Friday, April 10, 2026
Friday, April 10, 2026

Uttaradi Math ಕೃಷ್ಣಜಯಂತಿ ಆಚರಿಸಿದರೆ ಸಂಸಾರದಲ್ಲಿ ಜಯ- ಶ್ರೀಸತ್ಯಾತ್ಮ ತೀರ್ಥರು

Date:

Uttaradi Math ಶ್ರೀಕೃಷ್ಣ ಅವತರಿಸಿದ್ದು ಸಜ್ಜನರ ಉದ್ಧಾರಕ್ಕಾಗಿ. ಇಂತಹ ಕೃಷ್ಣ ಜನ್ಮಾಷ್ಟಮಿ ವ್ರತ ಆಚರಿಸಿದರೆ ಅಶ್ವಮೇಧಯಾಗದ ಫಲವಿದೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.

ಹೊಳೆಹೊನ್ನೂರಿನಲ್ಲಿ ಬುಧವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.

ಸಂಸಾರದಲ್ಲಿ ನಮಗೆ ಅನೇಕ ವಿಧವಾದ ಆಂತರ ಮತ್ತು ಬಾಹಿರ ಶತೃಗಳನ್ನು ಗೆಲ್ಲುವುದಕ್ಕಾಗಿ ಶ್ರೀಕೃಷ್ಣ ಜನ್ಮಾಷ್ಟಮಿಯ ವ್ರತವನ್ನು ಭಕ್ತಿಯಿಂದ ಮಾಡಬೇಕು. ದೇವರ ಧ್ಯಾನ, ಚಿಂತನ ಮಾಡಬೇಕು. ಉಪವಾಸ ಆಚರಿಸಬೇಕು. ಆಗ ನಮಗೆ ಸಂಸಾರದಲ್ಲಿ ಜಯವಾಗುತ್ತದೆ. ಅಜ್ಞಾನದಿಂದ ಮಾಡಿದ ಪಾಪಗಳ ನಾಶವಾಗುತ್ತದೆ ಎಂದರು.

ಪ್ರವಚನ ನೀಡಿದ ಬಿದರಹಳ್ಳಿ ಶ್ರೀಕರಾಚಾರ್ಯ, ಶ್ರೀಪಾದಂಗಳವರ ಚಾತುರ್ಮಾಸ್ಯಕ್ಕೆ ಬಂದರೆ ಕಾಶೀ ಮೊದಲಾದ ಕ್ಷೇತ್ರಗಳಿಗೆ ಹೋಗಿಬಂದ ಪುಣ್ಯ ಲಭಿಸುತ್ತದೆ. ಅನೇಕ ಶಾಸ್ತç ಗ್ರಂಥಗಳ ಶ್ರವಣವಾಗುತ್ತದೆ. ಇಲ್ಲಿ ಬಂದವರು ಸದಾಕಾಲ ಭಕ್ತಿಯಿಂದ ದೇವರ ಸ್ಮರಣೆ ಮಾಡಿ ಎಂದರು.

ಯಾವಾಗಲೂ ಕೂಡ ಸಂಸಾರದಲ್ಲಿ ಮಗ್ನರಾಗಬಾರದು. ಕೇವಲ ವಿಷಯದ ಆಸಕ್ತಿಯಲ್ಲಿ ಮುಳುಗಬಾರದು. ಈ ಜನ್ಮ ಬಂದಿದ್ದು ಹೇಗೆ? ಮುಂದಿನ ಗತಿ ಏನು? ಉತ್ತಮ ಗತಿಗೆ ಯಾವ ಮಾರ್ಗ ಅನುಸರಿಸಬೇಕು. ಈ ಬಗ್ಗೆ ನಾವು ಚಿಂತನೆ ಮಾಬೇಕು. ಆಗ ಮಾತ್ರ ಸದ್ಗತಿ ಸಾಧ್ಯ ಎಂದರು.

ಪoಡಿತ ಕಲ್ಲಾಪುರ ಪವಮಾನಾಚಾರ್ಯ ಮಾತನಾಡಿ, ಕೆಲವು ನಿತ್ಯ ಕರ್ಮಗಳ ಅನುಷ್ಠಾನ ಎಲ್ಲರಿಗೂ ಕಡ್ಡಾಯ. ದೇವರ ಪೂಜೆ, ನಾಮಸ್ಮರಣೆ, ಸಂಧ್ಯಾವoದನೆ ಇವನ್ನು ಮಾಡಲೇಬೇಕು. ಹಾಗೆಯೇ ಶಾಸ ಗ್ರಂಥಗಳ ಅಧ್ಯಯನ ಮಾಡಬೇಕು, ಕೊನೇ ಪಕ್ಷ ತಿಳಿದವರಿಂದ ಕೇಳಬೇಕು ಎಂದರು.

Uttaradi Math ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ವಾದಿರಾಜ ಅಗ್ನಿಹೋತ್ರಿ, ಮಧುಸೂಧನ ನಾಡಿಗ್, ಸಿ.ಪಿ. ವಾದಿರಾಜ, ಗುರುರಾಜ ಕಟ್ಟಿ, ರಾಮಧ್ಯಾನಿ ಅನಿಲ್ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

2nd PUC Exam Result 2026 ಗುರುಪುರ ಬಿಜಿಎಸ್ ಸ್ವತಂತ್ರ ಪಪೂ. ಕಾಲೇಜಿಗೆ ಶೇ.100 ಫಲಿತಾಂಶ ಸಾಧನೆ.

2nd PUC Exam Result 2026 ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಶಿಕ್ಷಣ...

DVS Independent College ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ.ಡಿವಿಎಸ್ ಪದವಿ ಪೂರ್ವ ಕಾಲೇಜಿನ ಗಮನಾರ್ಹ ಸಾಧನೆ.

DVS Independent College ದ್ವಿತೀಯ ಪಿಯು ಪರೀಕ್ಷೆಯಲ್ಲಿ ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್...