International Coffee Day ಆಹ್, ಕಾಫಿ!
ಪ್ರಪಂಚದಲ್ಲಿ ಅತಿಹೆಚ್ಚು ಜನಪ್ರಿಯ ಪೇಯವೆಂದರೆ ಕಾಫಿಯೇ. ಅತಿ ಪುರಾತನ ಪೇಯ ಅಂತಲೂ ನಂಬಿಕೆಯಿದೆ.
ಆಫ್ರಿಕಾದ ದೇಶಗಳಿಂದ ಜಗತ್ತಿನಾದ್ಯಂತ ಹರಡಿರುವ ಕಾಫಿಯ ಹಿರಿಮೆಯನ್ನು ಸಂಭ್ರಮಿಸುವುದಕ್ಕಾಗಿ ವರ್ಷದ ಒಂದು ದಿನವನ್ನು ಜಾಗತಿಕ ಕಾಫಿ ದಿನವನ್ನಾಗಿ ಆಚರಿಸಬೇಕೆಂದು ಅಂತಾರಾಷ್ಟ್ರೀಯ ಕಾಫಿ ಸಂಸ್ಥೆ ತೀರ್ಮಾನಿಸಿದ್ದು 2014ರಲ್ಲಿ. ಮೊದಲ ಅಂತಾರಾಷ್ಟ್ರೀಯ ಕಾಫಿ ದಿನ ನಡೆದಿದ್ದು 2015ರಲ್ಲಿ, ಇಟಲಿಯ ಮಿಲಾನ್ ನಗರದಲ್ಲಿ.
International Coffee Day ಅಂದಿನಿಂದ ಇದು ಪ್ರತಿವರ್ಷ ನಡೆಯುತ್ತಿದೆ. 77ರಾಷ್ಟ್ರಗಳು ಇದನ್ನು ಆಚರಿಸುತ್ತವೆ. ಅಮೆರಿಕದಲ್ಲಿ ಸೆಪ್ಟೆಂಬರ್ 29ಕ್ಕೆ; ಆದರೆ ಇನ್ನುಳಿದ ಬಹುತೇಕ ಕಡೆಗಳಲ್ಲಿ ಇದು ಇಂದು, ಅಕ್ಟೊಬರ್ 1 ರಂದು.
ಕಾಫಿ ಕುಡಿಯದವರೂ ಕಾಫಿಯ ರುಚಿ ಕಂಡುಕೊಳ್ಳಲಿ, ಕಾಫಿಯ ಪೂರ್ವಾಪರಗಳನ್ನೂ-ಲಾಭಗಳನ್ನೂ ಎಲ್ಲರೂ ತಿಳಿಯುವಂತಿಗಲಿ, ಕಾಫಿ ಉದ್ದಿಮೆದಾರರ ವಲಯದಲ್ಲಿ ಉದ್ಯಮದ ಬಗ್ಗೆ ಚರ್ಚೆಗಳಾಗಲಿ ಅನ್ನುವುದು ಈ ವಿಶೇಷ ದಿನದ ಉದ್ದೇಶ.
ಬಿಸಿಬಿಸಿ ಕಾಫಿ ಹೀರುತ್ತಾ ಅದರ ಸುಖವನ್ನು ಮೈಮನ ತುಂಬಿಕೊಳ್ಳಿ!
ಹ್ಯಾಪಿ ಕಾಫಿ ಡೇ!☕️☕️
