Monday, April 21, 2025
Monday, April 21, 2025

Shimoga District Chamber of Commerce and Industry ವಾಣಿಜ್ಯ,ಕೈಗಾರಿಕೆ ಉದ್ಯಮಿಗಳಿಗೆ ರಾಜ್ಯ ಸಂಘಟನೆ ಸದಾ ಬೆಂಬಲ-ಗೋಪಾಲ ರೆಡ್ಡಿ

Date:

Shimoga District Chamber of Commerce and Industry ವೃತ್ತಿ ಕ್ಷೇತ್ರಕ್ಕೆ ಅವಶ್ಯಕತೆ ಇರುವ ಕೌಶಲ್ಯ ತರಬೇತಿ ನೀಡುವ ಹಾಗೂ ಕೌಶಲ್ಯಯುತ ಯುವ ಸಮಾಜ ರೂಪಿಸುವ ಆಶಯದಿಂದ ರಾಜ್ಯದ ವಾಣಿಜ್ಯ ಸಂಘ ಕಾರ್ಯ‌ ನಿರ್ವಹಿಸುತ್ತಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಬಿ.ವಿ.ಗೋಪಾಲ ರೆಡ್ಡಿ ಹೇಳಿದರು.

ಶಿವಮೊಗ್ಗ ನಗರದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಾಣಿಜ್ಯ ಉದ್ಯಮಿ, ಕೈಗಾರಿಕೋದ್ಯಮಿ ಹಾಗೂ ಎಲ್ಲ ವೃತ್ತಿ ಕ್ಷೇತ್ರದವರಿಗೂ ಉತ್ತಮ‌ ಸೇವೆ ಒದಗಿಸುವ ದೃಷ್ಟಿಯಿಂದ ರಾಜ್ಯ ಸಂಘನಟನೆಯು ಸದಾ ಬೆಂಬಲ‌ ಒದಗಿಸುತ್ತದೆ. ಕೌಶಲ್ಯಯುತ ಯುವಸಮೂಹ ಹೊಸ‌ ಅಲೋಚನೆ ಹಾಗೂ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದೆ. ಅಗತ್ಯವಿರುವ ಕೌಶಲ್ಯ ಕೋರ್ಸುಗಳನ್ನು ಸಂಘಟನೆ ಆಯೋಜಿಸುತ್ತದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ‌ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಸಂಘವು ಅಮೃತ ಮಹೋತ್ಸವ ವರ್ಷ ಆಚರಿಸುತ್ತಿದ್ದು, ನಮ್ಮ ಸಂಘವು ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಯಲ್ಲಿ ನಿರಂತರ ಸಲಹೆ,‌ ಮಾರ್ಗದರ್ಶನ ಹಾಗೂ ಸಹಕಾರ ನೀಡುತ್ತಾ ಬರುತ್ತಿದೆ. ಮಾಜಿ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಸಂಘವು ಮುನ್ನಡೆಯುತ್ತಿದೆ ಎಂದು ಹೇಳಿದರು.

ಸ್ಕೀಲ್ ಅಕಾಡೆಮಿ ಸ್ಥಾಪಿಸುವ ಕುರಿತು ಯೋಜನೆ ಪ್ರಗತಿಯಲ್ಲಿದೆ. ರಾಜ್ಯ ಸಂಘ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಕಾರ್ಯರೂಪಕ್ಕೆ ತರಲಾಗುವುದು. ಮುಂದಿನ ದಿನಗಳಲ್ಲಿ ಸಂಘಟನೆ ಮತ್ತಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.

ರಾಜ್ಯ ಸಂಘಟನೆಯ ಪ್ರಮುಖರಾದ ಕಿರಣ್ ಕುಮಾರ್ ಮಾತನಾಡಿ, ಉದ್ಯಮಿಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಪಾಸ್ ಪೋರ್ಟ್, ವೀಸಾ ಸೇರಿದಂತೆ ಯಾವುದೇ ಸಮಸ್ಯೆ ಆದರೂ ಕೂಡಲೇ ಪರಿಹರಿಸುವ ಕೆಲಸ‌ ಮಾಡುತ್ತೇವೆ. ಸಂಘದಲ್ಲಿ ಸದಸ್ಯತ್ವ ಪಡೆಯುವುದರಿಂದ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ತುಂಬಾ ಪ್ರಯೋಜನ ದೊರೆಯುತ್ತವೆ ಎಂದು ತಿಳಿಸಿದರು.

ರಾಘವೇಂದ್ರ ರಾವ್ , ಡಿ.ಎಂ.ಶಂಕರಪ್ಪ‌ ಸಹೋದರರು, ಎ.ಎಂ.ಸುರೇಶ್ ಅವರಿಗೆ 2023ನೇ ಸಾಲಿನ ಹೆಮ್ಮೆಯ ವಾಣಿಜ್ಯ ಪ್ರಶಸ್ತಿ ಪುರಸ್ಕಾರ ‌ನೀಡಿ‌ ಗೌರವಿಸಲಾಯಿತು. ಆರ್.ರಂಗಪ್ಪ ಅವರಿಗೆ ವಿಶೇಷ ಪುರಸ್ಕಾರ ನೀಡಿ‌ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಯೋಗಪಟು ಸವಿತಾ ಮಾಧವ್, ರಾಜ್ಯ ಜ್ಯೂವೆಲ್ಲರಿ ಫೆಡರೇಷನ್ ಉಪಾಧ್ಯಕ್ಷ ವಿನೋದ್ ಕುಮಾರ್ ಜೈನ್ ಅವರಿಗೆ ಸನ್ಮಾನಿಸಲಾಯಿತು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯರಿಗೆ ನೂತನ ಯೋಜನೆಯಡಿ ಗುರುತೀನ‌ ಚೀಟಿಗಳನ್ನು ವಿತರಿಸಲಾಯಿತು. ಉದ್ಯಮಿಗಳಿಗೆ ಪ್ರೋತ್ಸಾಹಿಸಲು ವಿಶೇಷ ಮಳಿಗೆಗಳನ್ನು ಹಾಕಲಾಗಿತ್ತು.

ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷ ರಾದ ಡಿ.ಎಂ.ಶಂಕರಪ್ಪ, ಟಿ.ಆರ್.ಅಶ್ವತ್ಥ ನಾರಾಯಣ ಶೆಟ್ಟಿ, ಜೆ.ಆರ್.ವಾಸುದೇವ, ಕೆ.ವಿ.ವಸಂತ್ ಕುಮಾರ್ ಅವರಿಗೆ ಅಭಿನಂದಿಸಲಾಯಿತು.

ಸಂಘದ ಕನಸಿನ ಯೋಜನೆಯಾದ ಅಡ್ವಾನ್ಸ್ಡ್ ಕೌಶಲ್ಯ ಅಕಾಡೆಮಿಯ ಲೋಗೋ‌ ಅನಾವರಣಗೊಳಿಸಲಾಯಿತು.

Shimoga District Chamber of Commerce and Industry ಶಿವಮೊಗ್ಗ ಜಿಲ್ಲಾ ‌ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ‌ ಅಧ್ಯಕ್ಷ ಜೆ.ಆರ್.ವಾಸುದೇವ್, ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿ ದಾರ್, ಸಹ ಕಾರ್ಯದರ್ಶಿ ಜಿ.ವಿಜಯ್ ಕುಮಾರ್, ಖಜಾಂಚಿ ಎಂ.ರಾಜು, ನಿರ್ದೇಶಕ ಬಿ.ಆರ್.ಸಂತೋಷ್, ಸಂಘದ ಎಲ್ಲ ನಿರ್ದೇಶಕರು, ಮಾಜಿ ಅಧ್ಯಕ್ಷರು,‌ ಪದಾಧಿಕಾರಿಗಳು, ಸಂಘದ ಸಂಯೋಜಿತ ಸಂಸ್ಥೆಯ ‌ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Chidambara Mahaswami ಗುಬ್ಬಿ ಚಿದಂಬರಾಶ್ರಮದಲ್ಲಿಎಲೆಕ್ಟ್ರಿಷಿಯನ್ ವೃತ್ತಿ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Sri Chidambara Mahaswami ಶ್ರೀ ಶ್ರೀ ಚಿದಂಬರ ಮಹಾಸ್ವಾಮಿಗಳು ಶ್ರೀ ಚಿದಂಬರಾಶ್ರಮವನ್ನು...

CM Siddharamaih ಪೌರ ಕಾರ್ಮಿಕರ ಸೇವೆ ಖಾಯಂಗೊಳಿಸುವ ಕಾರ್ಯ ನಡೆಯುತ್ತಿದೆ- ಸಿದ್ಧರಾಮಯ್ಯ

CM Siddharamaih ಎಲ್ಲಾ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವ ಕಾರ್ಯ ನಡೆಯುತ್ತಿದೆ.ಈಗಾಗಲೇ...

DC Shivamogga ಪರೀಕ್ಷಾರ್ಥಿಯ ಜನಿವಾರ ತೆಗೆಸಿದ ಪ್ರಕರಣ, ಈರ್ವರು ಗೃಹ ರಕ್ಷಕ ದಳ ಸಿಬ್ಬಂದಿ ಅಮಾನತು-ಗುರುದತ್ತ‌ ಹೆಗಡೆ

DC Shivamogga ಶಿವಮೊಗ್ಗ ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಇತ್ತೀಚಿಗೆ...

Mental health ಮಾನಸಿಕ ಸಮಸ್ಯೆಗಳು‌‌ ಮತ್ತು‌ ಸೂಕ್ತ ಪರಿಹಾರಗಳು ...

Mental health ಮಾನಸಿಕ ಖಾಯಿಲೆಗಳು ಯಾರಿಗಾದರೂ ಬರಬಹುದು : ಸೂಕ್ತ...