Saturday, May 23, 2026
Saturday, May 23, 2026

JCI Shivamoga ವ್ಯಾಪಾರ ವೃದ್ದಿಗೆ ಪರಸ್ಪರ ಸಹಕಾರ ಅಗತ್ಯ-ಪೂರ್ಣಿಮಾ ಸುನೀಲ್

Date:

JCI Shivamoga ವ್ಯಾಪಾರ ವಹಿವಾಟು ವೃದ್ಧಿಸಿಕೊಳ್ಳಲು ಪ್ರತಿಯೊಬ್ಬರೂ ಪರಸ್ಪರ ಸಹಕಾರ ನೀಡುವುದು ಅತ್ಯಂತ ಮುಖ್ಯ ಎಂದು ಜೆಸಿಐ ಶಿವಮೊಗ್ಗ ಭಾವನಾ ಅಧ್ಯಕ್ಷೆ ಪೂರ್ಣಿಮಾ ಸುನೀಲ್ ಹೇಳಿದರು.

ಶಿವಮೊಗ್ಗ ನಗರದಲ್ಲಿ ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಜೆಸಿ ಸದಸ್ಯರ ಬೈ ಫ್ರಮ್ ಜೆಸಿ ಎಂಬ ಶೀರ್ಷಿಕೆಯಡಿ ಜೆಕಾಂ ಕಾರ್ಯಗಳ ಬಗ್ಗೆ ಮಾತನಾಡಿ, ವ್ಯಾಪಾರ ವಹಿವಾಟು ಹೆಚ್ಚಿಸಿಕೊಳ್ಳುವ ದೃಷ್ಠಿಯಿಂದ ಹೆಚ್ಚು ಜನರ ಸಂಪರ್ಕ ಪರಸ್ಪರ ಪರಿಚಯ ಮುಖ್ಯ ಆಗಿರುತ್ತದೆ. ಇದರಿಂದ ಉದ್ಯಮಗಳಲ್ಲಿ ಯಶಸ್ಸು ಕಾಣಬಹುದಾಗಿದೆ ಎಂದು ತಿಳಿಸಿದರು.

ಜೆಸಿಐ ವಲಯ ಅಧ್ಯಕ್ಷ ಅನುಷ್ ಗೌಡ ಮಾತನಾಡಿ, ಜೆ ಸಿ ಸದಸ್ಯರ ವ್ಯವಹಾರವನ್ನು ಮತ್ತಷ್ಟು ವೃದ್ಧಿಗೊಳಿಸಲು ಕೆಲವೊಂದು ವ್ಯವಹಾರಿಕ ಸಂಬಂಧಗಳ ವಿಷಯದ ಕುರಿತು ಜೆ ಸಿ ಸಂಸ್ಥೆಯು ನಿರಂತರ ಮಾರ್ಗದರ್ಶನ ನೀಡುವ ವಿಶೇಷ ಶಿಬಿರಗಳನ್ನು ಆಯೋಜಿಸುತ್ತದೆ ಎಂದು ಹೇಳಿದರು.

ಜೆಸಿ ಸಂಸ್ಥೆಯ ಮತ್ತೊಂದು ವಿಭಾಗವಾದ ವ್ಯವಹಾರಕ್ಕೆ ಸಂಬಂಧಿಸಿದ ಜೆಕಾಂ ಕಾರ್ಯಗಳ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆ ಸದಸ್ಯೆ ಸ್ಮಿತಾ ಶಿವಕುಮಾರ್ ಅವರು ಗಾಂಧಿ ಬಜಾರ್ ನಲ್ಲಿ ಇರುವ ದೋಸೆ ಕ್ಯಾಂಪ್, ಏರ್‌ಪೋರ್ಟ್ ರಸ್ತೆಯಲ್ಲಿರುವ ಅಶ್ವಿನಿ ಅವರ ಬಿಗ್ ಬ್ಯೂಟಿ ಪಾರ್ಲರ್ ಹಾಗೂ ಕರಿಬಸಮ್ಮ ಅವರ ಸೀರೆ ವ್ಯಾಪಾರವನ್ನು ಯಾವ ರೀತಿ ವೃದ್ಧಿಸಿಕೊಳ್ಳಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಿದರು.

JCI Shivamoga ಈ ಸಂದರ್ಭದಲ್ಲಿ ಜೈತ್ರ ಹಬ್ಬದ ಕೋಆರ್ಡಿನೇಟರ್ ಪ್ರದೀಪ್ ಹಾಗೂ ಭಾವನದ ಎಲ್ಲ ಸದಸ್ಯರು ಪಾಲ್ಗೊಂಡು ವ್ಯವಹಾರ ವೃದ್ಧಿಸುವಲ್ಲಿ ಪರಸ್ಪರ ಸಹಕರಿಸುತ್ತೇವೆ ಎಂದು ಮಾಹಿತಿ ಹಂಚಿಕೊoಡರು.

ಜೆಸಿಐ ಶಿವಮೊಗ್ಗ ಭಾವನಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ತಾತ್ಕಾಲಿಕ ನೇರ ನೇಮಕಾತಿ ಮೂಲಕಖಾಯಂ ಶಿಕ್ಷಕರ ನೇಮಕಾತಿವರೆಗೆ ಅತಿಥಿ ಶಿಕ್ಷಕರ ನೇಮಕ

Shimoga News 2026-27ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು...

Klive Special Article ನೇಪಾಳದಲ್ಲಿ ಶೃಂಗೇರಿ ಜಗದ್ಗುರುಗಳು.

ವಿಶೇಷ ವರದಿ: ಪ್ರಭಾಕರ ಕಾರಂತ Klive Special Article ಜಗದ್ಗುರು ಶ್ರೀ ವಿಧುಶೇಖರ ಭಾರತೀ...

Eshwara Khandre ಶ್ರಾವ್ಯಾ ಸಾಗರ್ ನಿರ್ಮಾಣದ ಸಾಕ್ಷ್ಯಚಿತ್ರಕ್ಕೆ ಜೀವವೈವಿಧ್ಯ ಪ್ರಶಸ್ತಿ.

Eshwara Khandre ಕರ್ನಾಟಕ ಸರ್ಕಾರದ ಜೀವವೈವಿದ್ಯ ಮಂಡಳಿ ಕೊಡಮಾಡುವ ೨೦೨೫-೨೬ನೇ ಸಾಲಿನ...