Saturday, November 23, 2024
Saturday, November 23, 2024

MLA Tammayyya ಸಹಕಾರ ಸಂಘಗಳಿಂದ ಸದುದ್ದೇಶಗಳಿಗೆ ಸಾಲ ಪಡೆಯಿರಿ- ಶಾಸಕ ಎಚ್.ಡಿ.ತಮ್ಮಯ್ಯ

Date:

MLA Tammayyya ಸಹಕಾರ ಸಂಘಗಳಲ್ಲಿ ಸುಖಸುಮ್ಮನೆ ಸಾಲ ಪಡೆಯುವ ಬದಲು, ಭವಿಷ್ಯ ವನ್ನು ಉಜ್ವಲಗೊಳಿಸುವ ಸುದ್ದೇಶವನ್ನಿಟ್ಟುಕೊಂಡು ಸಾಲ ಪಡೆದು ನಿಗಧಿತ ಸಮಯದಲ್ಲಿ ಹಿಂತಿರುಗಿಸಿದರೆ ಸಂ ಘವು ಸದೃಢ ಹಾಗೂ ಆರ್ಥಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ಚಿಕ್ಕಮಗಳೂರು ನಗರದ ರಂಗಣ್ಣ ಕಲ್ಯಾಣ ಮಂಟಪದಲ್ಲಿ ನೂತನ ಕಟ್ಟಡ ಕಾರ್ಮಿಕರ ಸಹಕಾರ ಸಂಘದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

1905 ರಲ್ಲಿ ಗದಗ ಜಿಲ್ಲೆಯಲ್ಲಿ ಸಿದ್ದನಗೌಡ ಎಂಬುವವರು ಸಹಕಾರ ಸಂಘ ಸ್ಥಾಪಿಸಿದ ಪರಿಣಾಮ ಇಂದು ರಾಜ್ಯಾದ್ಯಂತ ಹಲವಾರು ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು. ಇದರಿಂದ ಸಂಘದ ಷೇರುದಾರರು ಹಾಗೂ ಸದಸ್ಯರುಗಳಿಗೆ ಆರ್ಥಿಕ ಸಂಕಷ್ಟದ ಸಮಯದಲ್ಲಿ ಬಹಳಷ್ಟು ಉಪಯೋಗವಾಗಿದೆ ಎಂದರು.

ಪ್ರಸ್ತುತ ಬಡತನ ಹಾದಿಯಲ್ಲಿ ಕೆಲವು ಕುಟುಂಬಗಳು ಮಕ್ಕಳ ವಿದ್ಯಾಭ್ಯಾಸ ಅಥವಾ ಆರೋಗ್ಯ ಚಿಕಿತ್ಸೆಗೆ ಹಣಕಾಸು ಹೊಂದಿಸಿಕೊಳ್ಳಲು ತೀವ್ರ ಸಮಸ್ಯೆಯಾಗಿದೆ. ಇದಲ್ಲದೇ ಕಾಸಿನಬಡ್ಡಿಯಿಂದ ಅತಿಹೆಚ್ಚು ದರದಲ್ಲಿ ಬಡ್ಡಿ ಪಡೆದುಕೊಂಡು ವರ್ಷಗಟ್ಟಲೇ ಕೇವಲ ಬಡ್ಡಿಯನ್ನೇ ಕಟ್ಟಲಾಗುತ್ತಿದೆ. ಇದರಿಂದ ಮುಕ್ತರಾಗಿ ಸಹಕಾರ ಸಂಘಗಳತ್ತ ಮುಖಮಾಡಿದರೆ ನಿಯಮಿತ ದರದಲ್ಲಿ ಸಾಲ ಪಡೆದು ಸುಖಜೀವನ ನಡೆಸಬಹುದು ಎಂದರು.

MLA Tammayyya ಹಣಕಾಸಿನ ಅವಶ್ಯಕತೆಯಿರುವವರು ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಅನೇಕ ದಾಖಲೆಗಳನ್ನು ಒದಗಿಸಿದರೂ ಸೂಕ್ತ ಸಮಯದಲ್ಲಿ ಸಾಲ ದೊರೆಯದು. ಆದರೆ ಸಹಕಾರ ಸಂಘಗಳಲ್ಲಿ ಒಮ್ಮೆ ಸಾಲ ಪಡೆದುಕೊಂ ಡು ಪ್ರಾಮಾಣ ಕವಾಗಿ ಹಿಂತಿರುಗಿಸಿದರೆ ಮುಂದಿನ ಯಾವುದೇ ಸಂಕಷ್ಟಗಳಲ್ಲಿ ಸಂಘಗಳು ಸ್ಪಂದಿಸುವ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಕಾರ್ಮಿಕ ಸಮುದಾಯವು ಬಹಳಷ್ಟು ಶ್ರಮಪಡುವ ಸಮುದಾಯವಾಗಿದೆ. ಕೆಲವರಿಗೆ ನಿವೇಶನದ ಕೊರತೆ ಸಂಬAಧ ಹಲವಾರು ವಿಷಯಗಳು ಗಮನಾರ್ಹವಾಗಿದೆ. ಇದನ್ನು ಬಗೆಹರಿಸಲು ಸಲುವಾಗಿ ನಗರ ಅಥವಾ ಹೊರವಲಯದಲ್ಲಿ ನಿವೇಶನರಹಿತರಿಗೆ ನಿವೇಶನ ಒದಗಿಸುವ ಕೊಡುವ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಹಂತ ಹಂತವಾಗಿ ನಿವೇಶನ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಜಿ.ರಘು ಮಾತನಾಡಿ ಎಲ್ಲಾ ಇಲಾಖೆಗಳ ಕಟ್ಟಡ ಕೆಲಸವನ್ನು ನಿರ್ವಹಿಸಿರುವ ಕಟ್ಟಡ ಕಾರ್ಮಿಕರಿಗೆ ವಾಸಿಸಲು ಸೂರಿನ ಕೊರತೆಯಿದೆ. ಕಾರ್ಮಿಕ ಇಲಾಖೆಯಲ್ಲಿ ಸಾವಿರಾರು ಕೋಟಿ ಹಣವಿದ್ದರೂ ಸೂರು ಸಮಸ್ಯೆಯಿರುವವರಿಗೆ ಒದಗಿಸುತ್ತಿಲ್ಲ. ಈ ಸಂಬಂಧ ಶಾಸಕರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಿ ಕಾರ್ಮಿಕರಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಟ್ಟಡ ಕಾರ್ಮಿರ ಸಹಕಾರ ಸಂಘದ ಅಧ್ಯಕ್ಷ ಸಿ.ಸಿ.ಮಂಜೇ ಗೌಡ ಸರಳ ಹಾಗೂ ಸುಲಭವಾಗಿ ದೊರೆಯುವಂತಹ ಸಹಕಾರ ಸಂಘದ ಸಾಲಗಳನ್ನು ಷೇರುದಾರರು ಪಡೆದು ಕೊಳ್ಳಬೇಕು. ಬಳಿಕ ಅದೇ ರೀತಿ ಪ್ರಾಮಾಣ ಕವಾಗಿ ಹಿಂತಿರುಗಿಸಿದರೆ ಇತರರಿಗೂ ಸಾಲ ವಿತರಿಸಿ ಸಂಘದ ಬೆಳವಣ ಗೆಗೆ ಪೂರಕವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿಪಿಐ ಮುಖಂಡ ಹೆಚ್.ಎಂ.ರೇಣುಕಾರಾಧ್ಯ, ಸಹಕಾರ ಸಂಘದ ಉಪಾಧ್ಯಕ್ಷ ಸಿ.ವಸಂತ್‌ಕುಮಾರ್, ನಿರ್ದೇಶಕರುಗಳಾದ ಎ.ಶ್ರೀಧರ್, ಎ.ಸಲೀಂ, ಚಂದ್ರಚಾರ್, ಶ್ರೀನಿವಾಸ್, ಆರ್.ಮಂಜಯ್ಯ, ಟಿ.ಎಸ್.ಸಂಜೀವ, ಶ್ರೀಮತಿ ಧಯಾಕ್ಷಿ, ಶ್ರೀಮತಿ ಸುಶೀಲಮ್ಮ, ಜಿ.ಗೌರಮ್ಮ, ಮುಖಂಡ ಜಯಕುಮಾರ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...