Sunday, November 29, 2026
Sunday, November 29, 2026

Rotary Shivamogga ದೇಶಸೇವೆಯ ತೃಪ್ತಿ ವರ್ಣಿಸಲಸಾಧ್ಯ-ಕರ್ನಲ್ ಗೋಪಾಲ್ ಕೌಶಿಕ್

Date:

Rotary Shivamogga ದೇಶಕ್ಕಾಗಿ ಸೇವೆ ಮಾಡುವ ಕಾರ್ಯವು ಅತ್ಯಂತ ಶೇಷ್ಠವಾಗಿದ್ದು, ದೇಶಕ್ಕಾಗಿ ಕೆಲಸ ಮಾಡುವಾಗ ಸಿಗುವ ತೃಪ್ತಿ ವರ್ಣಿಸಲು ಸಾಧ್ಯವಿಲ್ಲ ಎಂದು ನಿವೃತ್ತ ಯೋಧ ಕರ್ನಲ್ ಗೋಪಾಲ್ ಕೌಶಿಕ್ ಹೇಳಿದರು.

ಶಿವಮೊಗ್ಗ ನಗರದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಸೇನೆಯಲ್ಲಿ ಸೇವೆ ಮಾಡಲು ಅರ್ಹತೆ ಇರಬೇಕು. ದೇಶ ಪ್ರೇಮ ಇರಬೇಕು. ದೇಶ ನಮಗೆ ಎಲ್ಲವನ್ನು ಕೊಟ್ಟಿದೆ. ದೇಶದ ಋಣ ತೀರಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ದೇಶದ ವಿವಿಧ ಗಡಿಗಳಲ್ಲಿ ಸಲ್ಲಿಸಿದ ಸೇವೆ ಹಾಗೂ ಅನುಭವ ತುಂಬಾ ರೋಚಕ. ಒಂದು ಕಡೆ ದೇಶ ಪ್ರೇಮ, ಇನ್ನೊಂದು ಕಡೆ ಕುಟುಂಬದಿಂದ ದೂರ ಇರುವುದು ತುಂಬಾ ಕಷ್ಟ. ದೇಶದ ಸೇನೆಯಲ್ಲಿ ಕೆಲಸ ನಿರ್ವಹಿಸಿದ ಸಾರ್ಥಕ ಭಾವ ಅತ್ಯಂತ ವಿಶೇಷ ಎಂದರು.

ಭಾರತ ದೇಶ ಇಂದು ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಹೊಂದಿದ್ದು, ಯುವಜನರು ದೇಶದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡುವ ಸಂಕಲ್ಪ ಮಾಡಬೇಕು ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.

Rotary Shivamogga ಪ್ರೋಖಾಣ್ ಅಣುಬಾಂಬ್ ಪರೀಕ್ಷೆಯ ವಿಶೇಷ ಅನುಭವವನ್ನು ಹಂಚಿಕೊಂಡರು.ಆಪರೇಷನ್ ಶಕ್ತಿ, ಪ್ರೋಖಾನ್ 2 ಸಮಯದಲ್ಲಿ 58 ಇಂಜಿನಿಯರ್ ರೆಜಿಮೆಂಟ್ ಕಮಾಂಡ್ ಆಗಿ ನೇತೃತ್ವ ವಹಿಸಿದ್ದ ಕರ್ನಲ್ ಗೋಪಾಲ್ ಕೌಶಿಕ್ ಅವರನ್ನು ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಸನ್ಮಾನಿಸಲಾಯಿತು.

ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧರನ್ನು ಗೌರವಿಸುತ್ತಿರುವುದು ನಮ್ಮ ಪುಣ್ಯ. ದೇಶದ ಸೇನೆಯಲ್ಲಿ ಕೆಲಸ ಮಾಡಲು ಹೆಚ್ಚು ಯುವ ಜನರು ಮುಂದಾಗಬೇಕು ಎಂದು ತಿಳಿಸಿದರು.

ನಮ್ಮ ಟಿವಿ ಜಗದೀಶ್, ನಿರೂಪಕ ಜಿ.ವಿಜಯ್‌ಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಕಿಶೋರ್ ಕುಮಾರ್, ಪೃಥ್ವಿ ಗಿರಿಮಾಜಿ, ಶ್ರೀಕಾಂತ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sahachetana Natyaalaya ಮೊದಲ ಅಂತಾರಾಷ್ಟ್ರೀಯ ನೃತ್ಯಪ್ರದರ್ಶನ: ಕಲಾರಸಿಕರ ಮನಸೂರೆಗೈದ ಸಹಚೇತನ ನಾಟ್ಯಾಲಯ

ದುಬೈನಲ್ಲಿ ನಡೆದ ಗಲ್ಫ್ ರಾಷ್ಟ್ರಗಳ ಅತಿದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದಾದ 'ದುಬೈ...

ಆಹಾರ ತಯಾರಿಕೆ: ಸಂಸ್ಕರಣೆ ಮತ್ತು ವಿತರಣೆಯಲ್ಲಿ ಸೂಕ್ತ ಸುರಕ್ಷತಾ ಕ್ರಮ ಅಳವಡಿಕೆ ಕಡ್ಡಾಯ- ಡಾ.ಎಚ್.ಪಿ.ಎಸ್.ಮೈತ್ರಿ

Rotary Club Shivamogga ಸುರಕ್ಷಿತ ಆಹಾರ ಪ್ರತಿಯೊಬ್ಬ ಗ್ರಾಹಕನ ಹಕ್ಕಾಗಿದ್ದು, ಆಹಾರದಿಂದ...

D.K. Shivakumar ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ಶಾಲೆಗಳಲ್ಲೂ ಸಂವಿಧಾನ ಪಾಠ ಅಳವಡಿಕೆ- ಡಿ.ಕೆ.ಶಿವಕುಮಾರ್.

D.K. Shivakumar ಸಂವಿಧಾನ ಎನ್ನುವುದು ಕೇವಲ ಪುಸ್ತಕವಲ್ಲ, ಅದು ಪ್ರತಿಯೊಬ್ಬ ಭಾರತೀಯನ...