Wednesday, October 2, 2024
Wednesday, October 2, 2024

National Education Policy ಎನ್ಇಪಿ ತ್ರೈವಾರ್ಷಿಕೋತ್ಸವ:ದೇಶಾದ್ಯಂತ ಜಾಗೃತಿ ಕಾರ್ಯಕ್ರಮ

Date:

National Education Policy ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅನುಷ್ಟಾನದ 3ನೇ ವಾರ್ಷಿಕೋತ್ಸವದ ಅಂಗವಾಗಿ ಜುಲೈ 29 ಮತ್ತು 30 ರಂದು ನವದೆಹಲಿ ಹಾಗೂ ದೇಶಾದ್ಯಂತ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ರಾಷ್ಟ್ರೀಯ ಶಿಕ್ಷಣ ನೀತಿ 2020 ರ 3ನೇ ವಾರ್ಷಿಕೋತ್ಸವದೊಂದಿಗೆ 2ನೇ ಅಖಿಲ ಭಾರತೀಯ ಶಿಕ್ಷಾ ಸಮಾಗಮವನ್ನು ಜುಲೈ 29 ರಂದು ಐಟಿಪಿಓ, ಪ್ರಗತಿ ಮೈದಾನ, ನವದೆಹಲಿ ಇಲ್ಲಿ ಉದ್ಘಾಟಿಸಲಿದ್ದಾರೆ ಎಂದು ಶಿವಮೊಗ್ಗ ಕೇಂದ್ರೀಯ ವಿದ್ಯಾಲಯದ ಪ್ರಭಾರಿ ಪ್ರಾಂಶುಪಾಲರಾದ ಯು.ಪಿ.ಬಿನೋಯ್ ತಿಳಿಸಿದರು.

ಇಂದು ಕೇಂದ್ರೀಯ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿ, ಎರಡು ದಿನಗಳ ಈ ಕಾರ್ಯಕ್ರಮವನ್ನು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಹಾಗೂ ಕೌಶಲ್ಯ ಅಭಿವೃದ್ದಿ ಮತ್ತು ಉದ್ಯಮಶೀಲತೆ ಸಚಿವಾಲಯವು ಆಯೋಜಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅನುಷ್ಟಾನದ 3 ನೇ ವಾರ್ಷಿಕೋತ್ಸವವನ್ನು ಈ ಶಿಕ್ಷಣ ನೀತಿಯ ಅನುಷ್ಟಾನದ ಉಪಕ್ರಮಗಳು, ಉತ್ತಮ ಅಭ್ಯಾಸಗಳು ಮತು ಸಾಧನೆಗಳ ಕುರಿತು ವಿವಿಧ ಸಂವೇದನಾಶೀಲ ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳನ್ನು ಪ್ರಚುರಪಡಿಸುವ ಹಾಗೂ ಈ ನೀತಿಯ ಪರಿಣಾಮಕಾರಿ ಅನುಷ್ಟಾನದ ಪ್ರಾಮುಖ್ಯತೆಯನ್ನು ತಿಳಿಸುವ ಮೂಲಕ ಆಚರಿಸಲಾಗುವುದು.
ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣದ ಅಡಿಪಾಯವಾದ ಆರಂಭಿಕ ಬಾಲ್ಯ ಆರೈಕೆ ಮತ್ತು ಶಿಕ್ಷಣ(ಇಸಿಸಿಇ), 3ನೇ ಗ್ರೇಡ್‍ನ ಅಡಿಪಾಯದ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ(ಎಫ್‍ಎಲ್‍ಎನ್), ಡ್ರಾಪ್‍ಔಟ್ ದರವನ್ನು ಕಡಿತಗೊಳಿಸುವುದು ಮತ್ತು ಎಲ್ಲಾ ಹಂತದಲ್ಲಿ ಶಿಕ್ಷಣಕ್ಕೆ ಸಾರ್ವತ್ರಿಕ ಪ್ರವೇಶವನ್ನು ಖಾತ್ರಿಪಡಿಸುವುದು, ಸಮಗ್ರ ಆನಂದದಾಯಕ ಕಲಿಕೆಯ ಪಠ್ಯಕ್ರಮ ಮತ್ತು ಶಿಕ್ಷಣಶಾಸ್ತ್ರ, ಶಿಕ್ಷಕರು ಮತ್ತು ಗುಣಮಟ್ಟದ ಶಿಕ್ಷಣ,ಎಲ್ಲರಿಗೂ ಕಲಿಕೆಯಡಿ ಸಮಾನ ಮತ್ತು ಅಂತರ್ಗತ ಶಿಕ್ಷಣ, ಶಾಲಾ ಸಂಕೀರ್ಣಗಳ ಮೂಲಕ ಸಮರ್ಥ ಸಂಪನ್ಮೂಲ ಮತ್ತು ಪರಿಣಾಮಕಾರಿ ಆಡಳಿತವನ್ನು ಸುಧಾರಿಸುವ ಮುನ್ನೋಟ ಹೊಂದಿದೆ.
ನೀತಿಯ ವಿವಿಧ ಉಪಕ್ರಮಗಳು : ಎನ್‍ಇಪಿ ಅಡಿ ಶಿಕ್ಷಣ ವ್ಯವಸ್ಥೆಯನ್ನು ಮರುವಿನ್ಯಾಸಗೊಳಿಸಲಾಗಿದ್ದು ಇದರಲ್ಲಿ ಮುಖ್ಯವಾಗಿ 1 ನೇ ತರಗತಿ ಪ್ರವೇಶಕ್ಕೆ ಮಗುವಿನ ವಯಸ್ಸು 6 ರಿಂದ 8 ಕ್ಕೆ ನಿಗದಿಗೊಳಿಸಲಾಗಿದೆ. ಇದು ಮೊದಲು 5 ವರ್ಷವಿತ್ತು. ಹಾಗೂ 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಬಾಲವಾಟಿಕಾ ಪರಿಚಯಿಸಲಾಗಿದೆ.
ಬಾಲವಾಟಿಕಾವನ್ನು ಎಲ್ಲ ಶಾಲೆಗಳಲ್ಲಿ ಪ್ರಾರಂಭಿಸಲಾಗುವುದು. ಒಟ್ಟು 1253 ಕೇಂದ್ರೀಯ ವಿದ್ಯಾಲಯಗಳಿದ್ದು, ಈ ವರ್ಷ 500 ಶಾಲೆಗಳಲ್ಲಿ ಬಾಲವಾಟಿಕ ಆರಂಭವಾಗಿದೆ. ಬೆಂಗಳೂರು ವಲಯದ 20 ಶಾಲೆಗಳಲ್ಲಿ ಆರಂಭಿಸಲಾಗಿದೆ.
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಡಿ ಶಾಲಾ ಶಿಕ್ಷಣ ಹಂತಗಳ ವಿನ್ಯಾಸಗೊಳಿಸಲಾಗಿದೆ. 3-8 ವರ್ಷಗಳು ಫೌಂಡೇಷನಲ್, 6-8 ವರ್ಷ +ಗ್ರೇಡ್1 ಮತ್ತು 2, 8-11 ವರ್ಷ ಪೂರ್ವಸಿದ್ದತೆ(ಗ್ರೇಡ್ 3-5), 11-14 ವರ್ಷ ಮಧ್ಯಮ ಹಂತ(ಗ್ರೇಡ್ 6-8) ಮತ್ತು 14-18 ವರ್ಷಗಳು ದ್ವಿತೀಯ ಹಂತ(ಗ್ರೇಡ್ 9-12).
1 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಿಸ್ಕೂಲ್ ತಯಾರಿ ಕಾರ್ಯಕ್ರಮ, ಮಕ್ಕಳನ್ನು ಶಾಲೆಗೆ ತಯಾರಿಗೊಳಿಸುವುದು ಹಾಗೂ 3 ತಿಂಗಳ ಪ್ಲೇ ಮಾಲ್ಯಲ್ ವಿದ್ಯಾ ಪ್ರವೇಶ ಉಪಕ್ರಮದಲ್ಲಿ ಅಳವಡಿಸಲಾಗಿದೆ.
ಆಟಿಕೆ ಆಧಾರಿತ ಶಿಕ್ಷಣಶಾಸ್ತ್ರ ಉಪಕ್ರಮದಲ್ಲಿ ಆಟಿಕೆ ಮತ್ತು ಆಟಗಳ ಮೂಲಕ ಕಲಿಕೆ, ಕಲೆಯ ಏಕೀಕರಣ ಉಪಕ್ರಮದಡಿ ಕಲೆ ಮತ್ತು ಸಂಸ್ಕøತಿಯ ವಿವಿಧ ಅಂಶಗಳನ್ನು ಮತ್ತು ಪ್ರಕಾರಗಳನ್ನು ರೂಪಿಸುವುದು. ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದಲ್ಲಿ ಮೂಲಭೂತ ಗಣಿತದ ಕಾರ್ಯಾಚರಣೆ ಹಾಗೂ ಅತಿ ಪ್ರಮುಖವಾಗಿ ಮಕ್ಕಳ ಕೌಶಲ್ಯಾಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುವುದು.
ನಿಪುಣ್ ಭಾರತ್ ಮಿಷನ್ ಇನಿಷಿಯೇಟಿವ್ ಅಡಿಯಲ್ಲಿ ವಿದ್ಯಾರ್ಥಿಗಳ ಪ್ರಗತಿಯನ್ನು ಟ್ರ್ಯಾಕ್ ಮಾಡುವುದು, ಎಫ್‍ಎಲ್‍ಎನ್ ಅನುಷ್ಟಾ, ಪಿಎಂ ಇ-ವಿದ್ಯಾ & ಶಿಕ್ಷಾ ಉಪಕ್ರಮದಡಿ ಡಿಜಿಟಲ್/ಆನ್‍ಲೈನ್/ಆನ್ ಏರ್ ಶಿಕ್ಷಣಕ್ಕೆ ಬಹುಮಾರ್ಗದ ಪ್ರವೇಶಕ್ಕಾಗಿ ಒಂದು ಕಾರ್ಯಕ್ರಮ, ವಿದ್ಯಾಂಜಲಿ ಉಪಕ್ರಮದಡಿ ದೇಶಾದ್ಯಂತ ಶಾಲೆಗಳಲ್ಲಿ ಸಮುದಾಯ ಮತ್ತು ಖಾಸಗಿ ವಲಯದ ಒಳಗೊಳ್ಳುವಿಕೆಯ ಮೂಲಕ ಶಾಲೆಗಳನ್ನು ಬಲಪಡಿಸುವ ಗುರಿಯನ್ನು ವಿದ್ಯಾಂಜಲಿ ಹೊಂದಿದೆ.
ಪಠ್ಯಕ್ರಮದಲ್ಲಿ ಕೌಶಲ್ಯ ವಿಷಯದ ಏಕೀಕರಣ, ಸ್ಕಿಲ್ ಹಬ್, ಪಾಲುದಾರರಾಗಿ ಪೋಷಕರನ್ನು ಅಳವಡಿಸುವುದು, ಸಮಾನ ಮತ್ತು ಅಂತರ್ಗತ ಶಿಕ್ಷಣ, ಶಿಕ್ಷಣ ಪಲ್ಲಟ ಮತ್ತು ಶಿಕ್ಷಕರಿಗೆ ತರಬೇತಿ, ಶಿಕ್ಷಕರ ತರಬೇತಿ: ನಿಷ್ಟ 2.0 ಹಾಗೂ ಸಫಲ್ ಒಟ್ಟು 17 ಉಪಕ್ರಮಗಳಡಿ ಈ ನೀತಿಯಲ್ಲಿ ಪಠ್ಯಕ್ರಮ ಮತ್ತು ಕೌಶಲ್ಯಾಭಿವೃದ್ದಿಯನ್ನು ಅಳವಡಿಸಿಕೊಳ್ಳಲಾಗಿದೆ.
ಕೇಂದ್ರೀಯ ವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಎಲ್ಲ ಉಪಕ್ರಮಗಳನ್ನು ಅಳವಡಿಸಿಕೊಳ್ಳಲಾಗುವುದು. ಸದ್ಯಕ್ಕೆ 9 ಉಪಕ್ರಮಗಳು ಅನುಷ್ಟಾನದಲ್ಲಿವೆ ಎಂದು ಮಾಹಿತಿ ನೀಡಿದರು.
National Education Policy ಪತ್ರಿಕಾಗೋಷ್ಟಿಯಲ್ಲಿ ಗಾಜನೂರು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಜಾನ್ಸನ್ ಪಿ ಜೇಮ್ಸ್, ಹಿರಿಯ ಶಿಕ್ಷಕ ಲಿಶಾ ವರ್ಗೀಸ್ ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...