Wednesday, April 23, 2025
Wednesday, April 23, 2025

Uttaradi Mutt ಉಪಕಾರ ಮಾಡಲು ಬರುವವರನ್ನ ಎಚ್ಚರದಿಂದ ಗಮನಿಸಬೇಕು-ಶ್ರೀ ಸತ್ಯಾತ್ಮ ತೀರ್ಥರು

Date:

Uttaradi Mutt ಅಪಕಾರ ಮಾಡುವುದಕ್ಕೆ ಬರುವವರು ಉಪಕಾರ ಮಾಡುವವರಂತೆ ಸೋಗು ಹಾಕಿ ಬರುತ್ತಾರೆ. ಆಮೇಲೆ ಅಪಕಾರ ಮಾಡುತ್ತಾರೆ. ಈ ಬಗ್ಗೆ ಎಚ್ಚರಿಕೆ ಇರಬೇಕು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು.

ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆಯುತ್ತಿರುವ ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದಂಗಳವರ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡುತ್ತಿರುವ ಸಂದರ್ಭದಲ್ಲಿ ಶ್ರೀಗಳು ಈ ಸಂಬಂಧ ವಿಶೇಷ ಸಂದೇಶ ನೀಡಿದರು.

ನಮ್ಮ ಭಾರತ ದೇಶಕ್ಕೆ ಆಕ್ರಮಣಕಾರಿಗಳಾಗಿ ಬರುವವರು ಎಲ್ಲವನ್ನೂ ಕೊಡುತ್ತೇವೆ ಅಂದುಕೊಡೇ ಬಂದರು. ಬೇರೆ ಬೇರೆ ರೀತಿಯಿಂದ ಉಪಕಾರ ಮಾಡುವುದಾಗಿ ಹೇಳಿ ಬಂದಿದ್ದಾರೆ. ಆನಂತರ ನಮ್ಮ ಸಂಸ್ಕೃತಿಯನ್ನು, ಧರ್ಮವನ್ನು ನಾಶ ಮಾಡುವ ಪ್ರಯತ್ನ ಮಾಡಿದ್ದಾರೆ. ನಿಜವಾಗಿ ಉಪಕಾರ ಮಾಡುವುದಕ್ಕೆ ಬಂದಿದ್ದಾರೋ ಅಥವಾ ಬೇರಾವುದೋ ಹಿನ್ನೆಲೆಯಲ್ಲಿ ಉಪಕಾರ ಮಾಡುತ್ತಿದ್ದಾರೆಯೋ ಎಂಬ ಬಗ್ಗೆ ಸೂಕ್ಷ್ಮವಾಗಿ ಗಮನಿಸಬೇಕು ಎಂದರು.

Uttaradi Mutt ಕೃಷ್ಣಾವತಾರದಿಂದ ಕೇವಲ ದ್ವಾಪರ ಯುಗದ ಜನರಿಗೆ ಮಾತ್ರ ಉಪಕಾರ ಆಯಿತು ಅಂದುಕೊಳ್ಳಬೇಡಿ. ದೇವರ ಅವತಾರ ಆಗದಿದ್ದರೆ ನಾವು ದುಃಖ ಪಡಬೇಕಿತ್ತು. ಇದೇ ಸಂದರ್ಭದಲ್ಲಿ ದೇವರ ಸರ್ವೋತ್ತಮತ್ವವನ್ನು ಮತ್ತು ಮಹಿಮೆಯನ್ನು ತಿಳಿದುಕೊಳ್ಳಬೇಕು ಎಂದರು.

ಪಂಡಿತ ರಾಜಕಿರಣಾಚಾರ್ಯ ಭೂಪಾಲ ಹರಿಭಕ್ತ ಪ್ರವಚನ ನೀಡಿದರು. ಬೆಂಗಳೂರಿನ ಶ್ರೀ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಶ್ರೀಮಠದ ದಿವಾನರಾದ ಶಶಿ ಆಚಾರ್ಯ, ಸಿಇಓ ವಿದ್ಯಾಚಾರ್ಯ ಗುತ್ತಲ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಜಿಲ್ಲಾ ಮಠಾ ಕಾರಿ ಬಾಳಗಾರು ಜಯತೀರ್ಥಾಚಾರ್ಯ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ

Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ...