Manvantara Mahila Mandali Shivamogga ಮನ್ವಂತರ ಮಹಿಳಾ ಮಂಡಳದ ವತಿಯಿಂದ 77 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
77ನೇ ಸ್ವಾತಂತ್ರ್ಯ ಸಂಭ್ರಮದಲ್ಲಿರುವ ನಮಗೆ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನಾಚರಣೆಯ ಮಹತ್ವದ ಅರಿವಿರಬೇಕು. ಮಾತೆಯರು, ಮಹಿಳೆಯರು,ಸಾರ್ವಜನಿಕ ಬಂದುಬಾಂಧವರು ಹಾಗೂ ವಿದ್ಯಾರ್ಥಿಗಳು, ಯುವಕ/ಯುವತಿಯರು ಈ ದಿನದ ವಿಶೇಷತೆಯನ್ನು ಸ್ಮರಿಸಿ, ಸಮಾಜಕ್ಕೆ ಪೂರಕವೂ, ದೃಢತೆ ತುಂಬುವ ವಿಚಾರಗಳ ಮಂಥನ ಮಾಡಬೇಕು.. ಗಡಿ ರಕ್ಷಣೆಯ ಜೊತೆಜೊತೆಗೆ ಸಮಾಜದ ರಕ್ಷಣೆಯ ಜವಾಬ್ದಾರಿ ನನ್ನದು ಮಾತ್ರವಲ್ಲದೆ, ನನ್ನ ಸಮಾಜದ ಸುತ್ತಲು ನಡೆಯುವ ಸೂಕ್ಷ್ಮ ಚಲನವಲನಗಳತ್ತವೂ ನಮ್ಮ ಚಿತ್ತವಿಟ್ಟು.ಈ ದೇಶದ ಸಂತುಲನ, ಸದೃಢತೆ ಕಾಪಾಡುವುದು ನನ್ನ ಕರ್ತವ್ಯ ಎಂಬ ಸಂಕಲ್ಪ ಮಾಡಬೇಕು. 77 ನೇ ಸ್ವಾತಂತ್ರ್ಯದ ಪಥದಲ್ಲಿರುವ ಈ ಭಾರತ ಅನೇಕ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಅಭಿವೃದ್ಧಿ ಪಥದತ್ತ ನಡೆದಿರುವ ನಮ್ಮೀ ದೇಶ ಶ್ರೇಷ್ಠ ಭಾರತ ಎಂಬ ಹೆಗ್ಗಳಿಕೆಯೊಂದಿಗೆ ಹೆಸರು ಮಾಡಿದೆ. ಇದು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಹೆಮ್ಮೆ ಪಡುವ ವಿಷಯ ಎಂದು ಮನ್ವಂತರದ ಅಧ್ಯಕ್ಷರಾದ ಶ್ರೀರಂಜಿನಿ ದತ್ತಾತ್ತಿಯವರು ಧ್ವಜಾರೋಹಣ ನೆರವೇರಿಸಿ ಹೇಳಿದರು.
ಹಿರಿಯರಾದ ಸಾವಿತ್ರಕ್ಕ ಶಾಲಾ/ಕಾಲೇಜಿನ ಅವಧಿಯ ನಂತರವೂ ಸ್ವಾತಂತ್ರ ಸಂಭ್ರಮದಲ್ಲಿ ಸ್ವತಃ ಪಾಲ್ಗೊಳ್ಳುವ ಅವಕಾಶ ನೀಡುವ ಸಂಘಟನೆಗಳ ಮಹತ್ವ ತಿಳಿಸಿದರು.
ಮನ್ವಂತರದ ಮಹಿಳೆಯರು ರಾಷ್ಟ್ರಗೀತೆ, ಧ್ವಜ ವಂದನೆ ಮಾಡಿದರು. ನಂತರ ಕೀರ್ತನಾರಿಂದ ಏ ಮೇರೆ ವತನ್ ಕೆ ಲೋಗೋ ಹಾಡಿನ ಮೂಲಕ ಸಮಸ್ತ ಯೋಧರಿಗೆ ನಮನ ಅರ್ಪಿಸಿ, ನಂತರ ಸದಸ್ಯರೆಲ್ಲರೂ ಸೇರಿ ದೇವಿ ಭುವನ ಮನಮೋಹಿನಿ, ವಂದೇ ಮಾತರಂ ಗೀತೆಗಳನ್ನು ಹಾಡಿದರು..
Manvantara Mahila Mandali Shivamogga ಕಾರ್ಯದರ್ಶಿ ವಿಜಯಾಶಿವು, ಖಜಾಂಚಿ ಉಷಾ, ಸದಸ್ಯರಾದ ನೇತ್ರಾ, ಅಖಿಲ, ಸುಜಾತ, ಸ್ವಪ್ನ, ಕುಸುಮ, ಗೀತ, ರತ್ನ,ವಿಜಯಕ್ಕ , ಶ್ವೇತ,ಸಂಧ್ಯಾ ಅರಸ್, ಸಧ್ಯಾವಿನಯ ಮೊದಲಾದವರು ಉಪಸ್ಥಿತರಿದ್ದರು.