Monday, June 23, 2025
Monday, June 23, 2025

Shivamogga constituency ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣೆಯ ಮಾದರಿ ಮತಗಟ್ಟೆಗಳ‌ ಮಾಹಿತಿ

Date:

Shivamogga constituency ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತದಾನವು ಮೇ 10 ರಂದು ನಡೆಯಲಿದ್ದು, ಜಿಲ್ಲೆಯ 07 ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ರೀತಿಯ ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಮಹಿಳಾ ಮತದಾರರು ಪುರಷ ಮತದಾರರಿಗಿಂತ ಹೆಚ್ಚಾಗಿರುವೆಡೆ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 35 ಸಖಿ ಮತಗಟ್ಟೆಗಳು, ವಿಕಲಚೇತನರ(ಪಿಡಬ್ಲ್ಯುಡಿ) 9, ಯುವ ಮತದಾರರ 01 ಮತ್ತು 09 ಎತ್ನಿಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

Shivamogga constituency ಶಿವಮೊಗ್ಗ ಗ್ರಾಮಾಂತರದ ಜಾವಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಅನುಪಿನಕಟ್ಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ, ಹೊಳಲೂರು, ಸರ್ಕಾರಿ ಪದದವಿಪೂರ್ವ ಕಾಲೇಜು(ವೆಸ್ಟ್‍ವಿಂಗ್)ಆಯನೂರು, ಸರ್ಕಾರಿ ಹಿ.ಪ್ರಾ.ಶಾಲೆ ಹರಿಗೆ ಇಲ್ಲಿ ಸಖಿ, ತಮ್ಮಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಿಡಬ್ಲ್ಯುಡಿ ಮತ್ತು ಹಕ್ಕಿಪಿಕ್ಕಿ ಕ್ಯಾಂಪ್ ಸರ್ಕರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎತ್ನಿಕ್ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.

ಭದ್ರಾವತಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ, ಅನ್ವರ್ ಕಾಲೋನಿ, ಹಳೇನಗರ, ಅರಳಿಹಳ್ಳಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಶ್ರೀ ಎಂ.ವಿ.ಕಲಾ ಮತ್ತು ವಿಜ್ಞಾನ ಕಾಲೇಜು ಈಸ್ಟ್ ವಿಂಗ್ ನ್ಯೂಟೌನ್ ಭದ್ರಾವತಿ, ಸಕಾರಿ ಹಿ.ಪ್ರಾ.ಶಾಲೆ(ಸೌತ್‍ವಿಂಗ್)ಅರಳಿಹಳ್ಳಿ, ಸರ್ಕಾರಿ ಹಿ.ಪ್ರಾ.ಶಾಲೆ ವೀರಾಪುರ ಇಲ್ಲಿ ಸಖಿ, ಸರ್ಕಾರಿ ಉರ್ದು ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ದೊಣಬಘಟ್ಟದಲ್ಲಿ ಪಿಡಬ್ಲ್ಯುಡಿ, ಸಿಂಗನಮನೆ ಗ್ರಾ.ಪಂ ಕಾರ್ಯಾಲಯದಲ್ಲಿ ಎತ್ನಿಕ್ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.

ಶಿವಮೊಗ್ಗದ ಬಸವೇಶ್ವರ ನಗರದ ಆಂಗ್ಲ ಮಾಧ್ಯಮ ಶಾಲೆ. ಬೊಮ್ಮನಕಟ್ಟೆಯ ಸರ್ಕಾರಿ ಕಿ.ಪ್ರಾ.ಶಾಲೆ, ತ್ಯಾವರೆಚಟ್ನಹಳ್ಳಿಯ ಸರ್ಕಾರಿ.ಕಿ.ಪ್ರಾ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರವೀಂದ್ರ ನಗರ, ಶಿವಮೊಗ್ಗದ ಸಿಇಓ ಜಿ.ಪಂ ಕಟ್ಟಡ(ಈಸ್ಟ್ ವಿಂಗ್), ರಲ್ಲಿ ಸಖಿ ಮತಗಟ್ಟೆ, ಮಲ್ಲಿಗೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪಿಡಬ್ಲ್ಯುಡಿ, ನ್ಯೂಮಂಡ್ಲಿ ಕನ್ನಡ ಹಿ.ಪ್ರಾ.ಶಾಲೆಯಲ್ಲಿ ಯುವ ಮತದಾರರ ಮತ್ತು ಮಾಡೆಲ್ ಶಿವಪ್ಪನಾಯಕ ಅರಮೆನೆ ಮತ್ತು ಮಹಾನಗರ ಪಾಲಿಕೆ ಚಾಮರಾಜ ಮೆಮೋರಿಯಲ್ ಹಾಲ್‍ನಲ್ಲಿ ಎತ್ನಿಕ್ ಮತಗಟ್ಟೆ ಸ್ಥಾಪಿಸಲಾಗಿದೆ.

ತೀರ್ಥಹಳ್ಳಿಯ ಸರ್ಕಾರಿ ಕಿ.ಪ್ರಾ.ಶಾಲೆ, ಕಮ್ಮಚ್ಚಿ(ಅಮೃತ), ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಸೀಬಿನಕೆರೆ, ಸರ್ಕಾರಿ ಹಿ.ಪ್ರಾ.ಶಾಲೆ ದುರ್ವಾಸಪುರ, ಮುಳಬಾಗಿಲು ಗ್ರಾ.ಪಂ ಇಲ್ಲಿ ಸಖಿ ಮತಗಟ್ಟೆ, ಸರ್ಕರಿ ಹಿರಿಯ ಪ್ರಾಥಮಿಕ ಶಾಲೆ ಬೊಬ್ಬಿ ಇಲ್ಲಿ ಪಿಡಬ್ಲ್ಯುಡಿ, ಸರ್ಕಾರಿ ಹಿ.ಪ್ರಾ.ಬಾಲಕಿಯರ ಶಾಲೆ ಅಜಾದ್ ರಸ್ತೆ ಇಲ್ಲಿ ಎತ್ನಿಕ್ ಮತಗಟ್ಟೆ ಸ್ಥಾಪಿಸಲಾಗಿದೆ.

ಶಿಕಾರಿಪುರದ ಸರ್ಕಾರಿ ಮಾದರಿ ಹಿ.ಪ್ರಾ ಹೆಣ್ಣು ಮಕ್ಕಳ ಶಾಲೆ ಜಯಶ್ರೀ ಟಾಕೀಸ್ ಎದುರು ಶಿಕಾರಿಪುರ, ಸರ್ಕಾರಿ ಹಿ.ಪ್ರಾ.ಶಾಲೆ ಬೆಲವಂತಕೊಪ್ಪ ಇಲ್ಲಿ ಸಖಿ, ಸರ್ಕಾರಿ ಪ್ರೌ.ಶಾಲೆ ಹಾರೋಗೊಪ್ಪ ಇಲ್ಲಿ ಪಿಡಬ್ಲ್ಯುಡಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಟ್ಟೆಹಳ್ಳಿಯಲ್ಲಿ ಎತ್ನಿಕ್ ಮತಗಟ್ಟೆ ಸ್ಥಾಪಿಸಲಾಗಿದೆ.

ಸೊರಬದ ಸರ್ಕಾರಿ ಹಿರಿಯ ಪ್ರಾ.ಬಾಲಕಿಯರ ಶಾಲೆ ಆನವಟ್ಟಿ, ಸರ್ಕಾರಿ ಉರ್ದು ಹಿ.ಪ್ರಾ.ಶಾಲೆ ಚಿಕ್ಕಪೇಟೆ, ಸರ್ಕಾರಿ ಮಾದರಿ ಹಿ.ಪ್ರಾ.ಶಾಲೆ ಹಳೇಸೊರಬ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ರಾಘವೇಂದ್ರ ಬಡಾವಣೆ, ಸೊರಬ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಗ್ವೆ ಇಲ್ಲಿ ಸಖಿ , ಸರ್ಕಾರಿ ಹಿ.ಪ್ರಾ.ಶಾಲೆ ಶಕುನವಳ್ಳಿ ಇಲ್ಲಿ ಪಿಡಬ್ಲ್ಯುಡಿ, ಸರ್ಕಾರಿ ಪ.ಪೂ ಕಾಲೇಜು ಸೊರಬ ಇಲ್ಲಿ ಎತ್ನಿಕ್ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.

ಸಾಗರದ ಸರ್ಕಾರಿ ಸಿದ್ದೇಶ್ವರ ಹಿ.ಪ್ರಾ.ಶಾಲೆ, ಸರ್ಕಾರಿ ಹಿ.ಪ್ರಾ.ಬಾಲಕಿಯರ ಶಾಲೆ, ಎಸ್‍ವಿಪಿ ಕಾಲೋನಿ, ಗಾಂಧಿನಗರ, ಬೆಲಳಮಕ್ಕಿ ಇಲ್ಲಿ ಸಖಿ, ಭಾರತಿ ಹಿ.ಪ್ರಾ.ಶಾಲೆ ಕೆಳದಿ ಹಮ್ಲೆಟ್ ಬಂಡಗದ್ದೆ, ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗವಟೂರು ಇಲ್ಲಿ ಪಿಡಬ್ಲ್ಯುಡಿ ಹಾಗೂ ಕೆಪಿಸಿಎಲ್ ಹಿ.ಪ್ರಾ.ಶಾಲೆ ಜೋಗ, ಸರ್ಕಾರಿ ಹಿ.ಪ್ರಾ.ಶಾಲೆ ನಿಟ್ಟೂರು ಇಲ್ಲಿ ಎತ್ನಿಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಜಿಲ್ಲೆಯಲ್ಲಿ 275 ಕ್ರಿಟಿಕಲ್ ಮತ್ತು 127 ದುರ್ಬಲ ಮತಗಟ್ಟೆಗಳು ಇವೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ಸಮುದಾಯಗಳ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸುವ ಉದ್ದೇಶವಿದೆ – ಮಧು ಬಂಗಾರಪ್ಪ

Madhu Bangarappa ರಾಜ್ಯದಲ್ಲಿನ ವಿವಿಧ ಜಾತಿ ಜನಾಂಗಗಳ, ಅದರಲ್ಲೂ ಮುಖ್ಯವಾಗಿ ಹಿಂದುಳಿದ...

DK Shivakumar ಎತ್ತಿನಹೊಳೆ ಯೋಜನೆ ಕಾಮಗಾರಿ‌ ಪರಿಶೀಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

DK Shivakumar ಎತ್ತಿನ ಹೊಳೆ ಯೋಜನೆಯ ಮೂಲಕ ಕುಡಿಯುವ ನೀರನ್ನು ಬರಪೀಡಿತ...

Royal English Medium School ರಾಯಲ್ ಡೈಮಂಡ್ ಶಾಲೆಯಲ್ಲಿ‌ ನಿತ್ಯ ಯೋಗ ಮಾಡುವ ಸಂಕಲ್ಪ ಸ್ವೀಕಾರ

Royal English Medium School ಶಿವಮೊಗ್ಗ ನಗರದ ಹೆಸರಾಂತ ವಿದ್ಯಾಸಂಸ್ಥೆಯಲ್ಲಿ ಒಂದಾದ...