Friday, April 25, 2025
Friday, April 25, 2025

KSRTC Bus ಹಿರೇಮಗಳೂರಿನಿಂದ ಪವಿತ್ರವನದವರೆಗೆ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ

Date:

KSRTC Bus ಚಿಕ್ಕಮಗಳೂರಿನ, ಹಿರೇಮಗಳೂರು ಸುತ್ತಮುತಲಿನ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿ ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮದಿಂದ ಪವಿತ್ರನದವರೆಗೂ ತೆರಳಲು ನಗರ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸ ಲಾಗಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ತಾಲ್ಲೂಕಿನ ಹಿರೇಮಗಳೂರು ಗ್ರಾಮದ ಸಮೀಪ ಅಂಬೇಡ್ಕರ್ ವೃತ್ತದಿಂದ ನಗರ ಸಾರಿಗೆ ಬಸ್‌ಗೆ ಚಾಲನೆ ನೀಡಿ ಮಾತನಾಡಿದ ಅವರು ಚಿಕ್ಕಕುರುಬರಹಳ್ಳಿ, ಬೈಪಾಸ್, ನರಿಗುಡ್ಡನಹಳ್ಳಿ ಹಾಗೂ ದೊಡ್ಡಕುರುಬರಹಳ್ಳಿ ಮಾರ್ಗವಾಗಿ ಪವಿತ್ರವನದವರೆಗೂ ಬಸ್ ವ್ಯವಸ್ಥೆ ಇಲ್ಲದಿರುವ ಬಗ್ಗೆ ಮನವಿ ಬಂದoತಹ ಸಂದರ್ಭದಲ್ಲಿ ಸಂಬoಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ನಗರ ಸಾರಿಗೆ ಬಸ್ ವ್ಯವಸ್ಥೆಯು ಗ್ರಾಮಸ್ಥರಿಗೆ ಸಮಯಾನುಸಾರ ಬೆಳಿಗ್ಗೆ ಮತ್ತು ಸಂಜೆ ಎರಡು ಕಾಲದಲ್ಲಿ ಸಂಚರಿಸಲಿದೆ. ಎಐಟಿ ಕಾಲೇಜು, ಜಿ.ಪಂ. ಹಾಗೂ ಪವಿತ್ರವನ ಮಾರ್ಗವಾಗಿ ಸಂಚರಿಸುವುದರಿoದ ಗ್ರಾಮಸ್ಥರು ಬಸ್ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಕೆಪಿಸಿಸಿ ಸಂಯೋಜಕ ಹಿರೇಮಗಳೂರು ರಾಮಚಂದ್ರ ಮಾತನಾಡಿ ಹಿರೇಮಗಳೂರು ಸೇರಿದಂತೆ ವಿವಿಧ ಗ್ರಾಮಗಳ ನಿವಾಸಿಗಳ ಮನವಿ ಮೇರೆಗೆ ಶಾಸಕರು ಬಸ್ ವ್ಯವಸ್ಥೆ ಕಲ್ಪಿಸಿರುವುದು ಖುಷಿಯ ವಿಚಾರ. ಈ ಮಾರ್ಗ ದಿಂದ ಸಂಚರಿಸುವ ಮಹಿಳೆಯರು, ವೃದ್ದರು ಹಾಗೂ ಶಾಲಾ ಮಕ್ಕಳಿಗೆ ಇದರಿಂದ ಬಹಳಷ್ಟು ಅನುಕೂಲವಾಗ ಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಇಂತಹ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಸ್ನೇಹಿ ಆಡಳಿತ ನೀಡುತ್ತಿರುವ ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಮುಂದಿನ ಮೂರು ಅವಧಿಯಲ್ಲಿ ಹ್ಯಾಟ್ರಿಕ್ ಶಾಸಕರಾಗುವ ಮೂಲಕ ಜನಸಾಮಾನ್ಯರ ನೋವು ಗಳಿಗೆ ಸ್ಪಂದಿಸುವ ರೀತಿಯಲ್ಲಿ ಕೆಲಸ ಮಾಡುವಂತಾಗಲಿ ಎಂದು ಆಶಿಸಿದರು.

KSRTC Bus ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಮಂಗಳಾ ತಮ್ಮಯ್ಯ, ಪಕ್ಷದ ಮುಖಂ ಡರುಗಳಾದ ಓಂಕಾರಮೂರ್ತಿ, ಶಿವಾಜಿ, ಹೆಚ್.ಎಸ್.ಜಗದೀಶ್, ಸಂತೋಷ್ ಲಕ್ಯಾ, ಮೋಹನ್‌ಕುಮಾರ್, ಯೋಗೀಶ್, ಸುರೇಶ್, ರಘು, ಚೇತನ್, ಈಶ್ವರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...