Tuesday, June 17, 2025
Tuesday, June 17, 2025

Thirthahalli Election Result 2023 ಐದನೇ ಬಾರಿಗೆ ಶಾಸಕರಾಗುವ ಅದೃಷ್ಟ ಪಡೆದ ಆರಗ ಜ್ಞಾನೇಂದ್ರ

Date:

Thirthahalli Election Result 2023 ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿಗಳಾಗಿ ಬಿಜೆಪಿ ಪಕ್ಷದಿಂದ ಆರಗ ಜ್ಞಾನೇಂದ್ರ, ಕಾಂಗ್ರೆಸ್ ಪಕ್ಷದಿಂದ ಕಿಮ್ಮನೆ ರತ್ನಾಕರವರು ಚುನಾವಣಾ ಕಣದಲ್ಲಿ ಸ್ಪರ್ಧಿಸಿದ್ದರು.

ಇವರಲ್ಲಿ ಗೆಲುವು ಯಾರ ಕೈ ಸೇರುತ್ತದೆ ಎಂಬುವುದು ಮತದಾರರಲ್ಲಿ ಕುತೂಹಲವನ್ನು ಕೆರಳಿಸಿತ್ತು. ಇಬ್ಬರೂ ಸಹ ಚುನಾವಣಾ ಕಣದಲ್ಲಿ ಉತ್ತಮ ಪೈಪೋಟಿ ನೀಡಿದ್ದರು. ಕೊನೆಗೆ ವಿಧಾನಸಭಾ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ ಅವರು 84,563 ಮತ ಗಳಿಸಿದ್ದಾರೆ. ಎದುರಾಳಿ ಕಾಂಗ್ರೆಸ್ ಕಿಮ್ಮನೆ ರತ್ನಾಕರ್ ಅವರನ್ನು 12,241 ಮತಗಳ ಅಂತರದಲ್ಲಿ ಸೋಲಿಸಿ, ಗೆಲುವು ಪಡೆದಿದ್ದಾರೆ.

ತೀರ್ಥಹಳ್ಳಿ ಕ್ಷೇತ್ರದ ಸತತ 10ನೇ ಬಾರಿಗೆ ವಿಧಾನಸಭಾ ಚುನಾವಣೆ ಗೆ ಸ್ಪರ್ಧಿಸುವ ಮುಖಾಂತರ ರಾಜ್ಯ ರಾಜಕಾರಣದಲ್ಲಿ ಇತಿಹಾಸ ಸೃಷ್ಟಿಸಿದ ಆರೋಗ್ಯ ಜ್ಞಾನೇಂದ್ರ ಅವರು 5ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

1983ರಲ್ಲಿ ತಮ್ಮ ಬಾರಿಗೆ ಸ್ಪರ್ಧಿಸಿದ ಆರಗ ಜ್ಞಾನೇಂದ್ರರವರು ಸುಮಾರು 40 ವರ್ಷ ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತಿದ್ದಾರೆ.

Thirthahalli Election Result 2023 ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವನ್ನು ಸಾಧಿಸುವ ಮೂಲಕ ಮತ್ತೊಮ್ಮೆ ಗೆಲುವಿನ ಮೆಟ್ಟಿಲನ್ನು ಏರಿದ್ದಾರೆ.

ಈ ಗೆಲುವಿನ ವಿಜಯೋತ್ಸವವನ್ನು ಕಾರ್ಯಕರ್ತರು ಮೆರವಣಿಗೆಯನ್ನು ಮಾಡುವ ಮುಖಾಂತರ ಗೆಲುವಿನ ಹರ್ಷವನ್ನು ವ್ಯಕ್ತಪಡಿಸಿದರು. ಪಟಾಕಿ ಸಿಡಿಸಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Friends Health Care Center ಜೂ.18 ರಂದು ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣಾ ಶಿಬಿರ

Friends Health Care Center ಫ್ರೆಂಡ್ಸ್ ಹೆಲ್ತ್ ಕೇರ್ ಸೆಂಟರ್ ಸುದೇನು...