Saturday, April 18, 2026
Saturday, April 18, 2026

Independence Day ಏಕತೆಯೇ ಶಕ್ತಿ: ವೈದ್ಯರೆಲ್ಲರೂ ಆರೋಗ್ಯಕರ ಸಮಾಜ‌ ನಿರ್ಮಿಸೋಣ- ಡಾ.ಎಂ.ಎಸ್.ಅರುಣ್

Date:

Independence Day ನಾವು ನಮ್ಮ ಇಂದಿನ ದಿನವನ್ನು ಉತ್ತಮ ನಾಳೆಗಾಗಿ ಬಳಸಿಕೊಳ್ಳಬೇಕು. ಏಕತೆಯೇ ಶಕ್ತಿ. ಹಾಗಾಗಿ ವೈದ್ಯ ಸಮೂಹ ಒಂದಾಗಿ ಒಂದು ಆರೋಗ್ಯಕರ ಸಮಾಜ ನಿರ್ಮಾಣ ಮಾಡುವತ್ತ ನಮ್ಮ ಸಂಘದ ಚಟುವಟಿಕೆಗಳನ್ನು ಕಾರ್ಯರೂಪಕ್ಕೆ ತರುವತ್ತ ಇಂದು ಪ್ರಯತ್ನ ಸಾಗಿದೆ . ನಮ್ಮ ದೇಶವನ್ನು ಶಕ್ತಿಯುತ ಮತ್ತು ವಿಶ್ವದಲ್ಲಿ ಗೌರವಾನ್ವಿತವಾಗಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡಬೇಕಾಗಿದೆ. ನಾವು ಒಂದಾಗೋಣ, ಕಷ್ಟಪಟ್ಟು ಕೆಲಸ ಮಾಡೋಣ ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ . ಅರುಣ್ .ಎಂ .ಎಸ್ ಅವರು ಹೇಳಿದರು .

77ನೇ ಸ್ವಾತಂತ್ರ ದಿನಾಚರಣೆಯನ್ನು ಭಾರತೀಯ ವೈದ್ಯಕೀಯ ಸಂಘ ಅತ್ಯಂತ ಸಡಗರದಿಂದ ಆಚರಿಸಲಾಯಿತು .

100 ಕ್ಕೂ ಹೆಚ್ಚು ಸದಸ್ಯರ ಭಾಗವಹಿಸುವಿಕೆಯೊಂದಿಗೆ ಹಬ್ಬದ ವಾತಾವರಣದೊಂದಿಗೆ ಸಮಾರಂಭ ನಡೆಯಿತು .
ಅಧ್ಯಕ್ಷ ಡಾ.ಅರುಣ್ ಎಂ ಎಸ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ರತಿಯೊಬ್ಬರು ತಮ್ಮ ಕೈಲಾದಷ್ಟು ಕೆಲಸ ಮಾಡಿ ಸಮಾಜದ ಉನ್ನತಿಗೆ ಹೇಗೆ ಸಹಾಯ ಮಾಡಬಹುದು ಎಂಬ ಸಂದೇಶ ನೀಡಿದರು.

14.8.2023 ನೇ ತಾರೀಖು ಮುಕ್ತಾಯವಾದ ಒಂದು ತಿಂಗಳ ಅವಧಿಯ ಅಧಿಕಸ್ಯ ಅಧಿಕಫಲಂ ಮೆಗಾ ಆರೋಗ್ಯ ಜಾಗೃತಿ ಶಿಬಿರದಲ್ಲಿ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಭಾಗವಹಿಸಿದ ವೈದ್ಯರಿಗೆ ಐಎಂಎ ಪಿನ್‌ಗಳನ್ನು ವಿತರಿಸಲಾಯಿತು. ದೂರದರ್ಶನದ ಹಿಂದಿನ ಕಾಲದ ಮಿಲೇ ಸುರ್ ಮೇರಾ ತುಮ್ಹಾರಾ ಗೀತೆಯನ್ನು ಸದಸ್ಯರಾದ ಡಾ.ದಯಾನಂದ್, ಡಾ.ರೇಖಾ, ಡಾ.ಚೇತನ್, ಡಾ.ರಾಮಚಂದ್ರ ಬಾದಾಮಿ, ಡಾ.ರಕ್ಷಾ ರಾವ್ ಮತ್ತು ಡಾ.ಝೀನತ್ ಅವರು ಕರೋಕೆಯೊಂದಿಗೆ ಪ್ರಸ್ತುತಪಡಿಸಿದರು.

ಉಪಹಾರದೊಂದಿಗೆ ಅಧಿವೇಶನ ಮುಕ್ತಾಯವಾಯಿತು.

Independence Day ಕಾರ್ಯದರ್ಶಿ ಡಾ . ರಕ್ಷಾ ರಾವ್ ಕಾರ್ಯಕ್ರಮ ನಿರೂಪಿಸಿದರು . ಖಜಾಂಚಿ ಡಾ. ಶಶಿಧರ್ ವಂದನಾರ್ಪಣೆ ನಡೆಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಏಪ್ರಿಲ್ 19. ಶಿವಮೊಗ್ಗ ದುರ್ಗಿಗುಡಿ‌ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ...

Sri Shankaracharya Jayanti ಏ.21ರಂದು ಶ್ರೀ ಶಂಕರಾಚಾರ್ಯ ಜಯಂತಿ

Sri Shankaracharya Jayanti ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ...

Bharat scout and Guides ವಿಪತ್ತು ಸಂದರ್ಭಗಳಲ್ಲಿ ನೆರವಾಗುವ ಯುವ ಆಪದ್ ಮಿತ್ರ

Bharat scout and Guides ವಿಪತ್ತು ಸಂದರ್ಭಗಳಲ್ಲಿ ಪ್ರಾಣ ಮತ್ತು ಆಸ್ತಿ...