Klive Special Article ಯಾಕೋ ಈ ಭೂಮಿಯ ಮೇಲೆ ಬದುಕಲು ಭಯವಾಗುತಿದೆ;
ನಿನ್ನೆ ಅವಳು, ನಾಳೆ ನಾನೋ? ಅಥವಾ ಮನೆಯ ಅಕ್ಕ ತಂಗಿಯೋ , ಯಾವುದೋ ಕುಟುಂಬದ ಇನ್ಯಾವ ಹೆಣ್ಣೋ ಎಂಬ ಪ್ರಶ್ನೆ ಸದಾ ಕಾಡುತಿದೆ…
ಆಕೆಯ ಚಿತೆಗೆ ಬೆಂಕಿ ಇಟ್ಟ (ಬದುಕಿಗೆ) ಈ ಕೆಟ್ಟ ಸಮಾಜ , ನಾಳೆ ನಾವಾದರೇನು ? ಯಾರಾದರೇನು?….
ಬೆಂಕಿಯೇ ಹಚ್ಚುವರೋ , ಅಥವಾ ಕೊಳೆತು ಹಾಗೆಯೇ ಹೋಗಲಿ ಎಂದು ಬಿಟ್ಟು ಬಿಡುವರೋ ಒಂದೂ ಅರಿಯದು!….
ಮಾನವೀಯತೆಯನ್ನೇ ಮರೆತ ಮಾನವರು , ಇದ್ದರೂ ಧ್ವನಿ ಎತ್ತಿ ಮಾತನಾಡುವವರಿಲ್ಲ,
ಬೇಡದ ವಿಷಯಗಳಿಗೆ ಟೀಕಿಸಿ ಹಂಗಿಸುವ ಜನ ಇಂತಹ ಪರಿಸ್ಥಿತಿಯಲ್ಲಿ ಸುಮ್ಮನಿರುವುದೇಕೋ…?
ನ್ಯಾಯ ಎಲ್ಲಿದೆಯೋ ತಿಳಿಯದಾಗಿದೆ…..
ಮನೆಯಿಂದ ಹೊರಹೋಗಲೂ ಹತ್ತು ಸಲ ಯೋಚಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ..
ಹೆಣ್ಣು ದೇವತೆ, ಹೆಣ್ಣು ಶಕ್ತಿ ಎಂದೆಲ್ಲ ಹೇಳುವವರು ,ಈಗ ಆಕೆಯ ರಕ್ಷಣೆ ಸಮಯದಲ್ಲಿ ಮೌನಯಾಗಿರುವುದೇಕೋ?..
ಯಾಕೆ ಹೆಣ್ಣಿಗೆ ಇಷ್ಟೋಂದು ಶಿಕ್ಷೆ ತಿಳಿಯದು..
ಒಂಬತ್ತು ತಿಂಗಳು ತನ್ನ ಗರ್ಭದಲ್ಲಿಟ್ಟು ಜೀವನ ಪೂರ್ತಿ ಸಾಕಿ ಸಲಹಿದಕ್ಕೆ ಈ ಶಿಕ್ಷೆಯೋ?..
ನಿಸ್ವಾರ್ಥಿಯಾಗಿ ವರ್ಷದ ಮುನ್ನೂರ ಅರವತ್ತೈದು ದಿನ ವಿಶ್ರಾಂತಿ ಪಡೆಯದೇ , ತನ್ನ ಕುಟುಂಬಕ್ಕಾಗಿ ಜೀವಮಾನವನ್ನೆ ಸವೆಸಿದ್ದಕ್ಕಾಗಿ ಈ ಶಿಕ್ಷೆಯೋ?…
ಅಥವಾ ತಾನು ಉಪವಾಸವಿದ್ದು, ತನ್ನ ಕುಟುಂಬದವರಿಗೆ ಉಣಬಡಿಸಿದ್ದಕ್ಕಾಗಿ ಈ ಶಿಕ್ಷೆಯೋ..
ಇಲ್ಲವೇ, ತಾಯಿಯಾಗಿ, ಮಗಳಾಗಿ, ಗೆಳತಿಯಾಗಿ, ಹೆಂಡತಿಯಾಗಿ, ಸೊಸೆಯಾಗಿ, ಅತ್ತೆಯಾಗಿರುದಕ್ಕೋ….
ತನ್ನ ತವರನ್ನ, ಗಂಡನ ಮನೆಯನ್ನ ಬೆಳಗುವುದಕ್ಕಾಗಿ ಈ ಶಿಕ್ಷೆಯೋ?..
ಅಥವಾ ಹೆಣ್ಣಾಗಿ ಹುಟ್ಟಿದ್ದಕ್ಕಾಗಿಯೇ ಈ ಶಿಕ್ಷೆಯೋ…? ಒಂದೂ ತಿಳಯದೇ ಮಾತುಗಳು ಗಂಟಲಲ್ಲೇ ಮೌನ ತಾಳಿವೆ….
ದೇಶ ಕಾಯಲು ಗಡಿಯಲ್ಲಿ ಸೈನಿಕರಿದ್ದಾರೆ, ಆದರೆ ದೇಶದೊಳಗಿನ ಹೆಣ್ಣನ್ನು ಕಾಯಲು ಯಾರೂ ಇಲ್ಲ…
Klive Special Article ಬೇಲಿಯೇ ಎದ್ದು ಹೊಲ ಮೇಯುವುದು ಸತ್ಯವಾಗಿದೆ..
ಎಂತಹ ವಿಪರ್ಯಾಸ….
ಲೇ: ಅಂಜುಮ್.ಬಿ.ಎಸ್.