಲಿಟರಿ ತರಬೇತಿ ಪಡೆದವರೇ. ರಾಷ್ಟ್ರ ಗಂಢಾಂತರಕ್ಕೆ ಸಿಕ್ಕಾಗ ಇಡೀ ಇಸ್ರೇಲ್ ಯುದ್ಧಕ್ಕೆ ಹೊರಡುತ್ತದೆ. ತನ್ನ ಲಕ್ಷಾಂತರ ಸೈನಿಕರನ್ನು ಗಾಜಾ ಕ್ಕೆ ಇಸ್ರೇಲ್ ಕಳಿಸಲಿದೆ.ಉಗ್ರರ ಸಂಪೂರ್ಣ ನಾಶದ ಗುರಿ ಅದು ಹಾಕಿಕೊಂಡಿದೆ.ಸುತ್ತಲಿನ ಎಲ್ಲಾ ದೇಶ ಮುಗಿಬಿದ್ದರೂ ಎಲ್ಲರಿಗೂ ಪಾಠ ಕಲಿಸಲಿದೆ. ಇಸ್ರೇಲಿನಲ್ಲಿ ಯುದ್ಧ ಸಂಧರ್ಭ ಬಿನ್ನಾಭಿಪ್ರಾಯ ಇಲ್ಲವೇ ಇಲ್ಲ.ದೇಶ ತೆಗೆದುಕೊಂಡ ನಿಲುವಿನ ವಿರುದ್ಧ ಪ್ರತಿಪಕ್ಷಗಳು ನಿಲ್ಲುವುದೇ ಇಲ್ಲ.
ಈ ಉಗ್ರ ದಾಳಿ ಭಾರತಕ್ಕೂ ಒಂದು ಎಚ್ಚರಿಕೆ. ನಮ್ಮ ಮೇಲೆ ಒಂದೆಡೆ ಪಾಕಿಸ್ತಾನ ಮತ್ತೊಂದೆಡೆ ಚೀನಾ ಸಮರ ಸಜ್ಜಿತವಾಗಿವೆ. ನಾವು ಇದರ ಜೊತೆ ದೇಶದ ಒಳಗಿನ ರಾಷ್ಟ್ರ ದ್ರೋಹಿಗಳೊಂದಿಗೂ ಹೋರಾಟ ಮಾಡಬೇಕಾಗುತ್ತದೆ. ಇಲ್ಲಿನ ಅನ್ನ ತಿಂದೂ ಶತೃ ರಾಷ್ಟ್ರ ಇರುವ ಕಮ್ಯುನಿಷ್ಟರಿದ್ದಾರೆ,ಎಡಪಂಥೀಯ ಉಗ್ರರಿದ್ದಾರೆ, ಮುಸ್ಲಿಮ್ ಉಗ್ರರಿದ್ದಾರೆ,ಸಾಲದು ಎಂಬಂತೆ ಕಾಂಗ್ರೆಸ್ಸಿನ ನೇತೃತ್ವದ ಐಎನ್ ಡಿಎ ಕೂಟ ಇದೆ.ಅವರು ಸಾಕಿಟ್ಟ ಬುದ್ದಿ ಜೀವಿಗಳಿದ್ದಾರೆ, ಪ್ರಗತಿಪರರಿದ್ದಾರೆ, ಕೋಮುವಾದೀ ಉಗ್ರರಿದ್ದಾರೆ ಸಾಕು ನಾಯಿಗಳಂತೆ ಮಾಧ್ಯಮ ದವರಿದ್ದಾರೆ. ವಿಶ್ವದ ಯಾವದೇಶಕ್ಕೂ ಬಾಹ್ಯ ಶತೃಗಳನ್ನು ಬೆಂಬಲಿಸುವ ಆಂತರಿಕ ಶತೃಗಳು ಈ ಮಟ್ಟದಲ್ಲಿ ಇರಲಿಕ್ಕಿಲ್ಲ.
ನಮ್ಮ ದೇಶ ಒಡೆಯುವ ಮನಸ್ಥಿತಿ ಇರುವ ಖಾಲಿಸ್ಥಾನ್ ಉಗ್ರರು ಕೆನಡಾ ದಂತ ತಲೆತಿರುಕ ನಾಯಕತ್ವವಿರುವ ದೇಶಗಳ ಬೆಂಬಲದಿಂದ ಶಕ್ತಿಯುತ ಆಗುತ್ತಿರುವಾಗಲೇ ಈ ಸಂಕಷ್ಟ ಬಂದಿದೆ.ಜಾತಿ ಹೆಸರಲ್ಲಿ ಹಿಂದೂ ಒಡಕು ಮೂಡಿದರೆ, ಕಾಂಗ್ರೆಸ್ಸಿನ ಆಡಳಿತ ಬಂದರೆ ಭಾರತಕ್ಕೆ ಭವಿಷ್ಯ ಇಲ್ಲ ಎಂದು ಯಾರೂ ಹೇಳಬಹುದು.