Thursday, June 18, 2026
Thursday, June 18, 2026

Attack by Street Dogs ಅರಸಾಳು ಸುತ್ತಮುತ್ತ ಚಿರತೆ ಕಾಟ ಬಿಟ್ಟು ಈಗ ನಾಯಿಗಳ ಕಾಟ:ಕುರಿಗಳ ಬಲಿ

Date:

Attack by Street Dogs ರಿಪ್ಪನ್‌ಪೇಟೆಯ ಕೆಂಚನಾಲ,ಅರಸಾಳು ವ್ಯಾಪ್ತಿಯಲ್ಲಿ ಇತ್ತೀಚಿಗೆ ಚಿರತೆಯಿಂದ ಆತಂಕಕ್ಕೊಳಗಾಗಿರುವ ರೈತರಿಗೆ ಈಗ ನಾಯಿಗಳ ಕಾಟದಿಂದಾಗಿ ಇನ್ನಷ್ಟು ಆತಂಕಕ್ಕೊಳಗಾಗಿದ್ದಾರೆ.

ಅರಸಾಳು ಸಮೀಪ ಮಾಣಿಕೆರೆ ಗ್ರಾಮದಲ್ಲಿ ಬುಧವಾರ ಬೀದಿನಾಯಿಗಳ ದಾಳಿಗೆ ವೇಲಾಯದನ್ ಅವರಿಗೆ ಸೇರಿದ ಸುಮಾರು 25 ಕುರಿಗಳು ಬಲಿಯಾಗಿವೆ.

ಎಂದಿನಂತೆ ವೇಲಾಯದನ್ ಗ್ರಾಮದ ಸಮೀಪದಲ್ಲಿ ಕುರಿಗಳನ್ನು ಮೇಯಲು ಬಿಟ್ಟಿದ್ದಾರೆ. ಆಗ ಮನೆಯ ಕೊಟ್ಟಿಗೆಯಲ್ಲಿದ್ದ ಕುರಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ ಬೀದಿ ನಾಯಿಗಳ ಹಿಂಡು ಸಿಕ್ಕ ಸಿಕ್ಕ ಕುರಿಗಳನ್ನು ಕಚ್ಚಲು ಆರಂಭಿಸಿವೆ. ವಿಷಯ ತಿಳಿದು ಸ್ಥಳಕ್ಕೆ ಹೋಗುವ ವೇಳೆಗೆ ನಾಯಿಗಳು ಓಡಿ ಹೋಗಿವೆ. ಆದರೆ, ಅಷ್ಟರಲ್ಲಾಗಲೇ ನಾಯಿಗಳು ಸುಮಾರು 25 ಕುರಿಗಳನ್ನು ಕಚ್ಚಿ ಸಾಯಿಸಿದೆ.

ನಾಯಿಯ ದಾಳಿಯಿಂದ ಬೆಚ್ಚಿರುವ ಅರಸಾಳು,ಮಾಣಿಕೆರೆ ಗ್ರಾಮಸ್ಥರು ‘ರಕ್ತದ ರುಚಿಕಂಡಿರುವ ಈ ನಾಯಿಗಳು ಮಕ್ಕಳ ಮತ್ತು ಜಾನುವಾರುಗಳ ಮೇಲೂ ದಾಳಿ ನಡೆಸಬಹುದೆಂದು ಆತಂಕ ವ್ಯಕ್ತಪಡಿಸಿದ್ದಾರೆ.

Attack by Street Dogs ವಾಸಿಸಲು ಮನೆ ಇಲ್ಲದ ಬಡ ಕೃಷಿಕನ ಜೀವನಕ್ಕೆ ಆಸರೆಯಾಗಿದ್ದ ಕುರಿಗಳು ನಾಯಿ ದಾಳಿಯಿಂದ ಬಲಿಯಾಗಿರುವುದರಿಂದ ಬೇಸತ್ತು
ನಾಯಿಗಳ ಹಾವಳಿಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸುವ ಜೊತೆಗೆ, ಕುರಿಗಳ ಸಾವಿನಿಂದ ತಮಗಾಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಪಶು ವೈದ್ಯಕೀಯ ಮತ್ತು ಸೇವಾ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...