Taluk Panchayat Shivamogga ಶಿವಮೊಗ್ಗ ತಾಲ್ಲೂಕಿನ ಹಸೂಡಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 94 ಡಿ ನಡಿ ಸರ್ವೇ ಆಗಿದ್ದು, ತಹಸೀಲ್ದಾರ್ ಕಛೇರಿಯಲ್ಲಿ ಅರ್ಜಿಗಳು ಇದ್ದು, ಇದುವರೆಗೂ ಹಕ್ಕು ಪತ್ರ ನೀಡಿಲ್ಲ, ಕೆಲವು ಜನರಿಗೆ ಮಾತ್ರ ಹಕ್ಕು ನೀಡಿರುವುದು ಕಂಡು ಬಂದಿದೆ.
ಸುಮಾರು ಜನರಿಗೆ 94 ಡಿ ನಡಿ ಹಕ್ಕುಪತ್ರ ನೀಡಿಲ್ಲ. ಇದರಿಂದ ಗ್ರಾಮಸ್ಥರಿಗೆ ತುಂಬಾ ತೊಂದರೆ ಆಗಿದೆ. ಆದ್ದರಿಂದ ತಾವುಗಳ ದಯಮಾಡಿ ಶಿವಮೊಗ್ಗ ತಾಲ್ಲೂಕು ಗ್ರಾಮಾಂತರ ಪ್ರದೇಶದ ಗ್ರಾಮ ಪಂಚಾಯಿತಿಯಲ್ಲಿ 94 ಡಿ.ನಡಿ ಸರ್ವೇ ಆಗಿ ಬಂದ 94 ಡಿ ಅರ್ಜಿಗಳನ್ನು ಶೀಗ್ರ ವಿಲೇವಾರಿ ಮಾಡಿ ಹಕ್ಕು ಪತ್ರ ಕೊಡಿಸಿಕೊಡಬೇಕಾಗಿ ಗ್ರಾಮಸ್ಥರು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
Taluk Panchayat Shivamogga ಶಿವಮೊಗ್ಗ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆ ಜೆ.ಜೆ.ಎಂ.ನಡಿ ಕೇವಲ ಮೀಟರ್ ಬುರಡೆ ಹಾಕಿ ನಲ್ಲಿ ಸಂಪರ್ಕ ಹಾಕಿಲ್ಲ, ಕೆಲವು ಕಡೆ ಪೈಪ್ ಲೈನ್ ಮಾಡಿಲ್ಲ. ಇದರಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿನ ತೊಂದರೆ ಆಗುತ್ತದೆ. ಸದರಿ ಯೋಜನೆ ಸಮರ್ಪಕವಾಗಿ ಅನುಷ್ಠಾನ ಮಾಡಿಲ್ಲ, ಅಧಿಕಾರಿಗಳು ಈ ಯೋಜನೆ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡುವಂತೆ ಹಸೂಡಿ ಗ್ರಾಮಪಂಚಾಯಿತಿ.ಸದಸ್ಯರಾದ ಸಂಜಯಕುಮಾರ್ ಕೆ. ಜಿಲ್ಲಾಧಿಕಾರಿಗಳಿಗೆ ಮನವಿ ಮೂಲಕ ಒತ್ತಾಯಿಸಿದ್ದಾರೆ.