Saturday, October 10, 2026
Saturday, October 10, 2026

Kateel Ashok Pai Memorial Institute ಸೆ.9 ರಿಂದ 12 ವರೆಗೆ ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆ ವಿವಿಧ ಕಾರ್ಯಕ್ರಮಗಳು

Date:

Kateel Ashok Pai Memorial Institute ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆ, ಮಾನಸ ಟ್ರಸ್ಟ್ (ರಿ), ಶಿವಮೊಗ್ಗದ ವತಿಯಿಂದ ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆಯ ಅಂಗವಾಗಿ ದಿನಾಂಕ 09/09/2023 ರಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಂದ ಶಿವಮೊಗ್ಗದ ಮಾನಸ ನರ್ಸಿಂಗ್ ಹೋಂ ಇಂದ ಬಿ.ಹೆಚ್ ರಸ್ತೆ ಮಾರ್ಗವಾಗಿ ಬೆಳಗ್ಗೆ 11:00 ಗಂಟೆಗೆ ಜಾತಾ ನಡೆಸಲಾಯಿತು.

ಸದರಿ ಕಾರ್ಯಕ್ರಮವನ್ನು ಮಾನಸ ಟ್ರಸ್ಟ್ನ ನಿರ್ದೇಶಕರಾದ ಡಾ.ರಜನಿ ಎ ಪೈ ಅವರು ಉದ್ಘಾಟಿಸಿದರು, ದಿನಾಂಕ 04/09/2023 ರಿಂದ ಪ್ರತಿದಿನ ವಿವಿಧ ಕಾರ್ಯಕ್ರಮಗಳನ್ನು ಮನ: ಶಾಸ್ತ್ರ ವಿಭಾಗದಿಂದ ಹಮ್ಮಿಕೊಳ್ಳಲಾಗಿತ್ತು.

ಅರಹತೊಳಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಆಪ್ತ ಸಮಾಲೋಚನಾ ಕಾರ್ಯಕ್ರಮ, ಶಿವಮೊಗ್ಗದ ಮೇರಿ ಇಮ್ಯಾಕುಲೇಟ್ ಪ್ರೌಢಶಾಲೆಯಲ್ಲಿ ಆಪ್ತ ಸಮಾಲೋಚನಾ ಕಾರ್ಯಕ್ರಮ ಹಾಗು ಪೋಸ್ಟರ್ ಮೇಕಿಂಗ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಶಿವಮೊಗ್ಗದ ಮೆಟ್ರಿಕ್ ನಂತರದ ಸಮಾಜ ಕಲ್ಯಾಣ ವಿದ್ಯಾರ್ಥಿನಿ ನಿಲಯದಲ್ಲಿ ಮಾನಸಿಕ ಆರೋಗ್ಯ ಕುರಿತು ವಿಶೇಷ ಉಪನ್ಯಾಸ ನಡೆಸಲಾಯಿತು. ಇದಲ್ಲದೆ ಮನೋವಿಜ್ಞಾನದ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಕ್ಲಿನಿಕಲ್ ಸೈಕಾಲಜಿ ವಿದ್ಯಾರ್ಥಿಗಳು ಮಾನಸಿಕ ಪ್ರಥಮ ಚಿಕಿತ್ಸೆ ತರಬೇತಿಯನ್ನು ಪಡೆದರು.

ಇದಲ್ಲದೆ ಮಾನಸ ನರ್ಸಿಂಗ್ ಹೋಂ ನಲ್ಲಿ ಒತ್ತಡ ಹಾಗು ಖಿನ್ನತೆಯ ಉಚಿತ ತಪಾಸಣೆಯನ್ನು ಕ್ಲಿನಿಕಲ್ ಸೈಕಾಲಜಿ ವಿಭಾಗದಿಂದ ಏರ್ಪಡಿಸಲಾಯಿತು. ದಿನಾಂಕ 12/09/2023ರಂದು ವಿಶ್ವ ಆತ್ಮಹತ್ಯೆ ತಡೆಯ ದಿನದ ಪ್ರಯುಕ್ತ ಮಾನಸ ಟ್ರಸ್ಟ್ ಹಾಗು ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆಯು ಹಮ್ಮಿಕೊಂಡ ಎಲ್ಲಾ ಕಾರ್ಯಕ್ರಮಗಳ ಸಮಾರೋಪವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಬೆಳಗ್ಗೆ 10:30ಗಂಟೆಗೆ ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ನಡೆಸಲಾಗುವುದು.

ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಸಿ.ಎನ್.ಚಂದನ್ ರವರು ಸಮಾರೋಪ ನುಡಿಗಳನ್ನಾಡಲಿರುವರು.

Kateel Ashok Pai Memorial Institute ಆತ್ಮಹತ್ಯೆ ಇಂದು ವಿಶ್ವಾದ್ಯಂತ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಈ ದಿನ ಮಾನಸ ಸಂಸ್ಥೆ ಹಾಗು ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆಯ ಮನೋವಿಜ್ಞಾನ ಹಾಗು ಕ್ಲಿನಿಕಲ್ ಸೈಕಾಲಜಿ ವಿಭಾಗದಿಂದ ನಡೆಸಿದ ಜಾತಾದಲ್ಲಿ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿ ಸಾರ್ವಜನಿಕರ ಗಮನವನ್ನು ಸೆಳೆದರು. ಮಾನಸ ನರ್ಸಿಂಗ್ ಹೋಂನ ಆವರಣದಲ್ಲಿ ಪ್ರಾರಂಭವಾದ ಈ ಅರಿವಿನ ನಡಿಗೆ ಗೋಪಿ ಸರ್ಕಲ್, ಬಿ.ಹೆಚ್. ರಸ್ತೆ, ಹಾಗು ಬಸ್ ನಿಲ್ದಾಣದ ಮೂಲಕ ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆ ದುರ್ಗಿಗುಡಿಯಲ್ಲಿ ಮುಕ್ತಾಯವಾಯಿತು.

ವಿದ್ಯಾರ್ಥಿಗಳು ಈ ವರ್ಷದ ಘೋಷವಾಕ್ಯ ‘ಕಾರ್ಯೋನ್ಮುಖರಾಗುವ ಮೂಲಕ ಭರವಸೆಯನ್ನು ಮೂಡಿಸುವ’ ಎಂಬ ಅರಿವನ್ನು ಘೋಷಣೆ ಹಾಗು ಫಲಕಗಳ ಮೂಲಕ ತಿಳಿಸಿಕೊಟ್ಟರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...