Wednesday, July 16, 2025
Wednesday, July 16, 2025

Kendriya Vidyalaya Shivamogga ಶಿವಮೊಗ್ಗ ಕೇಂದ್ರೀಯ ವಿದ್ಯಾಲಯದಲ್ಲಿ ಎಫ್ ಎಲ್ ಎನ್ ಕುರಿತು ಕಾರ್ಯಾಗಾರ

Date:

Kendriya Vidyalaya Shivamogga ಶಿವಮೊಗ್ಗದ ಕೇಂದ್ರೀಯ ವಿದ್ಯಾಲಯದಲ್ಲಿ ಜೂನ್ 15 ರಂದು 4 ನೇ ಜಿ20 ಶಿಕ್ಷಣ ಕಾರ್ಯಗುಂಪು ಸಭೆಯಡಿಯಲ್ಲಿ ಫೌಂಡೇಷನಲ್ ಲಿಟರಸಿ ಆಂಡ್ ನ್ಯೂಮರಸಿ(ಎಫ್‍ಎಲ್‍ಎನ್) ಕುರಿತು ಆನ್‍ಲೈನ್ ಕಾರ್ಯಾಗಾರವನ್ನು ನಡೆಸಲಾಯಿತು.

ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರು ಕಾರ್ಯಾಗಾರದ ಕುರಿತು ಮಾಹಿತಿ ನೀಡಿ ಎಲ್ಲರನ್ನು ಸ್ವಾಗತಿಸಿದರು. ಕೆವಿ ಯ ಹಿರಿಯ ಪಿಆರ್‍ಟಿ ಗುರುಮೂರ್ತಿ ಎನ್ ರವರು ಜಿ20 ಮತ್ತು ಭಾರತದ ಜಿ20 ಪ್ರೆಸಿಡೆನ್ಸಿಯ ಕುರಿತು ಸಂಕ್ಷಿಪ್ತ ವಿವರಣೆ ನೀಡಿದರು.

ಕೆವಿ ಯ ಹಿರಿಯ ಪಿಆರ್‍ಟಿ ಈರೇಶ ಬಿ, ರವರು ಎನ್‍ಇಪಿ 2020 ಮತ್ತು ಫೌಂಡೇಶನಲ್ ಸಾಕ್ಷರತೆಯಂತಹ ವಿಷಯಗಳ ಕುರಿತು ತಿಳುವಳಿಕೆ ನೀಡಿದರು.

Kendriya Vidyalaya Shivamogga ಬೆಂಗಳೂರಿನ ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯದ ಮುಖ್ಯೋಪಾಧ್ಯಾಯ ವೆಂಕಟಗಿರಿಯವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಫೌಂಡೇಶನಲ್ ಸಂಖ್ಯಾಶಾಸ್ತ್ರದ ಕುರಿತು ವಿಷಯ ಮಂಡಿಸಿದರು.

ಕೇಂದ್ರೀಯ ವಿದ್ಯಾಲಯದ ಪಾಲಕರು, ಅಕ್ಕಪಕ್ಕದ ಶಾಲೆಗಳ ಶಿಕ್ಷಕರು ಮತ್ತು ಇತರ ಪಾಲುದಾರರು ಸೇರಿದಂತೆ ಒಟ್ಟು 82 ಜನರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಪ್ರಶ್ನೋತ್ತರ ಅವಧಿಯೊಂದಿಗೆ ಅಧಿವೇಶನವನ್ನು ಮುಕ್ತಾಯಗೊಳಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddaramaiah ಸಿಎಂ ಸಿದ್ಧರಾಮಯ್ಯ ಅವರ ಪತ್ರಕ್ಕೆ ಕೇಂದ್ರ ಸಚಿವ ಗಡ್ಕರಿ ಅವರ ಪತ್ರ- ಪ್ರತಿಕ್ರಿಯೆ

CM Siddaramaiah ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ,...