Ramakrishna Vidyaniketan Institution ಶಿವಮೊಗ್ಗ, ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಸಂಸ್ಥೆಯ ಮಕ್ಕಳು ಪ್ರತಿ ವರ್ಷದಂತೆ ಈ ವರ್ಷವು ಸಹ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 150 ಅಂಕ ಪಡೆದಿದ್ದು, ಶೇ.70ರಷ್ಟು ಮಕ್ಕಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.
ಪರೀಕ್ಷೆಯಲ್ಲಿ ಪಾಲ್ಗೊಂಡ 160 ಮಕ್ಕಳು ಉತ್ತೀರ್ಣಗೊಂಡಿದ್ದಾರೆ. ಶೇ.100ರ ಫಲಿತಾಂಶವನ್ನು ದಾಖಲಿಸಿದ್ದಾರೆ.
ವಿಶೇಷವೆಂದರೆ ಪರೀಕ್ಷೆಯಲ್ಲಿ ಪಾಲ್ಗೊಂಡ 23 ಮಕ್ಕಳು 600ಕ್ಕೂ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ವಿಷಯವಾರು ಈ ಮಕ್ಕಳು ಶೇ.100ರ ಫಲಿತಾಂಶವನ್ನು ನೀಡಿದ್ದಾರೆ.
ದಿಶಾ ಶಣೈ ಹಾಗೂ ರೋಹಿಣಿ ಬಿ ಅವರು 620 ಅಂಕ ಪಡೆದಿದ್ದಾರೆ. ಪೂರ್ವಿ ಎಲ್.ರಾಜ್ 619, ಹರ್ಷಿತಾ ಟಿ.ಎಂ 618, ನಿಧಿ ಹೊಸ್ಮನೆ 616, ದೀಪ್ತಿ ವಿ ಹಾಗೂ ವೆಂಕಟೇಶ್ ಎನ್ ಅವರು 615 ಅಂಕಗಳಿಸಿದ್ದಾರೆ. ಅಂತೆಯೇ ಅಮೃತ ಡಿ, ತನ್ಮಯಿ ಆರ್ 614, ಸನಿಕಾ ಎ.613, ಕೃತಾತ್, ಸುಗೋಶ್ ಎನ್. 611, ಸೈಯದ್ ಮಹಮ್ಮದ್ ಖಲಂದರ್, ಧನ್ಯ ಕೆ.ಎನ್, ಎ.ಯು ಗೌತಮಿ 610, ಸಿಂಚಿತಾ ವೈ.ಟಿ. ಸಮರ್ಥ್ ಡಿ.ವಿ, 608, ದಿಶಾಂತ್ ಆರ್ ಸಬ್ರತ್ 605, ತೇಜಸ್ ವಿ 603, ಐಶ್ವರ್ಯ ಪಿ ಸಿಂಧೆ, ಪ್ರೇಮ್ ಹೆಚ್.ಪಿ ಗೌಡ 602, ಚೇತನ್ ಕುಮಾರ್ ಕೆ.ವಿ. 602, ಮೈತ್ರಿ ಆರ್ 600 ಅಂಕ ಗಳಿಸಿದ್ದಾರೆ.
Ramakrishna Vidyaniketan Institution ಪರೀಕ್ಷೆಯಲ್ಲಿ ಪಾಲ್ಗೊಂಡ 95 ಮಕ್ಕಳು ಅಂದರೆ 600ಕ್ಕೂ ಹೆಚ್ಚು ಅಂಕ ಪಡೆದವರು ಸೇರಿ ಡಿಸ್ಟಿಂಕ್ಷನ್ ಗಳಿಸಿದ್ದಾರೆ. 48 ಅತ್ಯುತ್ತಮ, 22 ಉತ್ತಮ, ಉಳಿದ ಐವರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ರಾಮಕೃಷ್ಣ ವಿದ್ಯಾನಿಕೇತನದ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ಸೂಚಿಸಿ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಶಿಕ್ಷಕ ವೃಂದಕ್ಕೆ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ನ ಕಾರ್ಯದರ್ಶಿ ಶೋಭಾವೆಂಕಟರಮಣ ಅವರು ಟ್ರಸ್ಟ್ ಪರವಾಗಿ ಅಭಿನಂದಿಸಿದ್ದಾರೆ.